Vistara News Launch | ಆಡಳಿತ ವ್ಯವಸ್ಥೆ ವಿರುದ್ಧ ಮಾಧ್ಯಮಗಳು ಗಟ್ಟಿಯಾಗಿ ಧ್ವನಿ ಎತ್ತಲಿ: ಶಶಿಭೂಷಣ ಹೆಗಡೆ - Vistara News

ಉತ್ತರ ಕನ್ನಡ

Vistara News Launch | ಆಡಳಿತ ವ್ಯವಸ್ಥೆ ವಿರುದ್ಧ ಮಾಧ್ಯಮಗಳು ಗಟ್ಟಿಯಾಗಿ ಧ್ವನಿ ಎತ್ತಲಿ: ಶಶಿಭೂಷಣ ಹೆಗಡೆ

ನಿಖರ-ಜನಪರ ಘೋಷವಾಕ್ಯದೊಂದಿಗೆ ಆರಂಭವಾಗಿರುವ ವಿಸ್ತಾರ ನ್ಯೂಸ್‌ ಚಾನೆಲ್‌ ವತಿಯಿಂದ ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರದಲ್ಲಿ ಹಮ್ಮಿಕೊಂಡಿದ್ದ ವಿಸ್ತಾರ ಕನ್ನಡ ಸಂಭ್ರಮಕ್ಕೆ ಶಿಕ್ಷಣ ಪ್ರಸಾರಕ ಸಮಿತಿ‌ ಉಪಾಧ್ಯಕ್ಷ ಡಾ. ಶಶಿಭೂಷಣ ಹೆಗಡೆ ಹಾಗೂ ವಿಸ್ತಾರ ನ್ಯೂಸ್‌ ಚಾನೆಲ್‌ ನಿರ್ದೇಶಕ ಶ್ರೀನಿವಾಸ್‌ ಹೆಬ್ಬಾರ್‌ ಅವರು ಚಾಲನೆ ನೀಡಿದರು.

VISTARANEWS.COM


on

Vistara News Launch
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಬಾಲ ಭವನದಲ್ಲಿ(ಲಯನ್ಸ್ ಕ್ಲಬ್) ವಿಸ್ತಾರ ಕನ್ನಡ‌ ಸಂಭ್ರಮ ಅದ್ಧೂರಿಯಾಗಿ ಮಂಗಳವಾರ ನೆರವೇರಿತು. ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಶಿಕ್ಷಣ ಪ್ರಸಾರಕ ಸಮಿತಿ‌ ಉಪಾಧ್ಯಕ್ಷ ಡಾ. ಶಶಿಭೂಷಣ ಹೆಗಡೆ ಹಾಗೂ ವಿಸ್ತಾರ ನ್ಯೂಸ್‌ ಚಾನೆಲ್‌ ನಿರ್ದೇಶಕ ಶ್ರೀನಿವಾಸ್‌ ಹೆಬ್ಬಾರ್‌ ಅವರು ಉದ್ಘಾಟಿಸಿದರು.

ನಂತರ‌‌ ಮಾತನಾಡಿದ ಶಶಿಭೂಷಣ ಹೆಗಡೆ ಅವರು, ಉ.ಕ‌. ಜಿಲ್ಲೆಗೆ ಪತ್ರಿಕೋದ್ಯಮದ ನಂಟು ಬಹಳ ಆಳವಾಗಿದೆ. ರಾಜ್ಯದ ಮಾಧ್ಯಮಗಳು ಜಿಲ್ಲೆಯ ಪ್ರತಿಭೆಗಳ ಸ್ವಾಮ್ಯದಲ್ಲಿರುವುದು ಖುಷಿಯ ವಿಚಾರ. ಅದಕ್ಕೊಂದು ಹೊಸದಾದ ಸೇರ್ಪಡೆ ವಿಸ್ತಾರ ನ್ಯೂಸ್ ಚಾನೆಲ್ ಆಗಿದೆ. ಸ್ಪರ್ಧಾತ್ಮಕ ಯುಗದಲ್ಲಿ‌ ಅದೆಷ್ಟೋ ಮಾಧ್ಯಮಗಳು ಇವೆ. ಅಂತಹದರಲ್ಲಿ ತನ್ನದೊಂದು ಆಯಾಮಗಳನ್ನು ಗುರುತಿಸಿ ಸಮಾಜದ ಕನ್ನಡಿಯಾಗಿ ಕೆಲಸ‌ ಮಾಡುವುದು ಸುಲಭದ ಕೆಲಸವಲ್ಲ. ಆ ಕಾರ್ಯವನ್ನು ವಿಸ್ತಾರ ನ್ಯೂಸ್ ಮಾಡುತ್ತದೆ ಎಂಬ‌ ನಂಬಿಕೆ ನನ್ನಲ್ಲಿದೆ ಎಂದು ಹೇಳಿದರು.

ಇದನ್ನೂ ಓದಿ | Vistara News Launch | ಅತಿರಂಜಿತ, ನಿರುಪಯುಕ್ತ ಸುದ್ದಿಗಳಿಂದ ಮಾಧ್ಯಮಗಳ ವಿಶ್ವಾಸಾರ್ಹತೆಗೆ ಕುತ್ತು: ಹರ್ಷವರ್ಧನ್

ವಿಸ್ತಾರ ಚಾನೆಲ್‌ನ ಮೂಲ ಮೂರು ಆಧಾರ ಸ್ತಂಭಗಳ ಪೈಕಿ ಎರಡು ಸ್ಥಂಭಗಳಾದ ವಿಸ್ತಾರ ನ್ಯೂಸ್‌ ಸಿಇಒ ಮತ್ತು ಪ್ರಧಾನ ಸಂಪಾದಕ ಹರಿಪ್ರಕಾಶ್‌ ಕೋಣೆಮನೆ ಹಾಗೂ ನಿರ್ದೇಶಕ ಶ್ರೀನಿವಾಸ್‌ ಹೆಬ್ಬಾರ್ ಇಬ್ಬರೂ ಜಿಲ್ಲೆಯವರು ಎಂಬುವುದು‌ ಸಂತಸದ ವಿಷಯವಾಗಿದೆ. ಮಾಧ್ಯಮದ ಸ್ವಾಯತ್ತತೆ, ಸ್ವಾತಂತ್ರ್ಯ ಹಾಗೂ ಪಾತ್ರದ ಬಗ್ಗೆ ಸಮಾವೇಶದಲ್ಲಿ ಚರ್ಚೆ ನಡೆಯುತ್ತಿದೆ. ಆಡಳಿತಾರೂಢ ವ್ಯವಸ್ಥೆಯ ವಿರುದ್ಧ ಗಟ್ಟಿ ಧ್ವನಿ ಎತ್ತದ ಮಾಧ್ಯಮಗಳು ಹಾಗೂ ತಮ್ಮ ಆತ್ಮಸಾಕ್ಷಿ ಅನುಗುಣವಾಗಿ ಕೆಲಸ ಮಾಡುವ ಸನ್ನಿವೇಶ ಕಡಿಮೆಯಾಗುತ್ತಿದೆ. ಇದೀಗ ಮಾಧ್ಯಮಗಳು ರಾಜಕೀಯ ಪಕ್ಷದ ಅಧೀನಕ್ಕೆ ಒಳಪಡುತ್ತಿವೆ‌. ಆದರೆ ವಿಸ್ತಾರ ಚಾನೆಲ್‌ ಯಾವುದೇ ರಾಜಕೀಯ‌ ಪಕ್ಷಕ್ಕೆ ಒಳಪಡದಂತಹ ಮಾಧ್ಯಮವಾಗಿದೆ. ಸಮಾಜದ ಬಗ್ಗೆ ಕಳಕಳಿ ಇರುವಂತಹ ವ್ಯಕ್ತಿಗಳು ಹುಟ್ಟು ಹಾಕಿದ ಚಾನೆಲ್ ವಿಸ್ತಾರ್ ನ್ಯೂಸ್ ಆಗಿದೆ‌ ಎಂದರು.

