Site icon Vistara News

Murder Case : ಟಿಪ್ಪರ್‌ ಹಾಯಿಸಿ ಸ್ನೇಹಿತನ ಕೊಲೆ ಯತ್ನ; ಆದರೆ ಸತ್ತಿದ್ದು ಇನ್ಯಾರೋ!

Accused Vinayak Bhat

ಕಾರವಾರ: ಇಬ್ಬರು ಯುವಕರ ನಡುವಿನ ಜಗಳ ದ್ವೇಷಕ್ಕೆ (Rivarly between Friends) ತಿರುಗಿ ಕೊಲೆ ಮಾಡುವ (Murder Case) ಹಂತವನ್ನು ತಲುಪಿದೆ. ಆದರೆ, ಸಾವು ಕಂಡದ್ದು ಮಾತ್ರ ಇನ್ಯಾರೋ? ಇಂಥಹುದೊಂದು ಘಟನೆ ನಡೆದಿದ್ದು ಉತ್ತರ ಕನ್ನಡ ಜಿಲ್ಲೆಯ (Uttara Kannada News) ಹೊನ್ನಾವರದ ಅರೆಯಂಗಡಿ ಬಳಿ. ಇಲ್ಲಿನ ಯುವಕನೊಬ್ಬ ತನ್ನ ಸ್ನೇಹಿತನನ್ನು ಕೊಲ್ಲಲೆಂದು ಆತ ಪ್ರಯಾಣಿಸುತ್ತಿದ್ದ ಆಟೋ ರಿಕ್ಷಾದ ಮೇಲೆ ಟಿಪ್ಪರ್‌ (Tipper Rams into Auto Rickshaw) ಹಾಯಿಸಿದ್ದಾನೆ. ಆದರೆ, ಸತ್ತಿದ್ದು ಮಾತ್ರ ಅಮಾಯಕನಾದ ಅಟೋ ಚಾಲಕ.

ವಿನಾಯಕ ಭಟ್‌ ಎಂಬಾತನಿಗೂ ಕೇಶವ ನಾಯ್ಕ ಮತ್ತು ವಸಂತ ನಾಯ್ಕ ಎಂಬವರಿಗೂ ಹಣಕಾಸಿನ ವಿಚಾರಕ್ಕೆ ಜಗಳ ಉಂಟಾಗಿತ್ತು. ಹೀಗಾಗಿ ಇಬ್ಬರ ಮಧ್ಯೆ ದ್ವೇಷ ಬೆಳೆದಿತ್ತು. ಮಂಗಳವಾರ ರಾತ್ರಿ ಕೇಶವ ಮತ್ತು ವಸಂತ ಅವರು ಆಟೋ ಒಂದರ ಬಳಿ ನಿಂತಿದ್ದರು. ಆಗ ಅವರನ್ನು ಕಂಡವನೇ ವಿನಾಯಕ ತಾನು ಚಲಾಯಿಸುತ್ತಿದ್ದ ಟಿಪ್ಪರನ್ನು ಅವರ ಮೇಲೆ ಹಾಯಿಸಿದ್ದ. ಆದರೆ, ಅಲ್ಲಿ ಕೇಶವ ಮತ್ತು ವಸಂತನ ಜತೆಗೆ ಆಟೋ ಚಾಲಕ ಓಲ್ವಿನ್‌ ಕೂಡಾ ನಿಂತಿದ್ದರು.

ವಿನಾಯಕ ಭಟ್‌ ಹಾಯಿಸಿದ ಟಿಪ್ಪರ್‌ ಆಲ್ವಿನ್‌, ಕೇಶವ ನಾಯ್ಕ್‌ ಮತ್ತು ವಸಂತ ನಾಯ್ಕ್‌ ಗೆ ಅಪ್ಪಳಿಸಿದೆ. ಈ ವೇಳೆ ಓಲ್ವಿನ್‌ ಅವರಿಗೆ ಅದು ಸರಿಯಾಗಿ ಗುದ್ದಿದ್ದು ತಲೆಗೆ ಗಂಭೀರವಾಗಿ ಗಾಯವಾಗಿದೆ. ಮೂವರೂ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರಲ್ಲಿ ಓಲ್ವಿನ್‌ ಮಾತ್ರ ಬದುಕುಳಿಯಲಿಲ್ಲ.

ಸಿಟ್ಟಿನ ಭರದಲ್ಲಿ ಅಮಾಯಕನನ್ನು ಬಲಿ ಪಡೆದ ಆರೋಪಿ ವಿನಾಯಕ ಭಟ್ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ. ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : Murder Case : ಮೊಮ್ಮಗನಿಂದಲೇ ತಾತನ ಬರ್ಬರ ಹತ್ಯೆ!

