ಉತ್ತರ ಕನ್ನಡ: ರಸ್ತೆ ಸುರಕ್ಷತೆ, ಸ್ವಚ್ಛಭಾರತ ಮತ್ತ ಭೇಟಿ ಬಚಾವೋ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕಾರವಾರದಿಂದ ಹೊರಟ 63 ಮಕ್ಕಳು ಆರು ದಿನ ಸ್ಕೇಟಿಂಗ್ ಮೂಲಕ ಬುಧವಾರ ಬೆಂಗಳೂರಿಗೆ ಆಗಮಿಸಿದರು. ರೋಲರ್ಸ್ ಸ್ಕೇಟರ್ಸ್ ಅಸೋಸಿಯೇಷನ್ ಹಾಗೂ ಕಾರ್ಮಿಕ ಇಲಾಖೆ ಆಯೋಜಿಸಿದ್ದ ಅಭಿಯಾನದಲ್ಲಿ ಮಕ್ಕಳಿಗೆ ಆಂಬ್ಯುಲೆನ್ಸ್ ಸೇವೆ ಮತ್ತು ಸುರಕ್ಷತಾ ಕಿಟ್‌ಗಳು, ಸಾರಿಗೆ, ಆಹಾರ, ನೀರಿನ ವ್ಯವಸ್ಥೆ ಸೇರಿದಂತೆ ಅಗತ್ಯ ವೈದ್ಯಕೀಯ ನೆರವನ್ನು ಒದಗಿಸಲಾಗಿತ್ತು.
ರಾಜ್ಯ ಕಾರ್ಮಿಕ ಇಲಾಖೆಯು ಕಾರ್ಮಿಕರಿಗಾಗಿ ಹತ್ತು ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಯೋಜನೆ ಸಮರ್ಪಕವಾಗಿ ತಲುಪಿಸಲು ಮುಂದಾಗಿರುವ ಇಲಾಖೆ ಈ ಜಾಗೃತಿ ಕಾರ್ಯಕ್ರಮಕ್ಕೆ ಬೆಂಬಲ ನೀಡಿತ್ತು. 63 ಸ್ಕೇಟಿಂಗ್ ವಿದ್ಯಾರ್ಥಿಗಳು ಕಾರವಾರದಿಂದ ಬೆಂಗಳೂರಿನವರೆಗೆ ಸ್ಕೇಟಿಂಗ್‌ನಲ್ಲಿ ತೆರಳುವುದರೊಂದಿಗೆ ಕಾರ್ಮಿಕ ಇಲಾಖೆಯ ಯೋಜನೆಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಿದರು. ಇದಲ್ಲದೇ, ಕಾರ್ಮಿಕ ಇಲಾಖೆಯ ಯೋಜನೆ ತಲುಪುವಂತೆ ಕಾರವಾರದಿಂದ ಬೆಂಗಳೂರಿನವರೆಗೆ ಪ್ರತಿ ಗ್ರಾಮಕ್ಕೂ ಸ್ಕೀಯಿಂಗ್ ಅಭಿಯಾನವನ್ನು ನಡೆಸಿದರು.
ಕಾರವಾರದಿಂದ ಬೆಂಗಳೂರಿಗೆ ಮೇ 6 ರಿಂದ ಆರಂಭವಾಯಿತು. ಕಾರ್ಮಿಕ ಇಲಾಖೆಯ ಮಹತ್ವ, ರಸ್ತೆ ಸುರಕ್ಷತೆ, ಸ್ವಚ್ಛಭಾರತ ಮತ್ತ ಭೇಟಿ ಬಚಾವೋ ರ‍್ಯಾಲಿಯು ಕಾರವಾರದಿಂದ ಪ್ರಾರಂಭವಾಯಿತು. ಅಂಕೋಲಾ, ಕುಮಟಾ, ಹೊನ್ನಾವರ, ಸಾಗರ, ಶಿವಮೊಗ್ಗ, ಅರಸೀಕೆರೆ, ತಿಪಟೂರು, ಯಡಿಯೂರು, ನೆಲಮಂಗಲದ ಮಾರ್ಗವಾಗಿ ಬೆಂಗಳೂರಿಗೆ ಸಾಗಿದರು.
