Site icon Vistara News

ಮೂರೂರಿನ ರಾಮಲೀಲಾ ಮೈದಾನದಲ್ಲಿ ರಾಮಕಥಾ

ಉತ್ತರ ಕನ್ನಡ: ಉತ್ತರ ಕನ್ನಡದ ಕುಮಟಾ ತಾಲ್ಲೂಕಿನ ಮೂರೂರು ಗ್ರಾಮದಲ್ಲಿ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರ ವಿಶಿಷ್ಟ ಪರಿಕಲ್ಪನೆಯ ʼರಾಮಕಥಾʼ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಲಿದೆ. ಏಪ್ರಿಲ್‌ 27 ರಿಂದ ಮೇ 1 ರವರೆಗೆ ಮೂರೂರಿನ ಪ್ರಗತಿ ವಿದ್ಯಾಲಯದ ರಾಮಲೀಲಾ ಮೈದಾನದಲ್ಲಿ ರಾಮಕಥಾ ಕಾರ್ಯಕ್ರಮ ಆಯೋಜನೆಯಾಗಿದೆ.

ರಾಮಕಥಾ ಕಾರ್ಯಕ್ರಮಕ್ಕೆ ರಾಘವೇಶ್ವರಭಾರತೀ ಶ್ರೀಗಳ ಪುರಪ್ರವೇಶ.

ಏನಿದು ರಾಮಕಥಾ?

ರಾಘವೇಶ್ವರಭಾರತೀ ಶ್ರೀಗಳ ವಿಶಿಷ್ಟ ಪರಿಕಲ್ಪನೆಯಲ್ಲಿ ಮೂಡುತ್ತಿರುವ ರಾಮಾಯಣದ ಅವಲೋಕನ. ಈ ಕಾರ್ಯಕ್ರಮದಲ್ಲಿ ಶ್ರೀಗಳ ಪ್ರವಚನ ಪ್ರಧಾನವಾಗಿರಲಿದೆ ಹಾಗೂ ರೂಪಕ, ಗೀತೆ, ನೃತ್ಯ, ಚಿತ್ರ ಮುಂತಾದ ದೃಶ್ಯ- ಶ್ರಾವ್ಯ ಕಲಾ ಮಾಧ್ಯಮಗಳ ಮೂಲಕ ವಾಲ್ಮೀಕಿ ರಾಮಾಯಣದ ಪುನರವತರಣ ನಡೆಯಲಿದೆ. ವಿವಿಧ ಸಾಂಸ್ಕೃತಿಕ ಹಾಗೂ ಪೌರಾಣಿಕ ಕಾರ್ಯಕ್ರಮಗಳ ರಸದೌತಣ ನೀಡಲು ರಾಮಕಥಾ ಕಾರ್ಯಕ್ರಮ ಸಿದ್ಧವಾಗಿದೆ.

2012ರ ಬಳಿಕ ಇದೇ ಮೊದಲ ಬಾರಿಗೆ ನಡೆಯಲಿರುವ ರಾಮಕಥಾ ಕಾರ್ಯಕ್ರಮಕ್ಕೆ ಗಣ್ಯರು, ಸಂತರು ಸೇರಿದಂತೆ 55 ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.

ಕಾರ್ಯಕ್ರಮದ ವಿವರ:

ಇದನ್ನೂ ಓದಿ: ಕಾಸರಕೋಡು ಕಡಲಲ್ಲಿ ಕಂಡು ಬಂದ ವಿಸ್ಮಯ!

Exit mobile version