ಇನ್ನು ವಿಸ್ತಾರ ಚಾನೆಲ್ ಸಿಇಒ ಮತ್ತು ಪ್ರಧಾನ ಸಂಪಾದಕರಾದ ಹರಿಪ್ರಕಾಶ್ ಕೋಣೆಮನೆ ಅವರು ರಾಜ್ಯದ ಪ್ರಮುಖ ದಿನಪತ್ರಿಕೆ ಹಾಗೂ ನ್ಯೂಸ್ ಚಾನೆಲ್‌ಗಳಲ್ಲಿ‌ ಕಾರ್ಯ‌ ನಿರ್ವಹಿಸಿದ ಅನುಭವಿ ಪತ್ರಕರ್ತರು. ಅತಿ ಚಿಕ್ಕ ವಯಸ್ಸಿನಲ್ಲೇ ಉನ್ನತ ಪತ್ರಿಕೆಗಳ ಸಂಪಾದಕರಾಗಿ ಕಾರ್ಯನಿರ್ವಹಿಸಿ ಸಮರ್ಥವಾಗಿ ನಿಭಾಯಿಸಿಕೊಂಡು ಬಂದಿದ್ದಾರೆ. ಟಿವಿಯಲ್ಲದೇ ವಿಸ್ತಾರ ಡಿಜಿಟಲ್ ಆ್ಯಪ್‌ ಮೂಲಕ‌ ಮನೆ ಮನಗಳಿಗೆ ಸುದ್ದಿ ತಲುಪಿಸಲಾಗುತ್ತಿದೆ. ಹಾಗಾಗಿ ಎಲ್ಲರೂ ಆ್ಯಪ್ ಡೌನ್‌ಲೋಡ್ ಮಾಡಿ ಚಾನೆಲ್ ನೋಡಿ ಪ್ರೋತ್ಸಾಹಿಸೋಣ ಎಂದರು.

ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ‌.ಜಿ ನಾಯ್ಕ, ಸಾಹಿತಿ ಜಿ.ಜಿ ಹೆಗಡೆ ಬಾಳಗೋಡ, ಸ್ತ್ರೀ ರೋಗ ತಜ್ಞ, ಶ್ರೇಯಸ್‌ ಆಸ್ಪತ್ರೆಯ ಡಾ.ಶ್ರೀಧರ್ ವೈದ್ಯ, ತಾಲೂಕು‌ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ. ಎಸ್. ಗೌಡರ್, ಸಾಮಾಜಿಕ ಧುರೀಣ ಕೃಷ್ಣಮೂರ್ತಿ ಮಡಿವಾಳ, ಉದ್ಯಮಿ ಅನೀಲ್ ದೇವನಹಳ್ಳಿ ವೇದಿಕೆಯಲ್ಲಿದ್ದರು.

Vistara News Launch@ಸಿದ್ದಾಪುರ ವಿಸ್ತಾರ ಕನ್ನಡ ಸಂಭ್ರಮ

ಇದನ್ನೂ ಓದಿ | Vistara News Launch | ಮಾಧ್ಯಮಗಳಿಂದ ಸಮಾಜ ಸುವ್ಯವಸ್ಥಿತವಾಗಿದೆ: ತಹಸೀಲ್ದಾರ್‌ ಅಜಿತ್ ಕುಮಾರ್ ರೈ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಉತ್ತರ ಕನ್ನಡ

Uttara Kannada News: ಬನವಾಸಿ ಕದಂಬೋತ್ಸವ; ಪೂರ್ವ ಸಿದ್ಧತೆ ಪರಿಶೀಲಿಸಿದ ಸಚಿವ ಮಂಕಾಳ ವೈದ್ಯ

Uttara Kannada News: ಬನವಾಸಿಯಲ್ಲಿ ಮಾ. 5 ಹಾಗೂ 6 ರಂದು ನಡೆಯಲಿರುವ ಬನವಾಸಿ ಕದಂಬೋತ್ಸವದ ಅಂಗವಾಗಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಶನಿವಾರ ಪೂರ್ವ ಸಿದ್ಧತೆಯ ಪರಿಶೀಲನೆ ನಡೆಸಿದರು.

VISTARANEWS.COM


on

Banavasi Kadambotsava Minister Mankala Vaidya inspected the preparations
Koo

ಬನವಾಸಿ: ಬನವಾಸಿಯಲ್ಲಿ ಮಾ. 5 ಹಾಗೂ 6ರಂದು ನಡೆಯಲಿರುವ ಕದಂಬೋತ್ಸವದ (Banavasi Kadambotsava) ಅಂಗವಾಗಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಶನಿವಾರ ಪೂರ್ವ ಸಿದ್ದತೆಯ ಪರಿಶೀಲನೆ (Uttara Kannada News) ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕದಂಬೋತ್ಸವವನ್ನು ಅದ್ಧೂರಿಯಾಗಿ ನಡೆಸಲಾಗುವುದು. ಕದಂಬೋತ್ಸವಕ್ಕೆ ಆಗಮಿಸುವ ಜನರಿಗೆ ಯಾವುದೇ ರೀತಿಯ ತೊಂದರೆ ಆಗಬಾರದು. ಕುಡಿಯುವ ನೀರಿನ ವ್ಯವಸ್ಥೆ, ಪಾರ್ಕಿಂಗ್ ವ್ಯವಸ್ಥೆ, ಸ್ವಚ್ಚತಾ ವ್ಯವಸ್ಥೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಕದಂಬೋತ್ಸವ ಕಾರ್ಯಕ್ರಮದಲ್ಲಿ ಯಾವುದೇ ರೀತಿಯ ಲೋಪದೋಷಗಳು ಆಗದಂತೆ ನಿಗಾವಹಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇದನ್ನೂ ಓದಿ: Sirsi News: ಮಾ.5, 6‌ರಂದು ಬನವಾಸಿ ಕದಂಬೋತ್ಸವ

ಈಗಾಗಲೇ ಕದಂಬೋತ್ಸವ ಮೈದಾನದಲ್ಲಿ ಸಕಲ ಸಿದ್ಧತೆಗಳು ನಡೆಯುತ್ತಿವೆ. ಮಯೂರ ವರ್ಮ ವೇದಿಕೆ ಹಾಗೂ ವೇದಿಕೆಯ ಮುಂಭಾಗದಲ್ಲಿ ಬೃಹತ್ ಪ್ರಮಾಣದ ಪೆಂಡಲ್ ಹಾಕಲಾಗುತ್ತಿದೆ. ಫಲಪುಷ್ಪ ಪ್ರದರ್ಶನದ ತಯಾರಿಗೊಳ್ಳುತ್ತಿದೆ. ಕದಂಬೋತ್ಸವದ ಪ್ರಯುಕ್ತ ಜರುಗಲಿರುವ ಕ್ರೀಡಾಕೂಟಗಳಿಗೆ ಕ್ರೀಡಾಂಗಣ ಕಾರ್ಯ ಪೂರ್ಣಗೊಂಡಿದೆ. ಪ್ರಥಮ ಬಾರಿಗೆ ಕುಸ್ತಿ ಸ್ಪರ್ಧೆ ಏರ್ಪಡಿಸಿದ್ದು ಕುಸ್ತಿ ಪಂದ್ಯದ ಅಖಾಡ ಸಜ್ಜುಗೊಳಿಸಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: IPL 2024: ಐಪಿಎಲ್​ ಆರಂಭಕ್ಕೂ ಮುನ್ನವೇ ಹೈದರಾಬಾದ್​ಗೆ​ ಆತಂಕ; ಬೌಲಿಂಗ್​ ಕೋಚ್ ಅಲಭ್ಯ!​

