Site icon Vistara News

Sirsi News: ಸ್ವರ್ಣವಲ್ಲೀ ಮಹಾ ಸಂಸ್ಥಾನದಲ್ಲಿ ಶಿಷ್ಯ ಸ್ವೀಕಾರ ಮಹೋತ್ಸವಕ್ಕೆ‌ ಸಂಭ್ರಮದ ಚಾಲನೆ

Shishya Sweekara Mahotsav in Shri Swarnavalli Maha Samsthana matha

ಶಿರಸಿ: ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ (Shri Sonda Swarnavalli Matha) ನೂತನ ಉತ್ತರಾಧಿಕಾರಿ ಹಾಗೂ ಶಿಷ್ಯ ಸ್ವೀಕಾರ ಮಹೋತ್ಸವದ ಐದು ದಿನಗಳ ಕಾರ್ಯಕ್ರಮಕ್ಕೆ ಭಾನುವಾರ ಚಾಲನೆ‌ (Sirsi News) ದೊರೆಯಿತು. ಫೆ. 22ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿವೆ. ಶ್ರೀಮಠದ ಭಕ್ತರು ಪಾಲ್ಗೊಂಡು ಸೇವೆಯಲ್ಲಿ ನಿರತರಾಗಿದ್ದಾರೆ.

ಶ್ರೀ ಸ್ವರ್ಣವಲ್ಲೀ ಮಹಾ ಸಂಸ್ಥಾನ ಮಠದಲ್ಲಿ ನಿರ್ಮಾಣ ಮಾಡಲಾದ ಅಲಂಕೃತ ಯಾಗ ಶಾಲೆಯಲ್ಲಿ ಮಠಾಧೀಶರಾದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಗಂಗಾಧರೇಂದ್ರ ಸರಸ್ವತೀ‌ ಮಹಾಸ್ವಾಮೀಜಿಗಳ ಸಾನ್ನಿಧ್ಯದಲ್ಲಿ, ನೂತನ ಶಿಷ್ಯರಾದ ಬ್ರಹ್ಮಚಾರಿ ವಿದ್ವಾನ್‌ ನಾಗರಾಜ್ ಭಟ್ಟ ಅವರ ಉಪಸ್ಥಿತಿಯಲ್ಲಿ ‌ಆರಂಭಗೊಂಡವು.

ಶನಿವಾರ ಗಣಪತಿ ಪೂಜೆ, ಗೋಪೂಜೆ, ಗೋ ದಾನ, ಕೂಷ್ಮಾಂಡ ಹವನ, ಒಂದು ಲಕ್ಷ ಗಾಯತ್ರೀ ಜಪ, ದಶಾಂಶ ಹವನ ನಡೆದವು. ಐದು ವೇದಗಳ ಪಾರಾಯಣ, ಮಹಾರುದ್ರ ಜಪ ಪ್ರಾರಂಭವಾದವು.

ಇದನ್ನೂ ಓದಿ: Amrit Bharat Trains: ಶೀಘ್ರದಲ್ಲೇ 50 ಅಮೃತ್‌ ಭಾರತ್‌ ರೈಲುಗಳ ಓಡಾಟ; ಸಚಿವ ಅಶ್ವಿನಿ ವೈಷ್ಣವ್ ಘೋಷಣೆ

ವೇ.ಮೂ ಬಾಲಚಂದ್ರ ಉಪಾಧ್ಯಾಯರು ಗೋಕರ್ಣ, ವೇ.ಮೂ ಪ್ರಭಾಕರ ಉಪಾಧ್ಯಾಯ ಗೋಕರ್ಣ, ವಿ. ಬಾಲಚಂದ್ರ ಶಾಸ್ತ್ರಿಗಳು ಸ್ವರ್ಣವಲ್ಲೀ, ವೇ.ಮೂ ನರಸಿಂಹ ಜೋಯಿಸರು ಬಾಡಲಕೊಪ್ಪ, ವೇ.ಮೂ. ಕೃಷ್ಣ ಜೋಯಿಸರು ಮೂಲೆಮನೆ ಹಾಗೂ ವೇದ ವಿದ್ವಾಂಸರಿಂದ ಕಾರ್ಯಕ್ರಮ ಪ್ರಾರಂಭಗೊಂಡಿತು. ಎಂಬತ್ತಕ್ಕೂ ಅಧಿಕ ಐತ್ವಿಜರು ಪಾಲ್ಗೊಂಡು ಧಾರ್ಮಿಕ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ.

ಧಾರ್ಮಿಕ ಸಂಪನ್ಮೂಲ‌ ಸಮಿತಿಯು ಹವ‌ನಗಳಿಗೆ ಬೇಕಾದ ಮೂಲಭೂತ ಅವಶ್ಯಕತೆ ಪೂರೈಸುತ್ತಿದೆ. ಕಾರ್ಯಕರ್ತರಲ್ಲಿ, ಮಠದ ಶಿಷ್ಯ ಭಕ್ತರಲ್ಲಿ ಸಂಭ್ರಮ ಹೆಚ್ಚಿದೆ. ಅಲ್ಲದೆ, ಭಕ್ತರು ಈ ಕಾರ್ಯಕ್ರಮದಲ್ಲಿ ಶ್ರದ್ಧಾ ಭಕ್ತಿಯಿಂದ ಪಾಲ್ಗೊಂಡು ಸೇವೆ ಸಲ್ಲಿಸುತ್ತಿದ್ದಾರೆ.

