ಶಿರಸಿ : ನಮ್ಮೂರ ಮಂದಾರ ಹೂವೇ ಸಿನಿಮಾದ ಚಿತ್ರೀಕರಣ ನಡೆದ ಶಿರಸಿಯ ತಾಣಗಳಿಗೆ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಇತ್ತೀಚೆಗೆ ಭೇಟಿ ಕೊಟ್ಟರು.
ನಮ್ಮೂರ ಮಂದಾರ ಹೂವೇ ಚಿತ್ರದ ಹೆಸರು ಕೇಳದ ಕನ್ನಡಿಗರು ಯಾರಿದ್ದಾರೆ? ಹಾಗೇ ಅದನ್ನು ನೋಡಿದ ಚಿತ್ರರಸಿಕರೂ ಬಹಳಷ್ಟು ಸಂಖ್ಯೆಯಲ್ಲಿದಾರೆ. ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ ಈ ಸಿನಿಮಾದ ಯಶಸ್ಸು ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಹಾಗೂ ಅವರ ಜೊತೆಗೆ ನಾಯಕಿಯಾಗಿ ನಟಿಸಿದ ಪ್ರೇಮಾ ಅವರನ್ನು ಇನ್ನೊಂದು ಲೆವೆಲ್‌ಗೆ ಕರೆದೊಯ್ದಿತ್ತು. ಪ್ರವಾಸಿ ತಾಣ ಯಾಣ, ಯಕ್ಷಗಾನ, ಆಹಾರ ಹೀಗೆ ಎಲ್ಲ ವೈವಿಧ್ಯಗಳನ್ನು ಕಟ್ಟಿಕೊಟ್ಟ ಈ ಚಿತ್ರ ಶಿರಸಿಯಲ್ಲಿ ಆಗ ಬ್ಲಾಕ್ ಬಸ್ಟರ್ ಎನಿಸಿಕೊಂಡಿತ್ತು. ರಮೇಶ್ ಅರವಿಂದ್, ಪ್ರೇಮ, ಶಿವರಾಜಕುಮಾರ್ ಅಭಿನಯದ ಈ ಚಿತ್ರ ಅಂದು ಸಕತ್ ಸದ್ದು ಮಾಡಿತ್ತು.
ಖಾಸಗಿ ಹೋಟೆಲ್ ಒಂದರ ಉದ್ಘಾಟನೆಗೆ ಬಂದ ಶಿವಣ್ಣ ಆ ದಿನಗಳನ್ನು ನೆನಪಿಸಿಕೊಂಡರು. 25 ವರ್ಷಗಳ ನಂತರ ಪತ್ನಿ ಗೀತಾ ಜೊತೆ ಶಿರಸಿಗೆ ಅವರು ಬಂದಿದ್ದಾರೆ.
ಇದನ್ನೂ ಓದಿ | ʼರಾಕಿ ಭಾಯ್ʼ ಬೆಸ್ಟ್ ಎಂದ ಶಿವಣ್ಣ: KGF-2 ಬಗ್ಗೆ ಶಿವರಾಜಕುಮಾರ್ ಮಾತು
ತಮ್ಮ ಪುನೀತ್ ರಾಜ್ ಕುಮಾರ್ ಅಗಲಿಕೆಯಿಂದ ಹೊರಬರಲು ಸಾಲು ಸಾಲು ಸಿನಿಮಾಗಳಲ್ಲಿ ಶಿವಣ್ಣ ಬ್ಯುಸಿಯಾಗಿದ್ದಾರೆ. ಅಷ್ಟೇ ಅಲ್ಲದೇ ಕಿರುತೆರೆಯ ರಿಯಾಲಿಟಿ ಶೋನತ್ತ ಕೂಡಾ ಮುಖ ಮಾಡಿದ್ದಾರೆ. ಇಷ್ಟೆಲ್ಲ ಕಾರ್ಯಭಾರದ ನಡುವೆ ಶಿವಣ್ಣ ಕೊಂಚ ಬಿಡುವು ಮಾಡಿಕೊಂಡು ಕಾರ್ಯಕ್ರಮವೊಂದಕ್ಕಾಗಿ ಶಿರಸಿಗೆ ಆಗಮಿಸಿದ್ದಾರೆ. ಹಾಗೆಯೇ ಶಿರಸಿಯಿಂದ 12 ಕಿಮೀ ದೂರ ಇರುವ ಪ್ರವಾಸಿತಾಣವಾದ ಸಹಸ್ರಲಿಂಗಕ್ಕೆ ಶಿವರಾಜ್‌ಕುಮಾರ್ ದಂಪತಿ ಭೇಟಿ ಕೊಟ್ಟು ಪೂಜೆ ಸಲ್ಲಿಸಿದ್ದಾರೆ.
ದಕ್ಷಿಣ ಭಾರತದ ಪ್ರಸಿದ್ಧ ಶಕ್ತಿ ಪೀಠಗಳಲ್ಲೊಂದಾದ ಶಿರಸಿಯ ಮಾರಿಕಾಂಬಾ ದೇವಸ್ಥಾನಕ್ಕೆ ಕೂಡ ಶಿವಣ್ಣ ಭೇಟಿ ನೀಡಿದ್ದು, ಗೀತಾ ಶಿವರಾಜ್ ಕುಮಾರ್ , ಕಾಂಗ್ರೆಸ್ ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ ಜೊತೆ ಪೂಜೆ ಸಲ್ಲಿಸಿದ್ದಾರೆ.
ತಮ್ಮ ಎಫ್ ಬಿ ಪೇಜ್‌ನಲ್ಲಿ ನಮ್ಮೂರ ಮಂದಾರ ಹೂವೇ ಚಲನಚಿತ್ರದ ಪೋಟೋಗಳು, ಭೇಟಿಯ ವಿಡಿಯೋ ಮೂಲಕ ಸಂತಸವನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ | ಕನ್ನಡ ಚಿತ್ರಗಳಿಗೆ ಬಂದಿವೆ ಹೊಸ OTT ಪ್ಲಾಟ್‌ಫಾರ್ಮ್