ಸುಮಾರು 620 ಕಿ.ಮೀ. ಸಾಗಿ ಬಂದ ಮಕ್ಕಳು ದಾರಿಯುದ್ದಕ್ಕೂ ಬ್ಯಾನರ್, ಬ್ರೋಷರ್‌ಗಳ ಮೂಲಕ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಪ್ರಯತ್ನಿಸಿದರು. ರ‍್ಯಾಲಿಯನ್ನು ಸುಗಮವಾಗಿ ಪೂರ್ಣಗೊಳಿಸಲು, ಸುರಕ್ಷತೆಯನ್ನು ಕಾಪಾಡಲು ಕಾರವಾರದಿಂದ ಬೆಂಗಳೂರಿನವರೆಗೆ ರ‍್ಯಾಲಿಯ ಉದ್ದಕ್ಕೂ ಪೊಲೀಸ್ ಸಹಾಯವನ್ನು ಜಿಲ್ಲಾಡಳಿತದ ವತಿಯಿಂದ ಒದಗಿಸಲಾಯಿತು.
ಇದನ್ನು ಓದಿ | ನಿಮ್ಮ ಮಕ್ಕಳಿಗೆ ಬೇಸಿಗೆಯಲ್ಲಿ ಹೇಗೆ ಸಹಾಯ ಮಾಡಬೇಕು?: ಇಲ್ಲಿವೆ ಪ್ರಮುಖ ಟಿಪ್ಸ್
ಬುಧವಾರ ಮದ್ಯಾಹ್ನದ ವೇಳೆಗೆ ವಿಧಾನಸೌಧಕ್ಕೆ ಆಗಮಿಸಿದ ತಂಡವನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ. ನಾರಾಯಣಗೌಡ ಹಾಗೂ ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಸ್ವಾಗತಿಸಿದರು.
ವಿಧಾನಸೌಧದ ಮುಂಭಾಗದಲ್ಲಿ ಮಕ್ಕಳು ಹಾಗೂ ಇಡೀ ತಂಡಕ್ಕೆ ಪ್ರಮಾಣಪತ್ರ ನೀಡಿ ಅಭಿನಂದಿಸಲಾಯಿತು.
ಭವಾನಿ ತೆಕ್ಕಣ್ಣಗೆ ಅಭಿನಂದನೆ: ಇದೇ ವೇಳೆ ಸ್ಕೀಯಿಂಗ್‌ನಲ್ಲಿ ಸಾಧನೆ ಮಾಡಿದ ಭವಾನಿ ತೆಕ್ಕಣ್ಣ ನಂಜುಂಡ ಅವರನ್ನು ಸಚಿವ ಡಾ.ನಾರಾಯಣಗೌಡ ಅವರು ಸನ್ಮಾನಿಸಿ, ಗೌರವಿಸಿದರು. ಭವಾನಿ ತೆಕ್ಕಣ್ಣ ನಂಜುಂಡ ಅವರು ಜಮ್ಮುಕಾಶ್ಮೀರದಲ್ಲಿ ನಡೆದ ಸ್ಕೀಯಿಂಗ್ ಸ್ಪರ್ಧೆಯಲ್ಲಿ ಪಾಲ್ಗೊಂಡು 1 ಚಿನ್ನ, 5 ಬೆಳ್ಳಿ, 1 ಕಂಚಿನ ಪದಕ ಗಳಿಸಿ ಸಾಧನೆ ಮಾಡಿದ್ದರು. ಏಷ್ಯನ್ ಚಾಂಪಿಯನ್‌ಶಿಪ್‌ಗೆ ಆಯ್ಕೆಯಾಗಿರುವ ಭವಾನಿ, ಇಟಲಿಯಲ್ಲಿ ನಡೆಯಲಿರುವ ವಿಂಟರ್ ಒಲಿಂಪಿಕ್ಸ್ ಗೆ ಆಯ್ಕೆಯಾಗುವ ನಿರೀಕ್ಷೆ ಇದೆ. ಭವಾನಿಯವರ ತರಬೇತಿಗೆ ಅನುಕೂಲವಾಗಲಿ ಎಂದು ರಾಜ್ಯ ಸರ್ಕಾರದಿಂದ ₹2 ಲಕ್ಷ ಪ್ರೋತ್ಸಾಹ ಧನ ನೀಡಿದರು.
ಇದನ್ನು ಓದಿ | ಇದು ಮನುಷ್ಯರನ್ನು ಓದೋ ಹ್ಯೂಮನ್ ಲೈಬ್ರರಿ!