ಈ ಸಂದರ್ಭದಲ್ಲಿ ಗ್ರೇಡ್ 2 ತಹಸೀಲ್ದಾರ್‌ ಶ್ರೀಕೃಷ್ಣ ಕಮಕರ್, ಗ್ರಾಪಂ ಅಧ್ಯಕ್ಷೆ ಬೀಬಿ ಆಯಿಷಾ ಖಾಸಿಮ್ ಖಾನ್, ಕಾಂಗ್ರೆಸ್ ಮುಖಂಡರಾದ ಸಿ.ಎಫ್. ನಾಯ್ಕ್, ಶ್ರೀನಿವಾಸ ಧಾತ್ರಿ, ಶಿವಾಜಿ ಕಾಳೇರಮನೆ, ಶ್ರೀಲತಾ ಕಾಳೇರಮನೆ ಮತ್ತಿತರರು ಇದ್ದರು.

Continue Reading

ಉತ್ತರ ಕನ್ನಡ

Uttara Kannada News: ಕರ್ತವ್ಯದಲ್ಲಿ ಲೋಪ, ದುರ್ನಡತೆ ಕಂಡು ಬಂದಲ್ಲಿ ಕಠಿಣ ಕ್ರಮ: ನ್ಯಾ. ಕೆ.ಎನ್.ಫಣೀಂದ್ರ

Uttara Kannada News: ಸರ್ಕಾರಿ ಅಧಿಕಾರಿಗಳು ಸಾರ್ವಜನಿಕ ಕೆಲಸಗಳಲ್ಲಿ ಕರ್ತವ್ಯ ಲೋಪ ಮತ್ತು ದುರ್ನಡತೆ ತೋರಿದಲ್ಲಿ ಅಂತಹವರ ವಿರುದ್ಧ ಲೋಕಾಯುಕ್ತ ಸಂಸ್ಥೆಯು ಅತ್ಯಂತ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ರಾಜ್ಯದ ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಎಚ್ಚರಿಕೆ ನೀಡಿದ್ದಾರೆ.

VISTARANEWS.COM


on

Public Grievance Receipt by upa Lokayukta Justice KN Phanindra
Koo

ಕಾರವಾರ: ಸರ್ಕಾರಿ ಅಧಿಕಾರಿಗಳು ಸಾರ್ವಜನಿಕ ಕೆಲಸಗಳಲ್ಲಿ ಕರ್ತವ್ಯ ಲೋಪ ಮತ್ತು ದುರ್ನಡತೆ ತೋರಿದಲ್ಲಿ ಅಂಥವರ ವಿರುದ್ಧ ಲೋಕಾಯಕ್ತ (Lokayukta) ಸಂಸ್ಥೆಯು ಅತ್ಯಂತ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ರಾಜ್ಯದ ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಎಚ್ಚರಿಕೆ (Uttara Kannada News) ನೀಡಿದರು.

ನಗರದ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಶನಿವಾರ ನಡೆದ, ಸಾರ್ವಜನಿಕರ ಕುಂದುಕೊರತೆಗಳ ಅಹವಾಲು ಸ್ವೀಕಾರ ಮತ್ತು ವಿಚಾರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಸರ್ಕಾರಿ ಕಚೇರಿಗಳಿಗೆ ಸಲ್ಲಿಸಿದಾಗ ಅವುಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಬೇಕು, ತಮ್ಮ ಕಚೇರಿ ವ್ಯಾಪ್ತಿಗೆ ಒಳಪಡದ ಅರ್ಜಿಯಾಗಿದ್ದಲ್ಲಿ ಅದನ್ನು ಸಂಬಂಧಪಟ್ಟ ಇಲಾಖೆಗೆ ವರ್ಗಾಯಿಸಿ ಈ ಬಗ್ಗೆ ಅರ್ಜಿದಾರರಿಗೆ ಸೂಕ್ತ ಹಿಂಬರಹ ನೀಡಬೇಕು. ಕಾನೂನು ವ್ಯಾಪ್ತಿಯಲ್ಲಿ ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದರು.

ಇದನ್ನೂ ಓದಿ: Karnataka Weather : ಬೇಸಿಗೆ ಆರಂಭದಲ್ಲೇ 40ರ ಗಡಿದಾಟಲಿದ್ಯಾ ಗರಿಷ್ಠ ತಾಪಮಾನ!

ಸರ್ಕಾರಿ ನೌಕರರು ಭ್ರಷ್ಟಾಚಾರದಲ್ಲಿ ತೊಡಗಿಕೊಳ್ಳುವುದು, ಸ್ವಜನ ಪಕ್ಷಪಾತ, ದುರ್ನಡತೆ, ಅಶಿಸ್ತು, ಕಳಪೆ ಕಾಮಗಾರಿಗಳು ಮತ್ತು ದುರುದ್ದೇಶ ಪೀಡಿತ ಕರ್ತವ್ಯ ಲೋಪದಲ್ಲಿ ತೊಡಗಿದ್ದಲ್ಲಿ ಅಂತಹವರ ವಿರುದ್ದ ಲೋಕಾಯುಕ್ತ ಕಾಯ್ದೆಯಡಿಯಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಸಾರ್ವಜನಿಕರು ಸರ್ಕಾರಿ ನೌಕರರ ವಿರುದ್ಧ ದೂರುಗಳನ್ನು ಸೂಕ್ತ ಅರ್ಜಿ ನಮೂನೆಯಲ್ಲಿ ಸಲ್ಲಿಸಬೇಕು. ಲೋಕಾಯುಕ್ತ ವ್ಯಾಪ್ತಿಗೆ ಒಳಪಡುವ ದೂರುಗಳನ್ನು ಮಾತ್ರ ಲೋಕಾಯುಕ್ತ ಸಂಸ್ಥೆ ವಿಚಾರಣೆ ನಡೆಸಲಿದ್ದು, ಖಾಸಗಿ ದೂರುಗಳು ಮತ್ತು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವ ದೂರುಗಳ ಬಗ್ಗೆ ತನಿಖೆ ನಡೆಸುವ ಅಧಿಕಾರ ಲೋಕಾಯುಕ್ತ ಸಂಸ್ಥೆಗಿಲ್ಲ. ಪ್ರಾಮಾಣಿಕ ಅಧಿಕಾರಿಗಳ ವಿರುದ್ದ ಸುಳ್ಳು ದೂರು ಸಲ್ಲಿಸುವವರ ವಿರುದ್ಧವೂ ಕ್ರಮ ಕೈಗೊಳ್ಳುವ ಅಧಿಕಾರ ಸಂಸ್ಥೆಗಿದೆ ಎಂದರು.

