ನಮ್ಮೂರ ಮಂದಾರ ಹೂವೇ ಚಿತ್ರೀಕರಣದ ಸಂದರ್ಭದಲ್ಲಿ ಶಿರಸಿಗೆ ಬಂದ ಶಿವಣ್ಣ, ಇದೀಗ 25 ವರುಷಗಳ ನಂತರ ಪತ್ನಿ ಗೀತಾ ಜತೆ ಶಿರಸಿಗೆ ಬಂದಿದ್ದಾರೆ. ಶಿರಸಿಯಲ್ಲಿ ತಮ್ಮ ಆತ್ಮೀಯರೊಡನೆ ತಮ್ಮ ಬ್ಯುಸಿ ಲೈಫ್ನಲ್ಲೂ ಶಿರಸಿ ಪ್ರವಾಸಿ ತಾಣಗಳನ್ನು ವೀಕ್ಷಿಸಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
ನಮ್ಮೂರ ಮಂದಾರ ಹೂವೇ ಸಿನಿಮಾದ ನಂತರ ಸತತ 25 ವರ್ಷದ ನಂತರದಲ್ಲಿ ಶಿರಸಿಗೆ ಬಂದ ಶಿವಣ್ಣಶಿವರಾಜ್ಕುಮಾರ್ರವರ ಮನೆಯಲ್ಲಿ ಕೆಲಸ ಮಾಡಿದ್ದ ದ್ಯಾವಮ್ಮ ,ದುರಗಪ್ಪ ಕನ್ನಿ ರವರ ಯೋಗಕ್ಷೇಮ ವಿಚಾರಿಸಲು ಹಾನಗಲ್ನ ಲೂಕಿನ ಕಂಚಿನೆಗಳೂರು ಗ್ರಾಮಕ್ಕೆ ಭೇಟಿ ನೀಡಿದ ಶಿವಣ್ಣಶಿರಸಿಯ ಮಳಲಗಾಂವ್ನಲ್ಲಿ ಶಿವಣ್ಣ ಗೀತಾ ಶಿವರಾಜ್ಕುಮಾರ್ ಕುಟುಂಬದೊಂದಿಗೆ ಇದ್ದ ಸುಂದರ ಕ್ಷಣತಮ್ಮ ಪುನೀತ್ ರಾಜ್ ಕುಮಾರ್ ಅಗಲಿಕೆಯಿಂದ ಹೊರಬರಲು ಸಾಲು ಸಾಲು ಸಿನಿಮಾಗಳಲ್ಲಿ ಶಿವಣ್ಣ ಬ್ಯುಸಿಯಾಗಿದ್ದು ಅಷ್ಟೇ ಅಲ್ಲದೇ ಕಿರುತೆರೆಯ ರಿಯಾಲಿಟಿ ಶೋನತ್ತ ಕೂಡಾ ಮುಖ ಮಾಡಿದ್ದಾರೆ. ಇಷ್ಟೇಲ್ಲ ಬ್ಯುಸಿಯಿರುವ ಶಿವಣ್ಣ ಕೊಂಚ ಬಿಡುವು ಮಾಡಿಕೊಂಡು ಕಾರ್ಯಕ್ರಮವೊಂದಕ್ಕಾಗಿ ಶಿರಸಿಗೆ ಆಗಮಿಸಿದ್ದಾರೆ.ಶಿರಸಿಯಿಂದ 12 ಕಿಮೀ ದೂರ ಇರುವ ಪ್ರವಾಸಿತಾಣವಾದ ಸಹಸ್ರಲಿಂಗಕ್ಕೆ ಶಿವರಾಜ್ಕುಮಾರ್ ದಂಪತಿ ಭೇಟಿ ಕೊಟ್ಟು ಪೂಜೆ ಸಲ್ಲಿಸಿದರು.