ಫೆ.21ರಂದು ಸಂನ್ಯಾಸ ಗ್ರಹಣ ಸಂಕಲ್ಪ, ಗಣಪತಿ ಪೂಜಾ, ನಾಂದಿ ಶ್ರಾದ್ದ, ಮಾತೃಕಾ ಪೂಜಾ, ಸಾವಿತ್ರೀ ಪ್ರವೇಶ, ಶತಚಂಡಿ ಹವನ, ಮಧ್ಯಾಹ್ನೋತ್ತರ-ಬ್ರಹ್ಮಾನ್ವಾಧನ, ಪ್ರಾಣಾದಿ ಹೋಮ, ಪುರುಷಸೂಕ್ತ ಹವನ, ವಿರಜಾ ಹೋಮ, ಶ್ರೀಲಕ್ಷ್ಮೀ ನೃಸಿಂಹ ಜಪ ನಡೆಯಲಿವೆ.

ಫೆ.22 ರಂದು 11 ಯತಿಗಳ ಸಮ್ಮುಖದಲ್ಲಿ ಯೋಗ ಪಟ್ಟದ ಕಾರ್ಯಕ್ರಮಗಳು ನಡೆಯಲಿವೆ. ಜಲಾಶಯಗಮನ, ಸಾವಿತ್ರೀ ಪ್ರವೇಶ, ಪ್ರೇಷೋಚ್ಚಾರಣೆ, ಕಾಷಾಯ ವಸ್ತ್ರ ಧಾರಣೆ, ಪ್ರಣವ ಮಹಾವಾಕ್ಯೋಪದೇಶ, ನಾಮಕರಣ, ಪರ್ಯಂ ಕಶೌಚ, ಯೋಗ ಪಟ್ಟ, ಬ್ರಹ್ಮವಿದಾಶೀರ್ವಚನ, ಅಕ್ಷರಾಯುತ ಶ್ರೀಲಕ್ಷ್ಮೀ ನೃಸಿಂಹ ಮಂತ್ರ ಹವನ ಪೂರ್ಣಾಹುತಿ, ತೀರ್ಥ ಪ್ರಸಾದ ಮಂತ್ರಾಕ್ಷತೆ ಕಾರ್ಯಕ್ರಮಗಳು ನಡೆಯಲಿವೆ.

ಇದನ್ನೂ ಓದಿ: BCCI: ದೇಶಿ ಕ್ರಿಕೆಟ್​ ಕಡೆಗಣಿಸುತ್ತಿರುವ ಆಟಗಾರರಿಗೆ ಲಾಸ್ಟ್​ ವಾರ್ನಿಂಗ್​ ನೀಡಿದ ಬಿಸಿಸಿಐ!

ಫೆ.21ರಂದು‌ ಶ್ರೀ ಸರ್ವಜ್ಞೇಂದ್ರ ಸರಸ್ವತಿ ವೇದಿಕೆಯಲ್ಲಿ ಮಧ್ಯಾಹ್ಯ 3ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದೆ. ಶ್ರೀ ಸ್ವರ್ಣವಲ್ಲೀ ಮಠದ ಶ್ರೀಮದ್‌ ಗಂಗಾಧರೇಂದ್ರ ಸರಸ್ವತೀ‌ ಮಹಾಸ್ವಾಮೀಜಿ, ಕೂಡ್ಲಿ ಶೃಂಗೇರಿಮಠದ ಶ್ರೀವಿದ್ಯಾವಿಶ್ವೇಶ್ವರ ಭಾರತೀ ಮಹಾಸ್ವಾಮೀಜಿ ಅವರು ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ.

ಶಿರಳಗಿ ಶ್ರೀರಾಜಾರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಭಾರತೀ ಮಹಾ ಸ್ವಾಮೀಜಿಗಳು ನಿದಿಧ್ಯಾಸನ ವಿಷಯ ಕುರಿತು ಪ್ರವಚನ ನೀಡಲಿದ್ದಾರೆ. ಹೊಳೆನರಸೀಪುರದ ಅಧ್ಯಾತ್ಮ ಪ್ರಕಾಶದ ಶ್ರೀ ಪ್ರಕಾಶಾನಂದೇಂದ್ರ ಸರಸ್ವತೀ ಮಹಾಸ್ವಾಮೀಜಿಗಳು ಆಲೋಕಯಾಂಬ ಲಲಿತೇ (ಪರಮಪೂಜ್ಯರ ಪ್ರಾರ್ಥನಾ ಮಾಲಿಕೆ) ಎಂಬ ಗ್ರಂಥ ಲೋಕಾರ್ಪಣೆ ಮಾಡಲಿದ್ದಾರೆ. ಮೈಸೂರು ಭಾರತೀ ಯೋಗಧಾಮದ ಯೋಗಾಚಾರ್ಯ ಕೆ.ಎಲ್.ಶಂಕರನಾರಾಯಣ ಜೋಯಿಸ್‌ ಅವರು ಯತಿಧರ್ಮ ಮತ್ತು ಲೋಕಧರ್ಮ ಎಂಬ ವಿಷಯ ಕುರಿತು ಉಪನ್ಯಾಸ ನೀಡುವರು.