ಇದನ್ನೂ ಓದಿ: Lewis Hamilton: ಕನ್ನಡ ಮಾತನಾಡಿ ಕನ್ನಡಿಗರ ಮನಗೆದ್ದ ಫಾರ್ಮುಲಾ-1 ಲೋಕದ ಸಾಮ್ರಾಟ ಲೂಯಿಸ್‌ ಹ್ಯಾಮಿಲ್ಟನ್‌

ತಾವು ಉಪ ಲೋಕಾಯುಕ್ತರಾಗಿ ಅಧಿಕಾರ ಸ್ವೀಕರಿಸಿದ ನಂತರ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಭೇಟಿ ನೀಡಿ, ಸಾರ್ವಜನಿಕರ ಅಹವಾಲುಗಳನ್ನು ಆಲಿಸುತ್ತಿದ್ದು, ಲೋಕಾಯುಕ್ತ ಸಂಸ್ಥೆಯ ಕಾರ್ಯವ್ಯಾಪ್ತಿಯ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಪ್ರಸ್ತುತ ಉತ್ತರ ಕನ್ನಡ ಜಿಲ್ಲೆಯು 13ನೇ ಜಿಲ್ಲಾ ಭೇಟಿ ಆಗಿದ್ದು, ಈ ವರೆಗೆ ಭೇಟಿ ನೀಡಿರುವ ಎಲ್ಲಾ ಜಿಲ್ಲೆಗಳಲ್ಲಿ ಉತ್ತಮ ಸ್ಪಂದನೆ ದೊರೆತಿದ್ದು, ಭೇಟಿಯ ನಂತರ ನೌಕರರ ಕಾರ್ಯ ವಿಧಾನಗಳಲ್ಲಿ ಹಲವು ಸುಧಾರಣಾ ಕ್ರಮಗಳು ಆಗಿವೆ. ಸಾರ್ವಜನಿಕರು ಸಲ್ಲಿಸಿರುವ ಅಹವಾಲುಗಳಿಗೆ ಕಾನೂನು ವ್ಯಾಪ್ತಿಯಲ್ಲಿ ಸೂಕ್ತ ಪರಿಹಾರ ಒದಗಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ, ಲೋಕಾಯುಕ್ತ ಉಪ ನಿಬಂಧಕರಾದ ರಾಜಶೇಖರ್, ಚನ್ನಕೇಶವ ರೆಡ್ಡಿ, ಲೋಕಾಯುಕ್ತರ ಆಪ್ತ ಕಾರ್ಯದರ್ಶಿ ಕಿರಣ್ ಪಾಟೀಲ್, ಹಿರಿಯ ಸಿವಿಲ್ ನ್ಯಾಯಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ.ರೇಣುಕಾ ರಾಯ್ಕರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರ ಕುಮಾರ ಕಾಂದೂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ವಿಷ್ಣುವರ್ಧನ್, ಲೋಕಾಯುಕ್ತ ಎಸ್ಪಿ ಕುಮಾರಚಂದ್ರ ಉಪಸ್ಥಿತರಿದ್ದರು. ಅಪರ ಜಿಲ್ಲಾಧಿಕಾರಿ ಪ್ರಕಾಶ್ ರಾಜಪೂತ್ ಸ್ವಾಗತಿಸಿದರು.

ಇದನ್ನೂ ಓದಿ: IPL 2024: ಐಪಿಎಲ್​ ಆರಂಭಕ್ಕೂ ಮುನ್ನವೇ ಹೈದರಾಬಾದ್​ಗೆ​ ಆತಂಕ; ಬೌಲಿಂಗ್​ ಕೋಚ್ ಅಲಭ್ಯ!​

ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಸಲ್ಲಿಸಿದರು.

Continue Reading

ಉತ್ತರ ಕನ್ನಡ

Sirsi News: ಮಾ.5, 6‌ರಂದು ಬನವಾಸಿ ಕದಂಬೋತ್ಸವ

Sirsi News: ಬನವಾಸಿ ಕದಂಬೋತ್ಸವವು ಮಾ.5 ಹಾಗೂ 6‌ ರಂದು ತಾಲೂಕಿನ ಬನವಾಸಿಯಲ್ಲಿ ನಡೆಯಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಮಾ.5 ರಂದು ಮಂಗಳವಾರ ಸಂಜೆ 6ಕ್ಕೆ ಉದ್ಘಾಟಿಸಲಿದ್ದಾರೆ.

VISTARANEWS.COM


on

Banavasi Kadambotsava on 5th and 6th March
Koo

ಶಿರಸಿ: ಬನವಾಸಿ ಕದಂಬೋತ್ಸವವು (Kadambotsava) ಮಾ.5 ಹಾಗೂ 6‌ರಂದು ತಾಲೂಕಿನ ಬನವಾಸಿಯಲ್ಲಿ ನಡೆಯಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಮಾ.5 ರಂದು ಮಂಗಳವಾರ ಸಂಜೆ 6ಕ್ಕೆ (Sirsi News) ಉದ್ಘಾಟಿಸಲಿದ್ದಾರೆ.

ಬನವಾಸಿಯ ಮಯೂರ ವರ್ಮ ವೇದಿಕೆಯಲ್ಲಿ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌,‌ ಸಚಿವರಾದ ಮಂಕಾಳ ವೈದ್ಯ, ಶಿವರಾಜ ತಂಗಡಗಿ, ಎಚ್.ಕೆ.ಪಾಟೀಲ, ರಾಮಲಿಂಗಾರೆಡ್ಡಿ, ಕೃಷ್ಣೇ ಭೈರೇಗೌಡ, ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ, ಸತೀಶ ಸೈಲ್, ವಿಪಕ್ಷ ನಾಯಕ ಆರ್.ಅಶೋಕ, ಸಂಸದ ಅನಂತಕುಮಾರ ಹೆಗಡೆ, ಶಾಸಕ ಭೀಮಣ್ಣ ನಾಯ್ಕ ಇತರರು ಭಾಗವಹಿಸಲಿದ್ದು, ಶಾಸಕ ಶಿವರಾಮ ಹೆಬ್ಬಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಪಂಪ‌ ಪ್ರಶಸ್ತಿ ಪುರಸ್ಕೃತ‌ ನಾ.ಡಿಸೋಜ ಭಾಗವಹಿಸಿದ್ದಾರೆ.

ಮಾ.5ರ ಮಧ್ಯಾಹ್ನ 2ಕ್ಕೆ ಮಧುಕೇಶ್ವರ ದೇವಸ್ಥಾನದ ಎದುರಿನಿಂದ ಕದಂಬ ಸಾಂಸ್ಕೃತಿಕ ‌ಕಲಾ‌ ಮೆರವಣಿಗೆ ನಡೆಯಲಿದೆ. ಸಮಾರೋಪ‌ ಸಮಾರಂಭ ಮಾ.6ರಂದು ಸಂಜೆ 6ಕ್ಕೆ ಬನವಾಸಿಯಲ್ಲಿ ನಡೆಯಲಿದ್ದು, ಹಿರಿಯ ಸಾಹಿತಿ ಡಾ‌.ಜಮೀರುಲ್ಲ ಷರೀಫ್‌ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಇದನ್ನೂ ಓದಿ: ಮ್ಯಾಟ್ರಿಮೋನಿ ಸೇರಿ ಹಲವು ಆ್ಯಪ್‌ಗಳಿಗೆ ಗೂಗಲ್‌ ಕೊಕ್;‌ ಕೇಂದ್ರದ ಮುಂದಿನ ನಡೆ ಏನು?

