Site icon Vistara News

Rain News | ಮಳೆ ಅನಾಹುತಕ್ಕೆ ಮುಂದುವರಿದ ಸಾವು-ನೋವು: ಮನೆ ಕುಸಿದು ಕೂಲಿ ಕಾರ್ಮಿಕ ಸಾವು

ಮನೆ ಕುಸಿತ

ಬೆಂಗಳೂರು: ಧಾರಕಾರವಾಗಿ ಸುರಿಯುತ್ತಿರುವ ಮಳೆ (Rain News) ನಾನಾ ಅವಾಂತರವನ್ನು ಸೃಷ್ಟಿ ಮಾಡಿದ್ದು, ಜನರ ಸಾವು-ನೋವಿಗೆ ಕಾರಣವಾಗಿದೆ. ಶಿವಮೊಗ್ಗದ ಸೊರಬ ತಾಲೂಕಿನಲ್ಲಿ ಮಳೆಯಿಂದ ತಪ್ಪಿಸಿಕೊಳ್ಳಲು ವಾಸವಿರದ ಮನೆಯೊಂದರ ಬಳಿ ಅಶೋಕ್‌ (೩೨) ಎಂಬುವರು ನಿಂತಿದ್ದಾಗ ದಿಢೀರ್‌ ಮನೆ ಕುಸಿದಿದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಕೆಲವು ವರ್ಷಗಳ ಹಿಂದೆ ಈತನ ತಂದೆ, ತಾಯಿ ಅನಾರೋಗ್ಯದಿಂದ ನಿಧನರಾಗಿದ್ದರು. ಹೀಗಾಗಿ ಅದೇ ಗ್ರಾಮದ ಅವರ ಸೋದರತ್ತೆ ಮನೆಯಲ್ಲಿ ನೆಲೆಸಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದ ಅಶೋಕ್‌ ಕೂಲಿ ಮುಗಿಸಿ ಮನೆಗೆ ಬರುತ್ತಿರುವ ವೇಳೆ ಈ ದುರ್ಘಟನೆ ನಡೆದಿದೆ.

ಅದೇ ಸೊರಬ ತಾಲೂಕಿನ ಕತವಾಯಿ ಗ್ರಾಮದಲ್ಲಿ ಭಾರಿ ಗಾಳಿ ಮಳೆಗೆ ಮನೆ ಮೇಲೆ ಮರಗಳು ಬಿದ್ದಿವೆ. ಬೃಹತ್ ಹುಣಸೆಮರ, ಎರಡು ತೆಂಗಿನ ಮರ ಮನೆ ಮೇಲೆ ಬಿದ್ದ ಪರಿಣಾಮ ಮನೆಯಲ್ಲಿದ್ದ ಕಾಮಾಕ್ಷಮ್ಮ ತಿಮ್ಮಪ್ಪ ಹಾಗೂ ಅವರ ಪುತ್ರ ದೇವರಾಜ್ ತಿಮ್ಮಪ್ಪ ಅವರಿಗೆ ಗಂಭೀರ ಗಾಯಗಳಾಗಿವೆ. ಇಬ್ಬರನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ | ಹೂ ಕಣಿವೆ: ಭಾರಿ ಮಳೆ, ಭೂಕುಸಿತ, ಚಾರಣ ಪುನರಾರಂಭ?

ಹೊಳೆಯಲ್ಲಿ ಸಿಕ್ಕ ಮೃತದೇಹ

ಉತ್ತರ ಕನ್ನಡ ಜಿಲ್ಲೆಯ ತಾರೇಸರ ಗ್ರಾಮದ ಪರಮೇಶ್ವರ ಕೃಷ್ಣಪ್ಪ ಹೆಗಡೆ (62) ಎಂಬುವವರು ಹೊಳೆಯಲ್ಲಿ ಕೊಚ್ಚಿ ಹೋಗಿದ್ದು, ಮೃತದೇಹ ತಾರೇಸರ ಹೊಳೆಯಲ್ಲಿ ದೊರೆತಿದೆ. ಇನ್ನು ಹೇರವಳ್ಳಿ ಪಾಂಡುರಂಗ ಮಡಿವಾಳ ವಾಸದ ಕಚ್ಚಾ ಮನೆಯ ಗೋಡೆ( ಕಡಿಮಾಡು) ಕುಸಿದು ಅಂದಾಜು 30,000 ರೂ. ಹಾನಿಯಾಗಿದೆ. ಮುಗದೂರ ಗ್ರಾಮದ ಹಿರೇಮಗ್ಗಿಯ ಬಸವೇಶ್ವರ ಚೌಡಗೊಂಡ ಎಂಬುವರು ವಾಸವಿರುವ ಕಚ್ಚಾ ಮನೆ ಗೋಡೆ ಹಾಗೂ ಚಾವಣಿ ಕುಸಿದು ಅಂದಾಜು 60,000 ರೂ. ಹಾನಿಯಾಗಿರುವ ವರದಿಯಾಗಿದೆ. ಮಳೆಹಾನಿ ಬಗ್ಗೆ ನೋಡೆಲ್ ಅಧಿಕಾರಿಗಳು, ಗ್ರಾಮ ಲೆಕ್ಕಿಗರು ಹಾನಿಯಾದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ | Rain News | ಧಾರಾಕಾರ ಮಳೆಗೆ ಚಿಕ್ಕಮಗಳೂರಿನ ಹೆದ್ದಾರಿಯೇ ಕೊಚ್ಚಿ ಹೋಯ್ತು!

Exit mobile version