Site icon Vistara News

Vistara News Launch | ಆಡಳಿತ ವ್ಯವಸ್ಥೆ ವಿರುದ್ಧ ಮಾಧ್ಯಮಗಳು ಗಟ್ಟಿಯಾಗಿ ಧ್ವನಿ ಎತ್ತಲಿ: ಶಶಿಭೂಷಣ ಹೆಗಡೆ

Vistara News Launch

ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಬಾಲ ಭವನದಲ್ಲಿ(ಲಯನ್ಸ್ ಕ್ಲಬ್) ವಿಸ್ತಾರ ಕನ್ನಡ‌ ಸಂಭ್ರಮ ಅದ್ಧೂರಿಯಾಗಿ ಮಂಗಳವಾರ ನೆರವೇರಿತು. ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಶಿಕ್ಷಣ ಪ್ರಸಾರಕ ಸಮಿತಿ‌ ಉಪಾಧ್ಯಕ್ಷ ಡಾ. ಶಶಿಭೂಷಣ ಹೆಗಡೆ ಹಾಗೂ ವಿಸ್ತಾರ ನ್ಯೂಸ್‌ ಚಾನೆಲ್‌ ನಿರ್ದೇಶಕ ಶ್ರೀನಿವಾಸ್‌ ಹೆಬ್ಬಾರ್‌ ಅವರು ಉದ್ಘಾಟಿಸಿದರು.

ನಂತರ‌‌ ಮಾತನಾಡಿದ ಶಶಿಭೂಷಣ ಹೆಗಡೆ ಅವರು, ಉ.ಕ‌. ಜಿಲ್ಲೆಗೆ ಪತ್ರಿಕೋದ್ಯಮದ ನಂಟು ಬಹಳ ಆಳವಾಗಿದೆ. ರಾಜ್ಯದ ಮಾಧ್ಯಮಗಳು ಜಿಲ್ಲೆಯ ಪ್ರತಿಭೆಗಳ ಸ್ವಾಮ್ಯದಲ್ಲಿರುವುದು ಖುಷಿಯ ವಿಚಾರ. ಅದಕ್ಕೊಂದು ಹೊಸದಾದ ಸೇರ್ಪಡೆ ವಿಸ್ತಾರ ನ್ಯೂಸ್ ಚಾನೆಲ್ ಆಗಿದೆ. ಸ್ಪರ್ಧಾತ್ಮಕ ಯುಗದಲ್ಲಿ‌ ಅದೆಷ್ಟೋ ಮಾಧ್ಯಮಗಳು ಇವೆ. ಅಂತಹದರಲ್ಲಿ ತನ್ನದೊಂದು ಆಯಾಮಗಳನ್ನು ಗುರುತಿಸಿ ಸಮಾಜದ ಕನ್ನಡಿಯಾಗಿ ಕೆಲಸ‌ ಮಾಡುವುದು ಸುಲಭದ ಕೆಲಸವಲ್ಲ. ಆ ಕಾರ್ಯವನ್ನು ವಿಸ್ತಾರ ನ್ಯೂಸ್ ಮಾಡುತ್ತದೆ ಎಂಬ‌ ನಂಬಿಕೆ ನನ್ನಲ್ಲಿದೆ ಎಂದು ಹೇಳಿದರು.

ಇದನ್ನೂ ಓದಿ | Vistara News Launch | ಅತಿರಂಜಿತ, ನಿರುಪಯುಕ್ತ ಸುದ್ದಿಗಳಿಂದ ಮಾಧ್ಯಮಗಳ ವಿಶ್ವಾಸಾರ್ಹತೆಗೆ ಕುತ್ತು: ಹರ್ಷವರ್ಧನ್