ಸಾಂಸ್ಕೃತಿಕ ಸಂಭ್ರಮ

ಎರಡು‌ ದಿನಗಳ ಉತ್ಸವದ ಮೊದಲ‌ ದಿನ ಸುಜಾತಾ ಧಾರವಾಡ ಭಕ್ತಿ‌ಸಂಗೀತ, ಶಹನಾಯಿ ಡಾ. ಕೃಷ್ಣ ಬಾಲ್ಲೇಶ, ವಚನ ಸಂಗೀತ ರೋಹಿಣಿ ಹಿರೇಮಠ, ಸುಗಮ‌ ಸಂಗೀತ ಶಿರಸಿ ರತ್ನಾಕರ, ಭರತನಾಟ್ಯ ಡಾ. ಚೇತನಾ ರಾಧಾಕೃಷ್ಣನ್, ಶ್ರೇಯಾ ಪಾಟೀಲ, ಗಿಚ್ಚಿ ಗಿಲಿಗಿಲಿ ತಂಡ ಕಾಮಿಡಿ‌ ಶೋ, ಕೃತ್ತಿಕಾ ದಯಾನಂದ‌ ನೃತ್ಯ ವೈಭವ, ರವಿ‌ ತಂಡದಿಂದ ಆಕ್ಸಿಜನ್ ಡಾನ್ಸ್ ನಡೆಯಲಿದೆ. ಬಳಿಕ ರಘು ದೀಕ್ಷಿತ ತಂಡದಿಂದ ಸಂಗೀತ ಕಾರ್ಯಕ್ರಮ‌ ನಡೆಯಲಿದೆ.

ಇದನ್ನೂ ಓದಿ: Job Alert: ತೆಹ್ರಿ ಹೈಡ್ರೋ ಡೆವಲಪ್‌ಮೆಂಟ್‌ ಕಾರ್ಪೋರೇಷನ್‌ನಲ್ಲಿದೆ ಉದ್ಯೋಗಾವಕಾಶ; ಇಂದೇ ಅಪ್ಲೈ ಮಾಡಿ

6ರಂದು ಬೆಳಿಗ್ಗೆ 10:30 ರಿಂದ ಕವಿಗೋಷ್ಠಿ ನಡೆಯಲಿದ್ದು, ಸಾಹಿತಿ ಆರ್.ಡಿ.ಹೆಗಡೆ ಆಲ್ಮನೆ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಕವಿಗಳಾದ ಸುಧಾ ಆಡುಕಳ, ಪಿ.ಆರ್.ನಾಯ್ಕ, ಗಣಪತಿ ಬಾಳೆಗದ್ದೆ, ಶ್ರೀಧರ ಶೇಟ್, ಪದ್ಯಾಯಣ ಗೋವಿಂದ ಭಟ್ಟ, ನಾಗವವೇಣಿ ಹೆಗ್ಗರಸಿಮನೆ, ನಂದಿನಿ ಹೆದ್ದುರ್ಗ, ಕೃಷ್ಣ ನಾಯ್ಕ, ಡಾ. ಸಮೀರ ಹಾದಿಮನಿ ಭಾಗವಹಿಸುವರು. ಸಂತೋಷ ಕುಮಾರ ಮೆಹೆಂದಳೆ, ಬಿ.ಎ‌‌ನ್.ರಮೇಶ, ಜಿ.ಸು. ಬಕ್ಕಳ ಉಪಸ್ಥಿತ ಇರಲಿದ್ದಾರೆ. ಮಧ್ಯಾಹ್ನ 2.30ಕ್ಕೆ ಇತಿಹಾಸ ಗೋಷ್ಠಿ ನಡೆಯಲಿದೆ. ಕೆ.ಎನ್.ಹೊಸ್ಮನಿ ಅಧ್ಯಕ್ಷತೆ ವಹಿಸಲಿದ್ದಾರೆ. ಮೋಹನ ಭರಣಿ ವಿಷಯ ಮಂಡಿಸಲಿದ್ದಾರೆ.

ಸಂಜೆ 5ರಿಂದ ಶಮಾ ಭಾಗವತ್ ಚಿತ್ರದುರ್ಗ ನೃತ್ಯ ರೂಪಕ, ರೇಖಾ ದಿನೇಶ‌ ಸಂಗೀತ, ವಿನುತಾ ಯಲ್ಲಾಪುರ ನೃತ್ಯ, ನಿನಾದ ತಂಡದಿಂದ ತಬಲಾ ವಾದನ, ನಿರ್ಮಲಾ ಗೋಳಿಕೊಪ್ಪ ತಂಡದಿಂದ ಯಕ್ಷಗಾನ, ವಿಜೇತ ಸುದರ್ಶನ, ಬಸವರಾ ಬಂಟನೂರು, ಸುಗಮ ಸಂಗೀತ, ರಮೀಂದರ ಖುರಾನ ಒಡಿಸ್ಸಿ ನೃತ್ಯ, ಬಸಯ್ಯ ಗುತ್ತೇದಾರ ಜಾನಪದ ‌ಸಂಗೀತ, ಕೃಪಾ ಹೆಗಡೆ ಭರತನಾಟ್ಯ, ರಜತ್ ಹೆಗಡೆ ಹಾಗೂ ಶ್ರೀಲಕ್ಷ್ಮಿ ತಂಡದಿಂದ ಸಂಗೀತ ಕಾರ್ಯಕ್ರಮ ಜರುಗಲಿದೆ. ಬಳಿಕ ಹರಿಕೃಷ್ಣ ತಂಡದಿಂದ ಸಂಗೀತ ಸಂಭ್ರಮ ನಡೆಯಲಿದೆ.

ಸಾಂಪ್ರದಾಯಿಕವಾಗಿ ಪಂಪ ಪ್ರಶಸ್ತಿ ಕದಂಬೋತ್ಸವದಲ್ಲಿ ಪ್ರದಾನ ಆಗಬೇಕಿತ್ತು. ಆದರೆ ಈ ಬಾರಿ ಬೆಂಗಳೂರಿ‌ನಲ್ಲಿ ನಾ.ಡಿಸೋಜ ಅವರಿಗೆ ಪ್ರದಾನ ಆಗಿದೆ‌ ಎಂಬುದೂ ಉಲ್ಲೇಖನೀಯ. ಆದರೆ, ನಾ. ಡಿಸೋಜ ಅವರಿಗೆ ಆಹ್ವಾನ ಕಳಿಸಲಾಗಿದೆ.

ಇದನ್ನೂ ಓದಿ: Stress can cause neck pain: ಕುತ್ತಿಗೆ ನೋವೇ?‌ ಮಾನಸಿಕ ಒತ್ತಡವೂ ಕಾರಣವಾಗಿರಬಹುದು!

ಶಾಸಕ ಹೆಬ್ಬಾರ್ ಗೈರು

ಪ್ರತಿ ‌ಕದಂಬೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಯಿಂದ ಎಲ್ಲ ಹಂತದಲ್ಲೂ ಸಕ್ರೀಯವಾಗಿ ಇರುತ್ತಿದ್ದ ಸ್ಥಳೀಯ ಶಾಸಕ ಶಿವರಾಮ ಹೆಬ್ಬಾರ್ ಈ ಬಾರಿ ಆಹ್ವಾನ ಪತ್ರಿಕೆ ಬಿಡುಗಡೆಯಲ್ಲಿ‌ ಗೈರಾದರು. ರಾಜ್ಯ ರಾಜಕೀಯ ವಿದ್ಯಮಾನಗಳ ಬೆನ್ನಲ್ಲೇ ಕದಂಬೋತ್ಸವ ಕೂಡ ನಡೆಯುತ್ತಿದ್ದು, ಹೆಬ್ಬಾರ್ ಅವರ ಗೈರು ಅನೇಕ ಅರ್ಥಗಳಿಗೆ‌ ಕಾರಣವಾಗಿದೆ.

