Site icon Vistara News

Road Accident : ಒನ್‌ ವೇನಲ್ಲಿ ಬಂದ ಬೈಕ್‌ಗೆ ಕಾರು ಡಿಕ್ಕಿ; ಎಗರಿ ಬಿದ್ದ ಸವಾರ ಸಾವು

Car accident

ಕಾರವಾರ: ಉತ್ತರಕನ್ನಡ ಜಿಲ್ಲೆಯ ಕಾರವಾರ ನಗರ ರಾಷ್ಟ್ರೀಯ ಹೆದ್ದಾರಿ 66ರ ಸದಾಶಿವಘಡದಲ್ಲಿ ರಾಂಗ್ ಸೈಡ್‌ನಲ್ಲಿ ಬರುತ್ತಿದ್ದ ಬೈಕ್‌ಗೆ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಬೈಕ್‌ ಸವಾರ ಸ್ಥಳದಲ್ಲೇ (Road Accident) ಮೃತಪಟ್ಟಿದ್ದಾನೆ.

Car damage

ಬೈಕ್‌ ಸವಾರ ಕಾರವಾರದಿಂದ ಗೋವಾ ಕಡೆಗೆ ಓನ್ ವೇನಲ್ಲಿ ತೆರಳುತ್ತಿದ್ದ . ಗೋವಾದಿಂದ ಕಾರವಾರಕ್ಕೆ ಆಗಮಿಸುತ್ತಿದ್ದ ಕಾರು ಬೈಕ್‌ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಪರಿಣಾಮ ಬೈಕ್‌ವೊಂದು ಕಡೆ ಸವಾರ ಇನ್ನೊಂದು ಕಡೆ ಎಗರಿ ಬಿದ್ದಿದ್ದಾನೆ. ಅಪಘಾತದಲ್ಲಿ ಕಾರು ಪಲ್ಟಿಯಾಗಿ ನಜ್ಜು-ಗುಜ್ಜಾಗಿದೆ. ಕಾರಲ್ಲಿದ್ದವರು ಗಾಯಗೊಂಡಿದ್ದು, ಸ್ಥಳೀಯರು ಅವರನ್ನು ರಕ್ಷಿಸಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Car damage

ಬೈಕ್ ಸವಾರನ ನಿರ್ಲಕ್ಷ್ಯತನದಿಂದಲೇ ಈ ಅಪಘಾತ ನಡೆದಿದೆ. ಬೈಕ್‌ ಸವಾರ ಗುರುತು ಪತ್ತೆಯಾಗಿಲ್ಲ. ಸ್ಥಳಕ್ಕೆ ಚಿತ್ತಾಕುಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ.

ಇದನ್ನೂ ಓದಿ: Attibele Fire Accident : ಕಾಪಾಡಿ ಎಂದು ಕೂಗಿಟ್ಟರೂ ಪಟಾಕಿ ಕೋಟೆಯಿಂದ ಹೊರ ಬರಲಾಗದೇ ಸುಟ್ಟು ಹೋದರು!

ಕಾರಿನ ಹಿಂಬದಿಗೆ ಲಾರಿ ಡಿಕ್ಕಿ, ದಂಪತಿ ಗಂಭೀರ

ಮುಖ್ಯಮಂತ್ರಿ ಸಿದ್ದರಾಮಯ್ಯ ಬರುವ ದಾರಿಯಲ್ಲಿ ಅಪಘಾತವೊಂದು ನಡೆದಿದೆ. ಲಾರಿಯೊಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ದಂಪತಿ ಗಂಭೀರ ಗಾಯಗೊಂಡಿದ್ದಾರೆ. ಈ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಹೊಸೂರು ಹೆದ್ದಾರಿ ಕಿತ್ತಗಾನಹಳ್ಳಿ ಗೇಟ್ ಬಳಿ ನಡೆದಿದೆ.

ಅತ್ತಿಬೆಲೆ ಪಟಾಕಿ ದುರಂತದಲ್ಲಿ 14 ಮಂದಿ ಸಜೀವ ದಹನರಾಗಿದ್ದಾರೆ. ಹೀಗಾಗಿ ಸ್ಥಳ ಪರಿಶೀಲನೆ ಜತೆಗೆ ಕುಟುಂಬಸ್ಥರಿಗೆ ಸಾಂತ್ವನ ಹೇಳಲು ಸಿಎಂ ಸಿದ್ದರಾಮಯ್ಯ ಇದೇ ಹೆದ್ದಾರಿ ಮೂಲಕ ಆಗಮಿಸಲಿದ್ದಾರೆ. ಸಿಎಂ‌ ಬರುವ ದಾರಿಯಲ್ಲೆ ಕಾರಿಗೆ ಹಿಂಬದಿಯಿಂದ ಲಾರಿ ಗುದ್ದಿದೆ.

Car damage

ಇದನ್ನೂ ಓದಿ: Attibele Fire Accident : ಅತ್ತಿಬೆಲೆ ದುರಂತ; ಐವರ ವಿರುದ್ಧ ಎಫ್‌ಐಆರ್‌, ಇಬ್ಬರು ಅರೆಸ್ಟ್‌

ಲಾರಿ ವೇಗವಾಗಿ ಬಂದು ಕಾರಿನ ಹಿಂಬದಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ದಂಪತಿಗೆ ಗಂಭೀರ ಗಾಯಗೊಂಡಿದ್ದಾರೆ. ತಲೆಗೆ ತೀವ್ರ ಪೆಟ್ಟಾಗಿದ್ದು ರಕ್ತಸ್ರಾವವಾಗಿ ಒದ್ದಾಡುತ್ತಿದ್ದ ದಂಪತಿಯನ್ನು ಸ್ಥಳೀಯರು ಆಸ್ಪತ್ರೆಗೆ ರವಾನಿಸಿದ್ದಾರೆ. ಗಾಯಾಳುಗಳ ಕುರಿತು ಯಾವುದೇ ಮಾಹಿತಿ ತಿಳಿದು ಬಂದಿಲ್ಲ. ವಿಷಯ ತಿಳಿಯುತ್ತಿದ್ದಂತೆ ಕೂಡಲೇ ಸ್ಥಳಕ್ಕೆ ಹೆಬ್ಬಗೋಡಿ ಪೊಲೀಸರು ದೌಡಾಯಿಸಿದ್ದಾರೆ.

ಇತ್ತ ಕಾರು ಅಪಘಾತ ಮಾಡಿದ ಲಾರಿ ಚಾಲಕ ಪರಾರಿ ಆಗಿದ್ದಾನೆ. ಈ ಸಂಬಂಧ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ಲಾರಿ ಚಾಲಕನಿಗಾಗಿ ಹುಡುಕಾಟ ನಡೆಸಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version