Site icon Vistara News

ಕುಮಟಾದಲ್ಲಿ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ತಾಯಿ

ಮಹಾತಾಯಿ

ಕುಮಟಾ: ಅವಳಿ ಮಕ್ಕಳಿಗೆ ಜನ್ಮ ನೀಡುವುದೇ ಅಪರೂಪದ ವಿಷಯ. ಆದರೆ, ಇಲ್ಲೊಬ್ಬರು ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ಖುಷಿಯಲ್ಲಿದ್ದಾರೆ.

ಗೀತಾ ಪಟಗಾರ ಎಂಬುವವರು ಕುಮಟಾದ ಖಾಸಗಿ ಆಸ್ಪತ್ರೆಯಲ್ಲಿ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ್ದು, ಮಗು-ತಾಯಿ ಆರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಮದುವೆಯಾಗಿ 11 ವರ್ಷದ ಬಳಿಕ ಇವರು ತಾಯಿಯಾದ ಖುಷಿಯಲ್ಲಿದ್ದಾರೆ.

ಇವರಿಗೆ ಎರಡು ಗಂಡು ಮಗು, ಒಂದು ಹೆಣ್ಣು ಮಗು ಜನಿಸಿದ್ದು, ಕುಟುಂಬದವರು ಖುಷಿಯಲ್ಲಿದ್ದಾರೆ.

ಇದನ್ನೂ ಓದಿ: ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ

Exit mobile version