Site icon Vistara News

ಶ್ರೀನಿವಾಸ್‌ ಹೆಬ್ಬಾರ್‌ ನೇತೃತ್ವದಲ್ಲಿ ಮಾರುತಿ ದೇವಸ್ಥಾನದ ಪ್ರವೇಶದ್ವಾರ ಉದ್ಘಾಟನೆ

ಶ್ರೀನಿವಾಸ್‌ ಹೆಬ್ಬಾರ್‌

ಶಿರಸಿ: ತಾಲೂಕಿನ ಕೊಳಗಿಬೀಸ್ ಶ್ರೀ ಮಾರುತಿ ದೇವಾಲಯದ ಎರಡು ದಿನಗಳ ಧಾರ್ಮಿಕ ಕಾರ್ಯಕ್ರಮಗಳು ಶುಕ್ರವಾರ ತೆರೆಕಂಡಿವೆ. ಶಿರಸಿಯ ಜೀವಜಲ ಕಾರ್ಯಪಡೆ ಅಧ್ಯಕ್ಷರಾದ ಶ್ರೀನಿವಾಸ್‌ ಹೆಬ್ಬಾರ್‌ ಮತ್ತು ಕುಟುಂಬದ ಸೇವಾರ್ಥವಾಗಿ ನಿರ್ಮಿಸಿರುವ ಪ್ರವೇಶ ದ್ವಾರ ಉದ್ಘಾಟನಾ ಕಾರ್ಯಕಮವೂ ಸಾಂಗೋಪಾಂಗವಾಗಿ ನೆರವೇರಿದವು. ಈ ವೇಳೆ ಮಹಾರುದ್ರಯಾಗದ ಸೇರಿದಂತೆ ಅನೇಕ ಧಾರ್ಮಿಕ ವಿಧಿ ವಿಧಾನಗಳೂ ನಡೆದಿದೆ. ಮೇ 20ರ ಬೆಳಗ್ಗೆ ಈ ಎಲ್ಲಾ ಕಾರ್ಯಕ್ರಮ ಜರುಗಿದವು.

ವಿದ್ವಾನ್ ಕುಮಾರ ಭಟ್ ಕೊಳಗಿಬೀಸ್ ಅವರ ಪ್ರಧಾನ ಆಚಾರ್ಯತ್ವದಲ್ಲಿ ಮಾರುತಿ ದೇವಾಲಯದ ಆವರಣದಲ್ಲಿ ನಾಂದಿ ಪುಣ್ಯಾಹವಾಚನ, ಉತ್ಸವ ಸಂಕಲ್ಪ ಕಾರ್ಯಕ್ರಮಗಳು ನಡೆಯಿತು. 15 ವೈದಿಕರು ಪಾಲ್ಗೊಂಡ ಈ ಕಾರ್ಯಕ್ರಮದಲ್ಲಿ ಶ್ರೀನಿವಾಸ ಹೆಬ್ಬಾರ್ ಕುಟುಂಬ ನೇತೃತ್ವ ವಹಿಸಿ, ಪೂರ್ಣಾಹುತಿಯಲ್ಲಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ಶಾಂತಿಹೋಮ, ಮಹಾಪೂಜೆ ಕಾರ್ಯಕ್ರಮಗಳನ್ನು ನಡೆಯಿತು.
ಈ ಕಾರ್ಯಕ್ರಮದಲ್ಲಿ ದೇವಾಲಯದ ಅಧ್ಯಕ್ಷ ಶ್ರೀಧರ ಹೆಗಡೆ ಇಳ್ಳುಮನೆ, ನರಸಿಂಹ ಹೆಗಡೆ ಹೆಬ್ಬಲಸು, ಉಮಾಪತಿ ಭಟ್ ಮತ್ತಿಗಾರ, ಶ್ರೀಧರ ಭಟ್ ಕೊಳಗಿಬೀಸ್ ಇತರರು ಉಪಸ್ಥಿತರಿದ್ದರು.

ಮೇ 21 ರಂದು ಮಾರುತಿ ದೇವರ ಕಲಾವೃದ್ಧಿ, ಶತಾಧಿಕ ಋತ್ವಿಜರಿಂದ 11 ಕುಂಡಗಳಲ್ಲಿ ಮಹಾರುದ್ರ ಯಾಗ ನಡೆಯಲಿದೆ. ವಿದ್ವಾನ್ ಕುಮಾರ ಭಟ್ ಕೊಳಗಿಬೀಸ್ ಪ್ರಧಾನ ಆಚಾರ್ಯತ್ವ ವಹಿಸಲಿದ್ದಾರೆ ಹಾಗೂ ಈ ಕಾರ್ಯಕ್ರಮದಲ್ಲಿ ಶಿರಸಿ ಜೀವಜಲ ಕಾರ್ಯಪಡೆ ಅಧ್ಯಕ್ಷರಾದ ಶ್ರೀನಿವಾಸ ಹೆಬ್ಬಾರ್ ನೇತೃತ್ವ ವಹಿಸಲಿದ್ದಾರೆ.

ಇದನ್ನೂ ಓದಿ: ಮಾರಿಕಾಂಬಾ ದೇವಸ್ಥಾನಕ್ಕೆ ಸೋಲಾರ್‌ ಕೊಡುಗೆ ನೀಡಿದ ಸೆಲ್ಕೋ ಸಂಸ್ಥೆ

Exit mobile version