Site icon Vistara News

Suicide Case | ಪುಟ್ಟ ಕಂದನ ಜತೆ ಆತ್ಮಹತ್ಯೆಗೆ ಶರಣಾದ ತಾಯಿ

ಕಾರವಾರ: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಗೃಹಿಣಿಯೊಬ್ಬರು 2 ವರ್ಷದ ಮಗುವಿನ ಸಮೇತ ಬಾವಿಗೆ ಹಾರಿ ಆತ್ಮಹತ್ಯೆ [Suicide Case] ಮಾಡಿಕೊಂಡಿರುವ ಪ್ರಕರಣ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ನಡೆದಿದೆ.

ಬಾವಿಯಲ್ಲಿ ಭಾರಿ ಶಬ್ಧ ಕೇಳುತ್ತಿದ್ದಂತೆ ತಕ್ಷಣ ಅಕ್ಕಪಕ್ಕದವರು ಓಡಿ ಬಂದು ನೋಡಿದ್ದಾರೆ. ಈ ವೇಳೆ ತಾಯಿ-ಮಗು ಬಾವಿಗೆ ಹಾರಿರುವುದು ಕಂಡು ಇಬ್ಬರನ್ನೂ ರಕ್ಷಿಸಲು ಮುಂದಾಗಲಾಗಿದೆ. ಆದರೆ, ರಕ್ಷಣಾ ಕಾರ್ಯ ಮಾಡುವಷ್ಟರಲ್ಲಿ ಮಗು ಮತ್ತು ತಾಯಿ ನೀರಿನಲ್ಲಿ ಉಸಿರುಗಟ್ಟಿ ಮೃತಪಟ್ಟಿದ್ದಾರೆ.

ಹೊನ್ನಾವರದ ಜಲವಳ್ಳಿ ಗ್ರಾಮದ ಲಲಿತಾ ಮಂಜುನಾಥ ನಾಯ್ಕ ಮೃತ ಮಹಿಳೆಯಾಗಿದ್ದಾರೆ. ಅವರು ತಮ್ಮ 2 ವರ್ಷದ ಮಗಳು ಮಾನಸಳನ್ನೂ ಹೊತ್ತುಕೊಂಡು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಹೊನ್ನಾವರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ | ತಮಿಳುನಾಡಿನಲ್ಲಿ ಮತ್ತೊಬ್ಬ ಪಿಯು ವಿದ್ಯಾರ್ಥಿನಿ ನಿಗೂಢ ಸಾವು, ಆತ್ಮಹತ್ಯೆ ಶಂಕೆ

Exit mobile version