Site icon Vistara News

Rama Mandir : ಬಾಬ್ರಿ ಮಸೀದಿ ಸ್ಟೇಟಸ್‌ ಹಾಕಿ ಪ್ರಚೋದನೆ; ಇಬ್ಬರು ಮುಸ್ಲಿಂ ಯುವಕರ ಮೇಲೆ ಕೇಸ್‌

Green flag on Ayodhya Mandir

ಕಾರವಾರ/ಧಾರವಾಡ : ರಾಮ ಮಂದಿರ ಉದ್ಘಾಟನೆಯ (Rama Mandir Inauguration) ಸಂದರ್ಭದಲ್ಲಿ ಜಾಲತಾಣದ ಸ್ಟೇಟಸ್‌ನಲ್ಲಿ (Social Media Status) ಬಾಬ್ರಿ ಮಸೀದಿಯ (Babri Masjid) ಸ್ಟೇಟಸ್‌ ಹಾಕಿ ಕೋಮು ಪ್ರಚೋದನೆ (Communa Hatred) ಮಾಡಿದ ಆರೋಪದಲ್ಲಿ ಇಬ್ಬರು ಯುವಕರ ಮೇಲೆ ಪ್ರಕರಣ ದಾಖಲಾಗಿದೆ.

ಉತ್ತರಕನ್ನಡ ಜಿಲ್ಲೆಯ ಅಂಕೋಲಾ ಪಟ್ಟಣ ಹುಲಿದೇವರವಾಡ ನಿವಾಸಿ ಜಾಫರ್ ಎಂಬಾತ ಇನ್‌ಸ್ಟಾಗ್ರಾಮ್‌ನಲ್ಲಿ ಬಾಬ್ರಿ ಮಸೀದಿ ಫೋಟೋ ಹಾಕಿ ಪ್ರಚೋದನಕಾರಿ ಬರಹ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ. ಹಿಂದೂಗಳ ಭಾವನೆಗೆ ಧಕ್ಕೆ ತರುವಂತೆ ಇನ್‌ಸ್ಟಾಗ್ರಾಮ್ ಸ್ಟೇಟಸ್ ಹಾಕಿದ್ದ ಯುವಕನ ವಿರುದ್ಧ ಆಕ್ರೋಶಗೊಂಡ ಸ್ಥಳೀಯರು ಪೊಲೀಸ್ ಠಾಣೆ ಎದುರು ಜಮಾಯಿಸಿದ್ದಾರೆ ಮತ್ತು ಯುವಕನ‌ ಬಂಧನಕ್ಕೆ ಒತ್ತಾಯ ಮಾಡಿದ್ದಾರೆ.

ಕಳೆದೆರಡು ದಿನಗಳ ಹಿಂದೆ ಕಾರವಾರದ ಸದಾಶಿವಗಡ ಯುವಕ ಹಾಕಿದ್ದ ಸಂದೇಶವನ್ನೇ ಈತ ಮತ್ತೆ ಪೋಸ್ಟ್‌ ಮಾಡಿದ್ದಾನೆ ಎನ್ನಲಾಗಿದೆ. ಈತ ಉದ್ರೇಕಕಾರಿ ಸಂದೇಶ ಹರಿಬಿಟ್ಟು ಕೋಮು ದ್ವೇಷ ಮೂಡಿಸುವ ಯತ್ನ ಮಾಡಿದ್ದಾನೆ ಎನ್ನುವುದು ಹಿಂದು ಯುವಕರ ಆಕ್ರೋಶ. ಈ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಯುವಕನನ್ನು ವಶಕ್ಕೆ ಪಡೆದಿದ್ದಾರೆ. ಈತನಿಂದ ಸಾರ್ವಜನಿಕವಾಗಿ ಕ್ಷಮೆ ಕೇಳಿಸುವಂತೆ ಜನರು ಆಗ್ರಹಿಸಿದ್ದಾರೆ.

ರಾಮ ಮಂದಿರದ ಮೇಲೆ ಹಸಿರು ಬಾವುಟದ ಚಿತ್ರ

ಧಾರವಾಡ ತಾಲೂಕಿನ ತಡಕೋಡ ಗ್ರಾಮದ ಯುವಕನೊಬ್ಬ ರಾಮ ಮಂದಿರದ ಚಿತ್ರದ ಮೇಲೆ ಹಸಿರು ಬಾವುಟ ಸೇರಿ ಸ್ಟೇಟಸ್ ಹಾಕಿದ್ದಲ್ಲದೆ ‘ಇಸ್ಲಾಮಿಕ್ ಪವರ್ ತೋರಿಸುತ್ತೇವೆ’ ಎಂದು ಬರೆದುಕೊಂಡಿದ್ದಾನೆ.

ಸದ್ದಾಂ ಹುಸೇನ ಇಸ್ಮಾಯಿಲ್ ಸಾಬ್ ನದಾಫ್‌ ಎಂಬಾತನೇ ಈ ರೀತಿಯಾಗಿ ವಿವಾದಿತ ಚಿತ್ರ ಮತ್ತು ಬರಹ ಇರುವ ಸ್ಟೇಟಸ್‌ ಹಾಕಿದವನು. ಈತನ ವಿರುದ್ಧ ಗರಗ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಆತನನ್ನು ಬಂಧಿಸಿದ್ದಾರೆ. ಕೋಮು ಸೌಹಾರ್ದತೆಗೆ ಧಕ್ಕೆ ತರುವ ರೀತಿಯಲ್ಲಿ ಸ್ಟೇಟಸ್ ಹಾಕಿದ ಆತನನ್ನು ಈಗ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಇದನ್ನೂ ಓದಿ: Rama Mandir : ರಾಮನನ್ನು ಅಪಮಾನಿಸುವ ವಿಡಿಯೊ ಸ್ಟೇಟಸ್‌ ; ಮುಸ್ಲಿಂ ಯುವಕನ ಮೇಲೆ ಕೇಸ್‌

ಯುವಕನ ವಿರುದ್ಧ ಶ್ರೀರಾಮ ಸೇನೆ ಆಕ್ರೋಶ

ಈ ನಡುವೆ, ಶ್ರೀರಾಮ ಸೇನೆ ಈ ಯುವಕನ ವಿರುದ್ಧ ಸಿಡಿದೆದ್ದಿದೆ. ಜನವರಿ 30ರಂದು ಆತನ ಮನೆ ಇರುವ ತಡಕೋಡ ಗ್ರಾಮಕ್ಕೆ ಹೋಗಿ ಆತನಿಗೆ ಅಯೋಧ್ಯೆ ಬರುವಂತೆ ಆಮಂತ್ರ ನೀಡಲು ಮುಂದಾಗಿದೆ.

ʻʻನಾವೇ ಖರ್ಚು ಕೊಟ್ಟು ಅಯೋಧ್ಯೆಗೆ ಕರೆದುಕೊಂಡು ಹೋಗುತ್ತೇವೆ. ತಾಕತ್ತಿದ್ದರೆ ಅಲ್ಲಿನ ದೇವಸ್ಥಾನದಲ್ಲಿ ಧ್ವಜ ಹಾರಿಸು ನೋಡೋಣʼ ಎಂಬ ಸವಾಲಿನೊಂದಿಗೆ ಯುವಕನ ಮನೆಗೆ ಹೋಗಿ ಆಮಂತ್ರಣ ನೀಡಲು ಅದು ಮುಂದಾಗಿದೆ.

Exit mobile version