ಪ್ರಿನ್ಸಿಪಾಲ್‌ ಕಿರುಕುಳ ಆರೋಪ: ಬೆಂಕಿ ಹಚ್ಚಿಕೊಂಡು ವಿದ್ಯಾರ್ಥಿ ಆತ್ಮಹತ್ಯೆ

ಹಾವೇರಿ: ಪ್ರಥಮ ಪಿಯುಸಿ ವಿದ್ಯಾರ್ಥಿಯೊಬ್ಬ (First PU Student) ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ (Self Immolation) ಮಾಡಿಕೊಂಡ (Student death) ಭೀಕರ ಘಟನೆ ಹಾವೇರಿ ಜಿಲ್ಲೆಯ (Haveri News) ಹಾನಗಲ್ ತಾಲೂಕಿನ ಡೊಳ್ಳೆಶ್ವರ ಗ್ರಾಮದಲ್ಲಿ ನಡೆದಿದೆ. ಇದಕ್ಕೆ ಕಾಲೇಜಿನ ಪ್ರಿನ್ಸಿಪಾಲ್‌ ಅವರ ಕಿರುಕುಳವೇ ಕಾರಣ ಎಂದು ಮನೆಯವರು ಆರೋಪಿಸಿದ್ದಾರೆ.

ಹಾನಗಲ್ ಪಟ್ಟಣದ ಎನ್ ಸಿಜೆಸಿ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಯಾಗಿರುವ ಆದಿತ್ಯ ರಘುವೀರ ಚವ್ಹಾಣ (16) ಆತ್ಮಹತ್ಯೆ ಮಾಡಿಕೊಂಡವನು. ಆತ ಮಂಗಳವಾರ ಸಂಜೆ ತನ್ನ ಮನೆಯಲ್ಲೇ ಪೆಟ್ರೋಲ್‌ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆಯಾದರೂ ಆತ ಬದುಕುಳಿಯಲಿಲ್ಲ.

ಆದಿತ್ಯ ಎನ್ ಸಿಜೆಸಿ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಅಧ್ಯಯನ ಮಾಡುತ್ತಿದ್ದ. ಆತ ಪ್ರಾಂಶುಪಾಲರ ಕಿರುಕುಳ ಸಹಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪಾಲಕರು ಆರೋಪಿಸಿದ್ದಾರೆ. ಪ್ರಾಂಶುಪಾಲೆ ಅನಿತಾ ಹೊಸಮನಿ ಅವರು ಕಿರುಕುಳ ನೀಡಿದ್ದಾರೆ ಎನ್ನುವುದು ಮನೆಯವರ ಆರೋಪ.

ಅದಿತ್ಯನಿಗೆ ಪ್ರಿನ್ಸಿಪಾಲ್‌ ಬೈದಿದ್ದು, ಅದರಿಂದ ನೋವನುಭವಿಸಿ ಆತ ಪ್ರಾಣ ಕಳೆದುಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ. ಪ್ರಿನ್ಸಿಪಾಲರು ಆದಿತ್ಯನಿಗೆ ಮಾತ್ರವಲ್ಲ, ಹಲವರಿಗೆ ಇದೇ ರೀತಿ ಅಪಮಾನ ಮಾಡಿದ್ದಾರೆ ಎಂದು ಮನೆಯವರು ಹೇಳುತ್ತಾರೆ.

ಈ ನಡುವೆ ಆದಿತ್ಯ ಕಾಲೇಜಿಗೆ ಸರಿಯಾಗಿ ಹೋಗುತ್ತಿರಲಿಲ್ಲ, ಇದಕ್ಕಾಗಿ ಪ್ರಿನ್ಸಿಪಾಲರು ಕರೆದು ಬುದ್ಧಿ ಹೇಳಿದ್ದಾರೆ. ಇದನ್ನೇ ಇಟ್ಟುಕೊಂಡು ಆತ ಪ್ರಾಣ ಕಳೆದುಕೊಂಡಿದ್ದಾನೆ ಎಂದು ಕೂಡಾ ಹೇಳಲಾಗುತ್ತಿದೆ.

ಮನೆಯಲ್ಲಿ ಬೆಂಕಿ ಹಚ್ಚಿಕೊಂಡು ಸುಟ್ಟು ಹೋದ ಆದಿತ್ಯನನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅಷ್ಟು ಹೊತ್ತಿಗಾಗಲೇ ದೇಹ ಸಂಪೂರ್ಣ ಸುಟ್ಟು ಹೋಗಿದ್ದರಿಂದ ಆತ ಬದುಕುಳಿಯಲಿಲ್ಲ ಎನ್ನಲಾಗಿದೆ.

ಹಾನಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆಸ್ಪತ್ರೆಯಲ್ಲಿರುವಾಗಲೇ ತನ್ನ ಸಾವಿಗೆ ಸಂಬಂಧಿಸಿ ಆದಿತ್ಯ ಮಾತನಾಡಿರುವ ವಿಡಿಯೋಗ ಈ ಜಾಲತಾಣದಲ್ಲಿ ಹರಿದಾಡುತ್ತಿದೆ.

Exit mobile version