Site icon Vistara News

Sirsi News : ದೇವಸ್ಥಾನದ ಬಾಗಿಲು ಮುರಿದರು; ಚಾಕ್‌ಪೀಸ್‌ನಿಂದ ಶಿವಲಿಂಗದ ಮೇಲೆ ಬರೆದು ವಿಕೃತಿ

Someone wrote with a chalk piece on the Shivalinga idol of Someshwara temple

ಶಿರಸಿ:‌ ದೇವಾಲಯದ ಗರ್ಭಗುಡಿಗೆ ನುಗ್ಗಿ ಶಿವಲಿಂಗದ ಮೇಲೆ ಚಾಕ್‌ಪೀಸ್‌ನಿಂದ ಬರೆದು ಕಿಡಿಗೇಡಿಗಳು ಅಶುದ್ಧ ಮಾಡಿದ್ದಾರೆ. ಶಿರಸಿಯ ನರೆಬೈಲ್‌ನಲ್ಲಿರುವ ಶ್ರೀ ಸೋಮೇಶ್ವರ ದೇವಸ್ಥಾನದ (Someshwara temple) ಶಿವಲಿಂಗ ಮೂರ್ತಿ (Shivalinga idol) ಮೇಲೆ ಚಾಕ್‌ಪೀಸ್‌ನಿಂದ ಬರೆದು ವಿಕೃತಿ (Sirsi News) ಮೆರೆದಿದ್ದಾರೆ.

ಭಾನುವಾರ ಬೆಳಗ್ಗೆ 10 ಗಂಟೆಗೆ ಸುಮಾರಿಗೆ ಪುರೋಹಿತರು ದೇವಸ್ಥಾನದ ಬಾಗಿಲು ತೆರೆದಿದ್ದಾರೆ. ಈ ವೇಳೆ ಗರ್ಭಗುಡಿ ಹಾಕಿದ್ದ ಬಾಗಿಲು ಮುರಿದುಹೋಗಿರುವುದು ಕಂಡಿದ್ದಾರೆ. ಗರ್ಭಗುಡಿಯೊಳಗೆ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಲಿಂಗದ ಮೇಲೆ ಇಂಗ್ಲೀಷ್‌ ಅಕ್ಷರದಲ್ಲಿ ಏನನ್ನೋ ಬರೆದಿದ್ದಾರೆ. ಆದರೆ ಯಾವುದೇ ವಸ್ತುಗಳು ಅಥವಾ ಹುಂಡಿ ಹಣವು ಕಳ್ಳತನವಾಗಿಲ್ಲ ಎಂದು ದೇವಸ್ಥಾನದ ಅರ್ಚಕ ಮಹೇಶ್‌ ಮಾಹಿತಿ ನೀಡಿದ್ದಾರೆ.

Someone wrote with a chalk piece on the Shivalinga idol of Someshwara temple

ಬೀಗ ಹಾಕಿದ್ದ ಗರ್ಭಗುಡಿಯ ಬಾಗಿಲು ದೂಡಿರುವ ದುಷ್ಟರು, ಶಿವಲಿಂಗದ ಮೇಲೆಲ್ಲ ಏನನ್ನೋ ಗಿಚ್ಚಿದ್ದಾರೆ. ಜೆಇಎಸ್‌ 2024ಕ್ಕೆಂದು ಇಂಗ್ಲೀಷ್‌ನಲ್ಲಿ ಬರೆದಿದ್ದಾರೆ. ಗರ್ಭಗುಡಿಗೆ ನುಗ್ಗಿ ಅಶುದ್ಧತೆ ಮಾಡಿದ್ದಕ್ಕೆ ಸ್ಥಳೀಯರು ಕಿಡಿಕಾರಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಗ್ರಾಮಸ್ಥರು ದೇವಸ್ಥಾನದ ಮುಂದೆ ಸೇರಿದ್ದರು. ಸ್ಥಳಕ್ಕಾಗಮಿಸಿದ ಪೋಲಿಸರು ಪರಿಶೀಲನೆ ನಡೆಸಿದ್ದು, ಆರೋಪಿಗಳ ಹುಡುಕಾಟ ನಡೆಸಿದ್ದಾರೆ. ಶಿರಸಿ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

Someone wrote with a chalk piece on the Shivalinga idol of Someshwara temple

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version