Continue Reading

ಉತ್ತರ ಕನ್ನಡ

Uttara Kannada News: ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಬಂದ ಮೇಲೆ ಮತಾಂಧ ಶಕ್ತಿಗಳ ಅಟ್ಟಹಾಸ: ಹರಿಪ್ರಕಾಶ್‌ ಕೋಣೆಮನೆ

Uttara Kannada News: ರಾಜ್ಯ ಕಾಂಗ್ರೆಸ್‌ ಸರ್ಕಾರವು ಮತಾಂಧರಿಗೆ ಕುಮ್ಮಕ್ಕು ನೀಡುತ್ತಿರುವುದು ಅತ್ಯಂತ ಸ್ಪಷ್ಟವಾಗಿ ಕಾಣುತ್ತಿದ್ದು, ಇದರಿಂದಾಗಿ ಕರ್ನಾಟಕದ ಜನತೆಗೆ ಅಭದ್ರತೆ ಎದುರಾಗಿದೆ ಎಂದು ರಾಜ್ಯ ಬಿಜೆಪಿ ವಕ್ತಾರ ಹರಿಪ್ರಕಾಶ್‌ ಕೋಣೆಮನೆ ಆರೋಪಿಸಿದ್ದಾರೆ.

VISTARANEWS.COM


on

State BJP Spokesperson Hariprakash konemane latest Pressmeet
Koo

ಯಲ್ಲಾಪುರ: ಕರ್ನಾಟಕದಲ್ಲಿ (Karnataka) ದಿನೇದಿನೇ ಕಾನೂನು ಸುವ್ಯವಸ್ಥೆ ಹದಗೆಡುತ್ತಿದೆ. ಇಂದು ನಾವು ಕರ್ನಾಟಕದಲ್ಲಿದ್ದೇವೆಯೋ ಪಾಕಿಸ್ತಾನ ಅಥವಾ ಅಫ್ಘಾನಿಸ್ತಾನದಲ್ಲಿದ್ದೇವೆಯೋ ಎಂದು ಯೋಚಿಸುವ ಪರಿಸ್ಥಿತಿ ಉಂಟಾಗಿದೆ. ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರ (Congress Government) ಬಂದಾಗಿನಿಂದ, ಮತಾಂಧ ಶಕ್ತಿಗಳು ರಾಜ್ಯದ ಉದ್ದಗಲಕ್ಕೂ ತಮ್ಮ ದುಷ್ಕೃತ್ಯಗಳನ್ನು ಮೆರೆಯಲು ಆರಂಭಿಸಿವೆ ಎಂದು ರಾಜ್ಯ ಬಿಜೆಪಿ ವಕ್ತಾರ ಹರಿಪ್ರಕಾಶ್‌ ಕೋಣೆಮನೆ (Uttara Kannada News) ಆರೋಪಿಸಿದರು.

ಪಟ್ಟಣದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದಾಗಿನಿಂದ ರಾಜ್ಯದ ವಿವಿಧೆಡೆ ಪಾಕಿಸ್ತಾನದ ಧ್ವಜ ಹಾರಾಡುವುದನ್ನು, ಪಾಕಿಸ್ತಾನದ ಪರ ಘೋಷಣೆ ಕೂಗುವ ಘಟನೆಗಳನ್ನು ನಾವೆಲ್ಲ ನೋಡಿದ್ದೇವೆ. ಮಂಗಳೂರಿನಲ್ಲಿ ನಡೆದ ಬಾಂಬ್‌ ಬ್ಲಾಸ್ಟ್‌ಗೆ ಸಂಬಂಧಿಸಿದ ಆರೋಪಿಗಳನ್ನು ತಮ್ಮ ಬ್ರದರ್ಸ್‌ ಎಂದು ರಾಜ್ಯದ ಉಪ ಮುಖ್ಯಮಂತ್ರಿಗಳು ಕರೆಯುತ್ತಾರೆ. ವಿಧಾನಸೌಧದ ಆವರಣದಲ್ಲೇ ಪಾಕಿಸ್ತಾನದ ಪರವಾಗಿ ಘೋಷಣೆ ಕೂಗಿದರೂ, ಅದನ್ನು ಸಾಬೀತುಪಡಿಸುವ ಎಫ್‌ಎಸ್‌ಎಲ್‌ ವರದಿ ಬಂದಾಗಲೂ, ಈವರೆಗೂ ಅಂತಹ ದೇಶದ್ರೋಹಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗುತ್ತಿಲ್ಲ. ಬದಲಾಗಿ ವರದಿ ನೀಡಿದ ಪೊಲೀಸ್‌ ಇಲಾಖೆಯನ್ನೇ ರಾಜ್ಯದ ಮುಖ್ಯ ಮಂತ್ರಿಗಳು ತರಾಟೆಗೆ ತೆಗೆದುಕೊಳ್ಳುತ್ತಿರುವುದು ವಿಪರ್ಯಾಸವಾಗಿದೆ ಎಂದು ದೂರಿದರು.

ಇದನ್ನೂ ಓದಿ: Stress can cause neck pain: ಕುತ್ತಿಗೆ ನೋವೇ?‌ ಮಾನಸಿಕ ಒತ್ತಡವೂ ಕಾರಣವಾಗಿರಬಹುದು!

ಕಾಂಗ್ರೆಸ್‌ ಸರ್ಕಾರವು ಮತಾಂಧರಿಗೆ ಕುಮ್ಮಕ್ಕು ನೀಡುತ್ತಿರುವುದು ಅತ್ಯಂತ ಸ್ಪಷ್ಟವಾಗಿ ಕಾಣುತ್ತಿದೆ. ಇದರಿಂದಾಗಿ ಕರ್ನಾಟಕದ ಜನತೆಗೆ ಅಭದ್ರತೆ ಎದುರಾಗಿದೆ. ಕೇವಲ ಮತಕ್ಕಾಗಿ ರಾಜ್ಯದಲ್ಲಿ ಆತಂಕದ ಸನ್ನಿವೇಶವನ್ನು ಹುಟ್ಟುಹಾಕುವ, ಬಾಂಬ್‌ ಬ್ಲಾಸ್ಟ್‌ ಮಾಡುವ, ದೇಶದ್ರೋಹಿಗಳ ಪರವಾಗಿ ಕಾಂಗ್ರೆಸ್‌ ಸರ್ಕಾರ ನಿಂತಿರುವುದು ಸ್ಪಷ್ಟವಾಗಿದೆ. ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್‌ ಬ್ಲಾಸ್ಟ್‌ನಲ್ಲಿ ಸುಧಾರಿತ ಸ್ಫೋಟಕ ಬಳಕೆಯ ಕುರಿತು ಪ್ರಾಥಮಿಕ ವರದಿ ಇದ್ದಾಗಲೂ ಕೂಡ, ರಾಜ್ಯ ಸರ್ಕಾರ ಇದು ವ್ಯಾಪಾರದ ವೈಷಮ್ಯದ ಕಾರಣದಿಂದ ಆಗಿರುವ ಘಟನೆ ಎಂಬ ಶಂಕೆ ವ್ಯಕ್ತಪಡಿಸಿ ತನಿಖೆಯ ದಿಕ್ಕು ತಪ್ಪಿಸುವ ಪ್ರಯತ್ನ ನಡೆಸಲಾಗುತ್ತಿದೆ. ಈ ಮೂಲಕ ಇಂತಹ ವಿಧ್ವಂಸಕ ಕೃತ್ಯ ನಡೆಸುವವರಿಗೆ ಸರ್ಕಾರ ನೇರವಾಗಿ ಕುಮ್ಮಕ್ಕು ನೀಡುತ್ತಿದೆ ಎಂದರು.

