Site icon Vistara News

Uttara Kannada News: ವಿಳಾಸ ಕೇಳುವ ನೆಪದಲ್ಲಿ ಸಮೀಪಿಸಿ ಸರ ಕಳವು ಮಾಡುತ್ತಿದ್ದ ಇಬ್ಬರ ಬಂಧನ

Chain theft Two inter district thieves arrested

ಯಲ್ಲಾಪುರ: ವಿಳಾಸ ಕೇಳುವ ನೆಪದಲ್ಲಿ ಸಮೀಪ ಬಂದು ಸರಗಳ್ಳತನ ಮಾಡುತ್ತಿದ್ದ ಇಬ್ಬರು ಅಂತರ್‌ ಜಿಲ್ಲಾ ಕಳ್ಳರನ್ನು (Inter District Thieves) ಯಲ್ಲಾಪುರ ಠಾಣಾ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.

ಸೆ. 25 ರಂದು ಶಿರಸಿ ರಸ್ತೆಯ ಬಾಳೆಹದ್ದ ಬಳಿ ಬೈಕ್‌ನಲ್ಲಿ ಬಂದ ಅಪರಿಚಿತರಿಬ್ಬರ ಪೈಕಿ, ಹಿಂಬದಿಯ ಸವಾರ ವಿಳಾಸ ಕೇಳುವ ನೆಪದಲ್ಲಿ ಬಂದು ಮಹಿಳೆಯ ಮಂಗಳಸೂತ್ರವನ್ನು ಕಿತ್ತುಕೊಂಡ ಹೋದ ಕುರಿತು ಯಲ್ಲಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು

ಈ ಕುರಿತು ತನಿಖೆ ನಡೆಸಿದ ಪೊಲೀಸರು, ದೊರತ ಖಚಿತ ಮಾಹಿತಿಯ ಮೇರೆಗೆ ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಅಪಜಲ್‌ ಖಾದರಗೌಸ್‌ ಗವಾರಿ ಹಾಗೂ ಶಿರಸಿಯ ರಾಮನಬೈಲ್‌ ನಿವಾಸಿ ಪೈಜಾನ್‌ ಅಬ್ದುಲ್‌ ಸಮದ ಮುಲ್ಲಾ ಎನ್ನುವ ಆರೋಪಿತರನ್ನು ಬಂಧಿಸಿರುತ್ತಾರೆ.

ಆರೋಪಿತರನ್ನು ವಿಚಾರಣೆ ನಡೆಸಿದ ನಂತರ ಶಿವಮೊಗ್ಗ ಜಿಲ್ಲೆಯ ಸಾಗರ, ಆನಂದಪುರ ಹಾಗೂ ಉತ್ತರಕನ್ನಡ ಜಿಲ್ಲೆಯ ಭಟ್ಕಳ, ಹೊನ್ನಾವರದಲ್ಲೂ ಸಹ ಚಿನ್ನದ ಸರ ಹಾಗೂ ಮಂಗಳಸೂತ್ರಗಳನ್ನು ಲೂಟಿ ಮಾಡಿರುವ ಕುರಿತು ತಿಳಿದು ಬಂದಿದೆ. ಈ ಹಿಂದೆ ಆರೋಪಿತರ ಮೇಲೆ ಶಿರಸಿ, ಮುಂಡಗೋಡ ಪೊಲೀಸ್‌ ಠಾಣೆಯಲ್ಲಿಯೂ ಸಹ ಪ್ರಕರಣ ದಾಖಲಾಗಿರುತ್ತದೆ. ಆರೋಪಿತರಿಂದ ಕೃತ್ಯಕ್ಕೆ ಬಳಸಲಾದ 1.20 ಲಕ್ಷ ರೂ. ಮೌಲ್ಯದ ಪಲ್ಸರ್‌ ಬೈಕ್‌, ಸುಲಿಗೆ ಮಾಡಲಾದ 3.50 ಲಕ್ಷ ಮೌಲ್ಯದ 55 ಗ್ರಾಂ. ಬಂಗಾರದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ: BEML Group C Recruitment: ಐಟಿಐ ಪಾಸಾದವರಿಗೆ ಸಿಹಿ ಸುದ್ದಿ; ಬಿಇಎಂಎಲ್‌ನಲ್ಲಿ 119 ಹುದ್ದೆಗೆ ಅರ್ಜಿ ಸಲ್ಲಿಸಿ

ಎಸ್‌ಪಿ ವಿಷ್ಣುವರ್ಧನ್‌, ಎಎಸ್‌ಪಿ ಸಿ.ಟಿ.ಜಯಕುಮಾರ, ಡಿವೈಎಸ್‌ಪಿ ಗಣೇಶ ಕೆ.ಎಲ್‌. ಮಾರ್ಗದರ್ಶನದಲ್ಲಿ, ಯಲ್ಲಾಪುರ ಸಿಪಿಐ ರಂಗನಾಥ ನೀಲಮ್ಮನವರ ಅವರ ನೇತೃತ್ವದಲ್ಲಿ ಪಿಎಸ್‌ಐ ರವಿ ಗುಡ್ಡಿ, ನಿರಂಜನ ಹೆಗಡೆ, ಎಎಸ್‌ಐ ಗಣಪತಿ ಬೆನಕಟ್ಟಿ ಹಾಗೂ ಸಿಬ್ಬಂದಿಗಳಾದ ಬಸವರಾಜ ಹಗರಿ, ಮಹ್ಮದ ಶಫಿ, ಗಿರೀಶ ಲಮಾಣಿ, ಶೋಭಾ ನಾಯ್ಕ ತನಿಖೆ ನಡೆಸಿ ಆರೋಪಿತರನ್ನು ಬಂಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುತ್ತಾರೆ.

Exit mobile version