ಕಾರವಾರ: ಗೂಡಿನ ಜೇನು ನೊಣಗಳು ದಾಳಿ ನಡೆಸಿದ್ದರಿಂದ ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ್ ಅವರು (Bheemanna Naik) ಸೇರಿ ಹಲವರು ಗಾಯಗೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ನಡೆದಿದೆ. ನಗರದ ಕೆಂಗ್ರೆ ಹೊಳೆಯಲ್ಲಿ ನೀರಿನ ಪ್ರಮಾಣ ವೀಕ್ಷಣೆಗೆ ತೆರಳಿದ್ದ ವೇಳೆ ಜೇನು ನೋಣಗಳು ದಾಳಿ ನಡೆಸಿವೆ.
ಕೆಂಗ್ರೆ ಹೊಳೆಯಲ್ಲಿ ನೀರಿನ ಪ್ರಮಾಣ ವೀಕ್ಷಣೆಗೆ ನಗರಸಭೆ ಪೌರಾಯುಕ್ತ ಕಾಂತರಾಜ ಜತೆ ಶಾಸಕ ಬುಧವಾರ ತೆರಳಿದ್ದರು. ಈ ವೇಳೆ ಸಮೀಪದಲ್ಲಿದ್ದ ಗೂಡಿನ ಜೇನು ನೊಣಗಳು ದಾಳಿ ನಡೆಸಿದ್ದರಿಂದ ಶಾಸಕ ಭೀಮಣ್ಣ ನಾಯ್ಕ್, ಪೌರಾಯುಕ್ತ ಕಾಂತರಾಜ, ಸದಸ್ಯ ಖಾದರ್ ಆನವಟ್ಟಿ ಮತ್ತಿತರರು ಗಾಯಗೊಂಡಿದ್ದಾರೆ. ಟಿಎಸ್‌ಎಸ್ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ | Prajwal Revanna Case: ಎಚ್‌ಡಿಕೆ ಕಿಂಗ್ ಆಫ್ ಬ್ಲ್ಯಾಕ್‌ಮೇಲ್; ತಿರುಗಿಬಿದ್ದ ಡಿ.ಕೆ. ಶಿವಕುಮಾರ್!
ಜೇನುದಾಳಿಯಿಂದ ಶಾಸಕ ಭೀಮಣ್ಣ ನಾಯ್ಕ್ ಅವರು ತೀವ್ರವಾಗಿ ಗಾಯಗೊಂಡಿದ್ದು, ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ನಗರಸಭೆ ಸದಸ್ಯ ಪ್ರದೀಪ ಶೆಟ್ಟಿ ಮಾಹಿತಿ ನೀಡಿದ್ದಾರೆ.