ಫೆ. 22ರಂದು ಯೋಗವಾಸಿಷ್ಠ ಪ್ರಥಮ ಸಂಪುಟ ಲೋಕಾರ್ಪಣೆ

ಫೆ. 22ರಂದು ನಡೆಯುವ ಧರ್ಮ ಸಭಾ ಕಾರ್ಯಕ್ರಮದಲ್ಲಿ ಸ್ವರ್ಣವಲ್ಲೀ ಶ್ರೀಗಳು ದಿವ್ಯ ಸಾನ್ನಿಧ್ಯ ನೀಡಲಿದ್ದು, ಯೋಗವಾಸಿಷ್ಠ ಪ್ರಥಮ ಸಂಪುಟ ಲೋಕಾರ್ಪಣೆ ಆಗಲಿದೆ. ಮೈಸೂರಿನ ಶ್ರೀಯೋಗಾನಂದೇಶ್ವರ ಸರಸ್ವತೀ ಮಠದ ಶ್ರೀಶಂಕರ ಭಾರತೀ ಮಹಾಸ್ವಾಮೀಜಿ ಯಡತೊರೆ, ಹರಿಹರಪುರದ ಶ್ರೀ ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತೀ ಮಹಾ ಸ್ವಾಮೀಜಿ, ಕೂಡ್ಲಿ ಶೃಂಗೇರಿಮಠದ ಶ್ರೀವಿದ್ಯಾವಿಶ್ವೇಶ್ವರ ಮಹಾಸ್ವಾಮೀಜಿ, ಹೊಳೆನರಸಿಪುರದ ಅಧ್ಯಾತ್ಮ ಪ್ರಕಾಶದ ಶ್ರೀ ಪ್ರಕಾಶಾನಂದೇಂದ್ರ ಸರಸ್ವತೀ ಮಹಾ ಸ್ವಾಮೀಜಿ, ಕಾಸಗೋಡು ಶ್ರೀ ಎಡನೀರು ಮಠದ ಶ್ರೀಸಚ್ಚಿದಾನಂದ ಭಾರತೀ ಮಹಾ ಸ್ವಾಮೀಜಿ, ಶ್ರೀಮನ್ನೆಲೆಮಾವಿಮಠದ ಶ್ರೀಮಾಧವಾನಂದ ಭಾರತೀ ಮಹಾ ಸ್ವಾಮೀಜಿ, ತುರವೆಕೆರೆಯ ಶ್ರೀಪ್ರಣವಾನಂದ ತೀರ್ಥ ಮಹಾಸ್ವಾಮೀಜಿ, ಕಾಂಚಿಪುರಂನ ಸ್ವಾಮೀಜಿಗಳಾದ ಶ್ರೀ ಆತ್ಮಬೋಧ ತೀರ್ಥ ಸ್ವಾಮೀಜಿ, ಶ್ರೀ ಸಹಜಾನಂದ ತೀರ್ಥ ಸ್ವಾಮೀಜಿ, ಶ್ರೀ ಅಂಜನಾನಂದ ತೀರ್ಥ ಸ್ವಾಮೀಜಿ, ಸ್ವರ್ಣವಲ್ಲೀ ಮಠದ ನೂತನ ಶ್ರೀಗಳು ಸಾನ್ನಿಧ್ಯ ನೀಡಲಿದ್ದಾರೆ. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಉಪಸ್ಥಿತರಿರಲಿದ್ದಾರೆ.

ಇದನ್ನೂ ಓದಿ: Gold Rate Today: ಇಂದು ಚಿನ್ನ ಖರೀದಿ ಮಾಡುವ ಮುನ್ನ ದರ ಇಲ್ಲಿ ಪರಿಶೀಲಿಸಿಕೊಳ್ಳಿ

ಅಲ್ಲದೆ, ಪ್ರತಿ ದಿನ ತೀರ್ಥ ಪ್ರಸಾದ ವಿತರಣೆ, ಪ್ರಸಾದ ಭೋಜನ ವ್ಯವಸ್ಥೆ ಇರಲಿದೆ. ಶಿಷ್ಯರು ಹೆಚ್ಚಿನ ಶಿಷ್ಯ ಭಕ್ತರು ತಂಡೋಪತಂಡವಾಗಿ ಭಾಗವಹಿಸುತ್ತಿದ್ದಾರೆ.

Exit mobile version