ಬೆಂಗಳೂರು: ಮದುವೆಯಾಗುವುದಾಗಿ ನಂಬಿಸಿ ಲೈವ್ ಬ್ಯಾಂಡ್ ವಂಚಿಸಲಾಗಿದೆ ಎಂದು ಆರೋಪಿಸಿ ಯುವತಿಯೊಬ್ಬಳು ಜೆಡಿಎಸ್ ಜಿಲ್ಲಾ ಅಧ್ಯಕ್ಷನಿಗೆ ಧರ್ಮದೇಟು ಹಾಕಿದ್ದಾಳೆ.
ಉತ್ತರ ಕನ್ನಡ ಜೆಡಿಎಸ್ ಜಿಲ್ಲಾಧ್ಯಕ್ಷ ಜಿ.ಕೆ ಗೌಡ ಎಂಬವರ ಮೇಲೆ ಕೋಲ್ಕತ್ತಾ ಮೂಲದ ಯುವತಿಯಿಂದ ವಂಚನೆ ಆರೋಪ ವ್ಯಕ್ತವಾಗಿದೆ. ಮದುವೆ ಆಗುವುದಾಗಿ ಹೇಳಿ ನನ್ನನ್ನು ಲೈಂಗಿಕವಾಗಿ ಬಳಸಿಕೊಂಡು ವಂಚಿಸಲಾಗಿದೆ. ಲೈಂಗಿಕವಾಗಿ ಬಳಸಿಕೊಂಡು ಮದುವೆಯಾಗದೇ ಮೊಸ ಮಾಡುತ್ತಿದ್ದಾರೆ ಎಂದು ಯುವತಿ ಆರೋಪಿಸಿದ್ದಾಳೆ.
8 ವರ್ಷದ ಹಿಂದೆ ಲೈವ್ ಬ್ಯಾಂಡ್‌ನಲ್ಲಿ ತನ್ನನ್ನು ಪರಿಚಯ ಮಾಡಿಕೊಂಡಿದ್ದ ಜಿ.ಕೆ ಗೌಡ, ಮದುವೆಯಾಗುವುದಾಗಿ ಪುಸಲಾಯಿಸಿ ದೈಹಿಕವಾಗಿ ಬಳಸಿಕೊಂಡಿದ್ದಾನೆ. ಇದೀಗ ಮದುವೆಯಾಗು ಅಂದರೆ ಬೇರೆ ವರಸೆ ತೋರಿಸುತ್ತಿದ್ದಾನೆ. ತನ್ನ ಬಳಿ ಇಪ್ಪತ್ತು ಲಕ್ಷ ರೂಪಾಯಿ ಹಣ ತೆಗೆದುಕೊಂಡು ವಂಚಿಸಿದ್ದಾನೆ. ಅಷ್ಟೇ ಅಲ್ಲದೆ ಹಲವು ಬಾರಿ ಅಬಾರ್ಷನ್ ಮಾಡಿಸಿದ್ದಾನೆ. ಸಂಘಟನೆ ಸಹಾಯದೊಂದಿಗೆ ನ್ಯಾಯ ಕೇಳಲು ಹೋದ ವೇಳೆ ಗಲಾಟೆ ಮಾಡಿದ್ದಾನೆ. ಸ್ನೇಹಿತರಿಂದ ಫೋನ್ ಕರೆ ಮಾಡಿಸಿ ಅಸಭ್ಯವಾಗಿ ಮಾತನಾಡಿಸುತ್ತಿದ್ದಾನೆ ಎಂದ ಆರೋಪಿಸಿರುವ ಯುವತಿ, ಇವುಗಳ ಆಡಿಯೋ ರೆಕಾರ್ಡ್ ಸಮೇತ ಜಿ.ಕೆ ಗೌಡನ ಮನೆಗೆ ತೆರಳಿ ಧರ್ಮದೇಟು ಹಾಕಿದ್ದಾಳೆ. ಸದ್ಯ ಯುವತಿಯಿಂದ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದನ್ನೂ ಓದಿ: ವಂಚನೆ ಮಾಡಿ ಜಮೀನು ಗುಳುಂ ಆರೋಪ; ಮೂವರು ಮಕ್ಕಳೊಂದಿಗೆ ಮುಂಜಾನೆ 5 ಗಂಟೆಗೇ ಟವರ್ ಏರಿದ!