ಇಂತಹ ಘಟನೆಗಳು ನಡೆದಾಗ, ಘಟನೆಯ ಕುರಿತು ಸಮರ್ಪಕ ತನಿಖೆ ಕೈಗೊಂಡು, ಅದರ ಹಿಂದಿನ ಕಾರಣೀಕರ್ತರು ಯಾವ ಧರ್ಮಕ್ಕೆ ಸೇರಿದವರು ಎನ್ನುವ ವಿಶ್ಲೇಷಣೆಗೆ ಹೋಗದೆ ಕಠಿಣ ಶಿಕ್ಷೆ ನೀಡಬೇಕು. ಉಪ ಮುಖ್ಯಮಂತ್ರಿಗಳು ಬ್ರ್ಯಾಂಡ್‌ ಬೆಂಗಳೂರು ನಿರ್ಮಾಣ ಮಾಡುವುದಾಗಿ ಘೋಷಿಸಿದ್ದರು. ಆದರೆ ಈಗ ಅದು ಬಾಂಬ್‌ ಬೆಂಗಳೂರಾಗಿ ಮಾರ್ಪಾಡಾಗುತ್ತಿರುವುದು ವಿಷಾದನೀಯ. ಜಗತ್ತಿನ ವಿವಿಧ ಉದ್ಯಮಗಳು ಬೆಂಗಳೂರಿನಲ್ಲಿ ತಮ್ಮ ನೆಲೆಯನ್ನು ಕಂಡುಕೊಂಡಿರುವುದು ಕರ್ನಾಟಕದ ಅಭಿವೃದ್ಧಿಗೆ ಪೂರಕವಾಗಿದೆ. ಆದರೆ ಭಯದ ವಾತಾವರಣ ರಾಜ್ಯದಲ್ಲಿ ನಿರ್ಮಾಣವಾಗುತ್ತಿರುವುದು, ಕಾಂಗ್ರೆಸ್‌ ಸರ್ಕಾರದ ಆಡಳಿತ ವೈಫಲ್ಯತೆಯನ್ನು ತೋರುತ್ತದೆ ಎಂದರು.

ಇದನ್ನೂ ಓದಿ: Yadgiri News: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಒತ್ತಾಯಿಸಿ ಇಷ್ಟಲಿಂಗ ಪೂಜೆ ನಡೆಸಿ ಪ್ರತಿಭಟನೆ

ರಾಜ್ಯದಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ಹಾಗೂ ಹತ್ಯೆಯಾಗುತ್ತಿವೆ. ಬೆಳಗಾವಿಯಲ್ಲಿ ಮಹಿಳೆಯನ್ನು ಬೆತ್ತಲೆಗೊಳಿಸಿ ಮೆರವಣಿಗೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಯಲ್ಲಾಪುರದಲ್ಲಿ ಕಳೆದ ವಾರ ನಡೆದ ಸಿದ್ದಿ ಜನಾಂಗದ ಯುವಕನ ಕೊಲೆ ಪ್ರಕರಣವನ್ನೂ ಮುಚ್ಚಿಹಾಕುವ ಪ್ರಯತ್ನ ನಡೆಯುತ್ತಿದೆ ಎನ್ನುವ ಶಂಕೆ ಮೂಡುತ್ತಿದೆ. ಇವೆಲ್ಲವನ್ನು ಗಮನಿಸಿದಾಗ ಜನರಲ್ಲಿ ಅರಿವು ಮೂಡಿಸುವ ಕಾರ್ಯ ಆಗಬೇಕಿದೆ. ಪೊಲೀಸ್‌ ಇಲಾಖೆಯೂ ಸಹ ಎಚ್ಚೆತ್ತುಕೊಳ್ಳುವ ಅವಶ್ಯಕತೆ ಇದೆ. ಪೊಲೀಸ್‌ ಇಲಾಖೆಯು ಜವಾಬ್ದಾರಿಯುತ ಕ್ರಮ ಕೈಗೊಳ್ಳದೆ ಸರ್ಕಾರದ ಕೈಗೊಂಬೆಯಾಗುತ್ತ ಹೋಗಿ ಭಯೋತ್ಪಾದಕರ, ಕೊಲೆಗಡುಕರ ರಕ್ಷಣೆಗೆ ನಿಂತಲ್ಲಿ ಮುಂದೊಂದು ದಿನ ಪೊಲೀಸರ ರಕ್ಷಣೆಗೂ ಯಾರೂ ಇರುವುದಿಲ್ಲ. ಜನಸಾಮಾನ್ಯರು ಕಾನೂನನ್ನು ಕೈಗೆತ್ತುಕೊಳ್ಳುವ ಪರಿಸ್ಥಿತಿ ಎದುರಾಗದಂತೆ ಪೊಲೀಸ್‌ ಇಲಾಖೆ ನೋಡಿಕೊಳ್ಳಬೇಕಿದೆ ಎಂಬುದು ನಮ್ಮ ಮನವಿಯಾಗಿದೆ ಎಂದರು.

ಇದನ್ನೂ ಓದಿ: ಟಿ20 ವಿಶ್ವಕಪ್​ ತಂಡ ಪ್ರಕಟಕ್ಕೆ ಗಡುವು ನೀಡಿದ ಐಸಿಸಿ; ಭಾರತ ಸಂಭಾವ್ಯ ತಂಡ ರೆಡಿ!

ಈ ಸಂದರ್ಭದಲ್ಲಿ ಬಿಜೆಪಿ ಯಲ್ಲಾಪುರ ಮಂಡಲದ ನಿಕಟಪೂರ್ವ ಅಧ್ಯಕ್ಷ ಗೋಪಾಲಕೃಷ್ಣ ಗಾಂವ್ಕರ್‌, ಪ್ರಮುಖರಾದ ಗಣಪತಿ ಮಾನಿಗದ್ದೆ, ಮಾಧ್ಯಮ ಪ್ರಕೋಷ್ಠದ ಸಂಚಾಲಕ ಕೆ.ಟಿ. ಹೆಗಡೆ ಇದ್ದರು.

Continue Reading
Advertisement
Blast in Bangalore Rameshwaram Cafe Accused
ಬೆಂಗಳೂರು4 mins ago

Blast in Bengaluru : ರಾಮೇಶ್ವರಂ ಕೆಫೆ ಬ್ಲಾಸ್ಟ್‌ನಲ್ಲಿ ಒಬ್ಬನೇ ಭಾಗಿ? ಏನಿದು ಒಂಟಿ ತೋಳ ದಾಳಿ?

Child assaulted by Mother and her boyfriend in Bengaluru
ಬೆಂಗಳೂರು23 mins ago

Inhuman Behaviour : ಬಾಯ್‌ ಫ್ರೆಂಡ್‌ ಜತೆ ಸೇರಿ ಹೆತ್ತ ಮಗುವಿನ ಮರ್ಮಾಂಗ ಕಚ್ಚಿದಳು ರಾಕ್ಷಸಿ!