ವಿಸ್ತಾರ ಚಾನೆಲ್‌ನ ಮೂಲ ಮೂರು ಆಧಾರ ಸ್ತಂಭಗಳ ಪೈಕಿ ಎರಡು ಸ್ಥಂಭಗಳಾದ ವಿಸ್ತಾರ ನ್ಯೂಸ್‌ ಸಿಇಒ ಮತ್ತು ಪ್ರಧಾನ ಸಂಪಾದಕ ಹರಿಪ್ರಕಾಶ್‌ ಕೋಣೆಮನೆ ಹಾಗೂ ನಿರ್ದೇಶಕ ಶ್ರೀನಿವಾಸ್‌ ಹೆಬ್ಬಾರ್ ಇಬ್ಬರೂ ಜಿಲ್ಲೆಯವರು ಎಂಬುವುದು‌ ಸಂತಸದ ವಿಷಯವಾಗಿದೆ. ಮಾಧ್ಯಮದ ಸ್ವಾಯತ್ತತೆ, ಸ್ವಾತಂತ್ರ್ಯ ಹಾಗೂ ಪಾತ್ರದ ಬಗ್ಗೆ ಸಮಾವೇಶದಲ್ಲಿ ಚರ್ಚೆ ನಡೆಯುತ್ತಿದೆ. ಆಡಳಿತಾರೂಢ ವ್ಯವಸ್ಥೆಯ ವಿರುದ್ಧ ಗಟ್ಟಿ ಧ್ವನಿ ಎತ್ತದ ಮಾಧ್ಯಮಗಳು ಹಾಗೂ ತಮ್ಮ ಆತ್ಮಸಾಕ್ಷಿ ಅನುಗುಣವಾಗಿ ಕೆಲಸ ಮಾಡುವ ಸನ್ನಿವೇಶ ಕಡಿಮೆಯಾಗುತ್ತಿದೆ. ಇದೀಗ ಮಾಧ್ಯಮಗಳು ರಾಜಕೀಯ ಪಕ್ಷದ ಅಧೀನಕ್ಕೆ ಒಳಪಡುತ್ತಿವೆ‌. ಆದರೆ ವಿಸ್ತಾರ ಚಾನೆಲ್‌ ಯಾವುದೇ ರಾಜಕೀಯ‌ ಪಕ್ಷಕ್ಕೆ ಒಳಪಡದಂತಹ ಮಾಧ್ಯಮವಾಗಿದೆ. ಸಮಾಜದ ಬಗ್ಗೆ ಕಳಕಳಿ ಇರುವಂತಹ ವ್ಯಕ್ತಿಗಳು ಹುಟ್ಟು ಹಾಕಿದ ಚಾನೆಲ್ ವಿಸ್ತಾರ್ ನ್ಯೂಸ್ ಆಗಿದೆ‌ ಎಂದರು.

ಇನ್ನು ವಿಸ್ತಾರ ಚಾನೆಲ್ ಸಿಇಒ ಮತ್ತು ಪ್ರಧಾನ ಸಂಪಾದಕರಾದ ಹರಿಪ್ರಕಾಶ್ ಕೋಣೆಮನೆ ಅವರು ರಾಜ್ಯದ ಪ್ರಮುಖ ದಿನಪತ್ರಿಕೆ ಹಾಗೂ ನ್ಯೂಸ್ ಚಾನೆಲ್‌ಗಳಲ್ಲಿ‌ ಕಾರ್ಯ‌ ನಿರ್ವಹಿಸಿದ ಅನುಭವಿ ಪತ್ರಕರ್ತರು. ಅತಿ ಚಿಕ್ಕ ವಯಸ್ಸಿನಲ್ಲೇ ಉನ್ನತ ಪತ್ರಿಕೆಗಳ ಸಂಪಾದಕರಾಗಿ ಕಾರ್ಯನಿರ್ವಹಿಸಿ ಸಮರ್ಥವಾಗಿ ನಿಭಾಯಿಸಿಕೊಂಡು ಬಂದಿದ್ದಾರೆ. ಟಿವಿಯಲ್ಲದೇ ವಿಸ್ತಾರ ಡಿಜಿಟಲ್ ಆ್ಯಪ್‌ ಮೂಲಕ‌ ಮನೆ ಮನಗಳಿಗೆ ಸುದ್ದಿ ತಲುಪಿಸಲಾಗುತ್ತಿದೆ. ಹಾಗಾಗಿ ಎಲ್ಲರೂ ಆ್ಯಪ್ ಡೌನ್‌ಲೋಡ್ ಮಾಡಿ ಚಾನೆಲ್ ನೋಡಿ ಪ್ರೋತ್ಸಾಹಿಸೋಣ ಎಂದರು.

ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ‌.ಜಿ ನಾಯ್ಕ, ಸಾಹಿತಿ ಜಿ.ಜಿ ಹೆಗಡೆ ಬಾಳಗೋಡ, ಸ್ತ್ರೀ ರೋಗ ತಜ್ಞ, ಶ್ರೇಯಸ್‌ ಆಸ್ಪತ್ರೆಯ ಡಾ.ಶ್ರೀಧರ್ ವೈದ್ಯ, ತಾಲೂಕು‌ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ. ಎಸ್. ಗೌಡರ್, ಸಾಮಾಜಿಕ ಧುರೀಣ ಕೃಷ್ಣಮೂರ್ತಿ ಮಡಿವಾಳ, ಉದ್ಯಮಿ ಅನೀಲ್ ದೇವನಹಳ್ಳಿ ವೇದಿಕೆಯಲ್ಲಿದ್ದರು.

ಇದನ್ನೂ ಓದಿ | Vistara News Launch | ಮಾಧ್ಯಮಗಳಿಂದ ಸಮಾಜ ಸುವ್ಯವಸ್ಥಿತವಾಗಿದೆ: ತಹಸೀಲ್ದಾರ್‌ ಅಜಿತ್ ಕುಮಾರ್ ರೈ

Exit mobile version