ಮುಂಡಗೋಡು: ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ವಿಧಾನಸಭಾ ಕ್ಷೇತ್ರದಲ್ಲಿ (Karnataka Election 2023) ಕಾಂಗ್ರೆಸ್ ಪಕ್ಷವು ಎ.ಎಸ್.ಪಾಟೀಲ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದೆ. ಈ ವಿಚಾರ ಹೊರಬೀಳುತ್ತಿದ್ದಂತೆಯೇ ಪಾಟೀಲ ಅವರ ಅಭಿಮಾನ ಬಳಗ ಹಾಗೂ ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಿಸಿದರು.
ಇದನ್ನೂ ಓದಿ: Yellapur News: ಬೈಕ್‌ನಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 21 ಲೀಟರ್ ಮದ್ಯ ವಶ
ಈ ಬಾರಿ ಚುನಾವಣೆಗೆ ಸ್ಪರ್ಧಿಸಲು ಕ್ಷೇತ್ರದಲ್ಲಿ ಶ್ರೀನಿವಾಸ್ ಭಟ್ ಧಾತ್ರಿ, ಎ.ಎಸ್.ಪಾಟೀಲ್, ಡಿ.ಕೆ.ಶಿವಕುಮಾರ ಅಭಿಮಾನಿ ಬಳಗದ ಜಿಲ್ಲಾಧ್ಯಕ್ಷ ಲಕ್ಷ್ಮಣ ಬನ್ನೋಡೆ ಮತ್ತು ಮರಿಯೋಜಿ ರಾವ್ ಸೇರಿ ನಾಲ್ವರು ಟಿಕೆಟ್ ಆಕಾಂಕ್ಷಿಗಳಾಗಿದ್ದರು. ಕಾಂಗ್ರೆಸ್ ನಡೆಸಿದ ಆಂತರಿಕ ಸಮೀಕ್ಷೆಯಲ್ಲಿ ಪಿ.ಎಸ್.ಪಾಟೀಲರ ಪರ ಜನ ಬೆಂಬಲ ದೊರೆತ ಹಿನ್ನೆಲೆ ಅವರಿಗೆ ಪಕ್ಷ ಟಿಕೆಟ್ ನೀಡಿದೆ.
ವಿ.ಎಸ್.ಪಾಟೀಲ ಹಾಗೂ ಶ್ರೀನಿವಾಸ್ ಭಟ್ ಧಾತ್ರಿ ಅವರು ಬಿಜೆಪಿ ತೊರೆದು ಒಂದೇ ದಿನ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ವಿ.ಎಸ್.ಪಾಟೀಲ ಮತ್ತು ಶ್ರೀನಿವಾಸ ಧಾತ್ರಿ ನಡುವೆ ಟಿಕೆಟ್ ಪೈಪೋಟಿ ನಡೆದಿತ್ತು. ಧಾತ್ರಿ ಅವರಿಗೆ ಹಿರಿಯ ಮುಖಂಡ ದೇಶಪಾಂಡೆ ಬೆಂಬಲ ನೀಡಿದ್ದರು ಎನ್ನಲಾಗಿದೆ. ಆದರೆ ಪಕ್ಷ ನಡೆಸಿದ ಆಂತರಿಕ ಸಮೀಕ್ಷೆಯಲ್ಲಿ ಪಾಟೀಲರೇ ಮುಂದೆ ಇದ್ದಿದ್ದರಿಂದ ಕೊನೆ ಗಳಿಗೆಯಲ್ಲಿ ದೇಶಪಾಂಡೆ ಅವರು ಸಹ ಇವರನ್ನೇ ಬೆಂಬಲಿಸಿದರು ಎನ್ನಲಾಗಿದೆ. ಈಗಾಗಲೇ ಕ್ಷೇತ್ರದಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡು ಪಕ್ಷದ ಸಂಘಟನೆಗೆ ಇಳಿದಿರುವ ಎ.ಎಸ್.ಪಾಟೀಲ ಹಾಗೂ ಅವರ ಅಭಿಮಾನ ಬಳಗಕ್ಕೆ ಟಿಕೆಟ್ ಘೋಷಣೆ ಸಂತಸ ತಂದಿದೆ. ಗುರುವಾರ ಬೆಂಬಲಿಗರು ವಿಜಯೋತ್ಸವ ರೀತಿಯಲ್ಲಿ ಸಂಭ್ರಮಿಸಿದರು.
ಇದನ್ನೂ ಓದಿ: Documents Digitalization: ಶ್ರೀನಿವಾಸ್ ಹೆಬ್ಬಾರ್ ಮತ್ತೊಂದು ಸಾಹಸ; ಶಿರಸಿ ಉಪ ವಿಭಾಗದ ದಾಖಲೆ ಸಂಪೂರ್ಣ ಡಿಜಿಟಲೀಕರಣ
“ವಿ.ಎಸ್.ಪಾಟೀಲರಿಗೆ ಟಿಕೆಟ್ ಘೋಷಿಸಿದ ಹೈಕಮಾಂಡ್ ನಿರ್ಧಾರದಿಂದ ಪಕ್ಷಕ್ಕೆ ಇನ್ನು ಹೆಚ್ಚು ಬಲ ಬಂದಂತಾಗಿದೆ. ಉಳಿದ ಆಕಾಂಕ್ಷಿಗಳು ಸಹ ಹೈಕಮಾಂಡ್ ತೀರ್ಮಾನಕ್ಕೆ ಬದ್ಧರಾಗಿದ್ದಾರೆ. ಕ್ಷೇತ್ರದಲ್ಲಿ ಪಕ್ಷಕ್ಕೆ ಉತ್ತಮ ವಾತಾವರಣ ಇದೆ. ನಾವೆಲ್ಲರೂ ಸೇರಿ ಪಕ್ಷವನ್ನು ಗೆಲ್ಲಿಸುತ್ತೇವೆ” ಎಂದು ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜ್ಞಾನದೇವ ಗುಡಿಯಾಳ ಹೇಳಿದರು.