Deepika Padukone, Ranveer Singh perform on Galla Goodiyan
ಬಾಲಿವುಡ್37 mins ago

Deepika Padukone: ಅನಂತ್ ಅಂಬಾನಿ ಪ್ರಿ ವೆಡ್ಡಿಂಗ್‌: ಸಖತ್‌ ಸ್ಟೆಪ್ಸ್ ಹಾಕಿದ ಪ್ರೆಗ್ನೆಂಟ್‌ ನಟಿ!

bjp list
Lok Sabha Election 202445 mins ago

BJP Candidates List: ಬಿಜೆಪಿ ಮೊದಲ ಪಟ್ಟಿಯಲ್ಲಿ 33 ಹಾಲಿ ಸಂಸದರಿಗೆ ಟಿಕೆಟಿಲ್ಲ!

Terrorist murder
ಪ್ರಮುಖ ಸುದ್ದಿ46 mins ago

Pakistan Terrorist : ಪಾಕಿಸ್ತಾನದಲ್ಲಿ ಭಾರತದ ವಾಂಟೆಡ್​ ಲಿಸ್ಟ್​ನಲ್ಲಿರುವ ಉಗ್ರನ ಹತ್ಯೆ; ಯಾರಿವ ಉಗ್ರಗಾಮಿ?

Chaithra Hebbar News found
ದಕ್ಷಿಣ ಕನ್ನಡ1 hour ago

Chaithra Hebbar : ಚೈತ್ರಾ ಹೆಬ್ಬಾರ್‌ ಮಿಸ್ಸಿಂಗ್‌ ಕೇಸ್‌ಗೆ ಬಿಗ್‌ ಟ್ವಿಸ್ಟ್‌; ಪ್ರಿಯಕರ ಹಿಮಾಚಲದಲ್ಲಿ; ಅವಳೆಲ್ಲಿ?

Shah Rukh Khan chants Jai Shri Ram at Anant-Radhika pre-wedding
ಬಾಲಿವುಡ್1 hour ago

Shah Rukh Khan: ಅಂಬಾನಿ ಮಗನ ಮದುವೆ: ʻಜೈ ಶ್ರೀ ರಾಮ್’ ಎಂದ ಶಾರುಖ್‌ ಖಾನ್‌!

Modi sha
ದೇಶ1 hour ago

BJP Candidates List : ಬಿಜೆಪಿ ಮೊದಲ ಪಟ್ಟಿಯಲ್ಲಿ ಟಿಕೆಟ್ ಪಡೆದ ಘಟಾನುಘಟಿ ನಾಯಕರಿವರು…

operation
ವೈರಲ್ ನ್ಯೂಸ್2 hours ago

Viral News: ವೈದ್ಯರ ಎಡವಟ್ಟು; ಪಿತ್ತಕೋಶದ ಶಸ್ತ್ರಚಿಕಿತ್ಸೆ ಬದಲು ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆಸಿದರು !

Illicit relationship mysore.webp
ಮೈಸೂರು2 hours ago

Illicit Relationship : ಅನೈತಿಕ ಸಂಬಂಧ ಪ್ರಶ್ನಿಸಿದ ಪತ್ನಿಗೆ ಮನೆಯಿಂದ್ಲೇ ಹೊರಗಟ್ಟಿದ ಭೂಪ

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ5 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ5 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ3 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ5 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ4 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ3 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

read your daily horoscope predictions for march 3rd 2024
ಭವಿಷ್ಯ7 hours ago

Dina Bhavishya : ಈ ರಾಶಿಯವರು ಆತುರದಲ್ಲಿ ಇಂದು ಈ ನಿರ್ಧಾರವನ್ನು ತೆಗೆದುಕೊಳ್ಳಬೇಡಿ!

Rameswaram cafe bomb blast case Accused caught on CCTV
ಬೆಂಗಳೂರು18 hours ago

Blast In Bengaluru: ಸನ್ನೆ ಮಾಡಿ ಪೊಲೀಸರಿಗೆ ಶಂಕಿತನ ಚಾಲೆಂಜ್! ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಏನು

Rameswaram Cafe Blast Suspected travels in BMTC Volvo bus
ಬೆಂಗಳೂರು22 hours ago

Blast In Bengaluru: ರಾಮೇಶ್ವರಂ ಕೆಫೆ ಬ್ಲಾಸ್ಟ್‌; ವೋಲ್ವೋ ಬಸ್‌ನಲ್ಲಿ ಬಾಂಬರ್ ಸಂಚಾರ, ಸಿಸಿಟಿವಿಯಲ್ಲಿ ಸೆರೆ

Blast in Bengaluru Time bomb planted in rameshwaram cafe Important evidence found
ಬೆಂಗಳೂರು2 days ago

Blast in Bengaluru: ರಾಮೇಶ್ವರಂ ಕೆಫೆ ಬ್ಲಾಸ್ಟ್‌; ಹೋಟೆಲ್‌ನಲ್ಲಿಟ್ಟಿದ್ದು ಟೈಂ ಬಾಂಬ್‌? ಸಿಕ್ಕಿದೆ ಮಹತ್ವದ ಸಾಕ್ಷ್ಯ

rameshwaram cafe bengaluru incident
ಬೆಂಗಳೂರು2 days ago

Blast in Bengaluru : ರಾಮೇಶ್ವರಂ ಕೆಫೆ ಸ್ಫೋಟದ ಸ್ಥಳದಲ್ಲಿ ಬ್ಯಾಟರಿ ಪತ್ತೆ!

Elephants spotted in many places
ಹಾಸನ2 days ago

Elephant Attack: ಹಾಸನ, ರಾಮನಗರ, ಮೈಸೂರಲ್ಲಿ ಆನೆ ಬೇನೆ; ಬೆಳಗಾವಿಯಲ್ಲಿ ಬಿಂದಾಸ್‌ ಓಡಾಟ

read your daily horoscope predictions for march 1st 2024
ಭವಿಷ್ಯ2 days ago

Dina Bhavishya : ಈ ರಾಶಿಯವರು ಪ್ರಮುಖ ಜನರೊಡನೆ ವ್ಯವಹರಿಸುವಾಗ ಎಚ್ಚರಿಕೆಯಿಂದ ಮಾತನಾಡಿ

dina bhavishya read your daily horoscope predictions for February 28 2024
ಭವಿಷ್ಯ3 days ago

Dina Bhavishya: ಇಂದು 12 ರಾಶಿಯವರ ಲಕ್ಕಿ ನಂಬರ್‌ ಏನು? ಯಾರಿಗೆ ಧನ ಲಾಭ?

Dina Bhavishya
ಭವಿಷ್ಯ4 days ago

Dina Bhavishya : ಈ ರಾಶಿಯವರು ಇಂದು ದೊಡ್ಡದೊಂದು ಸಮಸ್ಯೆಯಿಂದ ಮುಕ್ತಿ ಪಡೆಯುವಿರಿ

Rajya Sabha election Pakistan Zindabad slogans raised inside Vidhana Soudha by Nasir Hussain supporters
ರಾಜಕೀಯ5 days ago

ವಿಧಾನಸೌಧದೊಳಗೇ ಪಾಕಿಸ್ತಾನ ಜಿಂದಾಬಾದ್‌ ಘೋಷಣೆ; ನಾಸಿರ್‌ ಹುಸೇನ್‌ ಬೆಂಬಲಿಗ ದೇಶದ್ರೋಹಿಗಳ ಉದ್ಧಟತನ

ಟ್ರೆಂಡಿಂಗ್‌