Site icon Vistara News

Road Accident : ಟಾಟಾ ಏಸ್‌ ಡಿಕ್ಕಿಗೆ ಆಟೋದಿಂದ ಹಾರಿ ಬಿದ್ದ ನಾಲ್ವರು

road Accident

ಕಾರವಾರ: ಆಟೋ ಹಾಗೂ ಟಾಟಾ ಏಸ್ ನಡುವೆ ಅಪಘಾತ (Road Accident) ಸಂಭವಿಸಿದ್ದು, ಚಾಲಕ ಸೇರಿ ನಾಲ್ವರು ಗಂಭೀರ ಗಾಯಗೊಂಡಿದ್ದಾರೆ. ಉತ್ತರಕನ್ನಡ ಜಿಲ್ಲೆಯ ಭಟ್ಕಳದ ರಾಷ್ಟ್ರೀಯ ಹೆದ್ದಾರಿ 66ರ ಬೆಳಕೆ ಗ್ರಾಮದ ಬಳಿ ಈ ಅಪಘಾತ ನಡೆದಿದೆ.

Road Accident

ಗಾಯಗೊಂಡ ನಾಲ್ವರನ್ನು ಕುಂದಾಪುರ ಹಾಗೂ ಮಣಿಪಾಲ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆಯಲ್ಲಿ ಮಹಿಳೆ ಸ್ಥಿತಿ ಗಂಭೀರವಾಗಿದೆ. ಅಪಘಾತದಲ್ಲಿ ಆಟೋ ಸಂಪೂರ್ಣ ಛಿದ್ರಗೊಂಡಿದೆ. ಸ್ಥಳಕ್ಕೆ ಭಟ್ಕಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ರಸ್ತೆಯಲ್ಲೇ ಚಾಲಕರ ಕಿತ್ತಾಟ

ಕೆಎಸ್ಆರ್‌ಟಿಸಿ ಬಸ್ ಚಾಲಕ ಹಾಗೂ ಟಂಟಂ ವಾಹನ ಚಾಲಕ ನಡುರಸ್ತೆಯಲ್ಲೇ ಹೊಡೆದಾಡಿಕೊಂಡಿದ್ದಾರೆ. ಬಾಗಲಕೋಟೆ ನಗರದ ದಡ್ಡೆನ್ನವರ ಕ್ರಾಸ್‌ನಲ್ಲಿ ಘಟನೆ ನಡೆದಿದೆ. ಟಂಟಂ ಚಾಲಕನೊಬ್ಬ ಕೆಎಸ್ಆರ್‌ಟಿ ಬಸ್ ಓವರ್ ಟೇಕ್ ಮಾಡಲು ಹೋಗಿದ್ದಾನೆ ಎನ್ನಲಾಗಿದೆ. ಕಿರಿಕಿರಿ ಉಂಟು ಮಾಡಿದ್ದಕ್ಕೆ ಇಬ್ಬರ ನಡುವೆ ಮಾತಿನ ಚಕಮಕಿ ಶುರುವಾಗಿದೆ. ಈ ವೇಳೆ ಅವಾಚ್ಯ ಶಬ್ಧಗಳಿಂದ ಪರಸ್ಪರ ನಿಂದಿಸಿಕೊಂಡು ಹೊಡೆದಾಡಿಕೊಂಡಿದ್ದಾರೆ.

ಬಾಗಲಕೋಟೆ ನಗರದ ಶಹರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಹುಬ್ಬಳ್ಳಿ – ಬಾಗಲಕೋಟೆ ಬಸ್ ಚಾಲಕ ಹಾಗೂ ಟಂಟಂ ಚಾಲಕ ಪರಸ್ಪರ ಬಟ್ಟೆ ಎಳೆದಾಡಿ ಹೊಡೆದಾಡಿಕೊಂಡಿದ್ದಾರೆ. ಇವರಿಂದಾಗಿ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾದರೆ, ಇದರ ನಡುವೆ ಸಾರ್ವಜನಿಕರು ಪುಕ್ಕಟೆ ಮನರಂಜನೆಯನ್ನು ಪಡೆದುಕೊಂಡರು. ನಂತರ ಸ್ಥಳೀಯರ ಮಧ್ಯಸ್ಥಿಕೆಯಿಂದ ಜಗಳ ತಣ್ಣಗಾಗಿದೆ.

Road Accident

ಇದನ್ನೂ ಓದಿ: Road Accident: ಹೆದ್ದಾರಿಯಲ್ಲಿ ನಿಂತಿದ್ದ ಟೆಂಪೋಗೆ ಬೈಕ್‌ ಡಿಕ್ಕಿ, ಇಬ್ಬರು ಸಾವು

ಆಂಬ್ಯುಲೆನ್ಸ್‌ನಲ್ಲಿ ಕರೆದೊಯ್ಯುವಾಗ ಗುಂಡಿ ಬಿದ್ದ ರಸ್ತೆಯಲ್ಲೇ ಹೆರಿಗೆ

ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತುಂಬು ಗರ್ಭಿಣಿಯನ್ನು ಆಂಬ್ಯುಲೆನ್ಸ್‌ ಮೂಲಕ ಆಸ್ಪತ್ರೆಗೆ ರವಾನೆ ಮಾಡುತ್ತಿದ್ದರು. ಆದರೆ ಬಂಡೀಪುರದ ಗುಂಡಿ ಬಿದ್ದ ರಸ್ತೆಯಿಂದಾಗಿ ಆಸ್ಪತ್ರೆಗೆ ಕರೆದೊಯ್ಯುವ ಮುನ್ನವೇ ಮಹಿಳೆ ಮಗುವಿಗೆ ಜನ್ಮ ನೀಡಿದ್ದಾಳೆ. ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಲ್ಲಿ ಈ ಘಟನೆ ನಡೆದಿದೆ.

Road Accident

ಬಂಡೀಪುರ ಕಾಡಂಚಿನ ಕಣಿಯನಪುರ ಕಾಲನಿಯಿಂದ ಆಸ್ಪತ್ರೆಗೆ ಕರೆದೊಯ್ಯವಾಗ, ಮಾರ್ಗಮಧ್ಯದಲ್ಲಿ ಹೆರಿಗೆ ನೋವು ಕಾಣಿಕೊಂಡಿದೆ. 108 ವಾಹನ ಚಾಲಕ ಪ್ರಭುಸ್ವಾಮಿ ಹಾಗೂ ಸಹಾಯಕ ಬಂಗಾರು ನೆರವಿನಿಂದ ಅನುಶ್ರೀ ಎಂಬಾಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ನಂತರ ತಾಯಿ ಮಗುವನ್ನು ಗುಂಡ್ಲುಪೇಟೆ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ. ಸದ್ಯ ತಾಯಿ-ಮಗು ಆರೋಗ್ಯವಾಗಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version