Site icon Vistara News

ವಿಶ್ವ ದರ್ಶನ ಸೆಂಟ್ರಲ್ ಸ್ಕೂಲ್‌ನಲ್ಲಿ ಕಾನೂನು ಅರಿವು ಕಾರ್ಯಾಗಾರ; ನ್ಯಾಯಾಂಗ ವ್ಯವಸ್ಥೆಯ ಕಿರು ಮಾಹಿತಿ

ನ್ಯಾಯ ದಿನ

ಶಿರಸಿ: ಯಲ್ಲಾಪುರ ಪಟ್ಟಣದ ವಿಶ್ವ ದರ್ಶನ ಸೆಂಟ್ರಲ್ ಸ್ಕೂಲ್‌ನಲ್ಲಿ ವಿಶ್ವ ನ್ಯಾಯ ದಿನದ ಅಂಗವಾಗಿ ಅರಿವು ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ನ್ಯಾಯವಾದಿ ಎನ್.ಟಿ.ಗಾಂವ್ಕರ್‌ ವಿದ್ಯಾರ್ಥಿಗಳಿಗೆ ವಿಶ್ವನ್ಯಾಯ ದಿನದ ಹಿನ್ನೆಲೆ, ಕಾನೂನುಗಳ ಕಿರುಪರಿಚಯ, ವಿದ್ಯಾರ್ಥಿಗಳು ಹೊಂದಿರಬೇಕಾದ ನ್ಯಾಯಾಂಗ ವ್ಯವಸ್ಥೆಯ ಮಾಹಿತಿಯನ್ನು ನೀಡಿದರು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಾವ ರೀತಿ ವಿವಾದಗಳನ್ನು ಬಗೆಹರಿಸಲು ನ್ಯಾಯಿಕ ವ್ಯವಸ್ಥೆ ಇರುತ್ತದೆ. ಅವು ಯಾವ ರೀತಿ ಬಗೆಹರಿಯುತ್ತದೆ ಎನ್ನುವ ಬಗ್ಗೆ ಮಾಹಿತಿ ನೀಡಿದರು. ವಿದ್ಯಾರ್ಥಿಗಳು ಕಾನೂನಿನ ಬಗ್ಗೆ ಸೂಕ್ತ ಅರಿವು ಹೊಂದಿರುವುದು ತೀರಾ ಅತ್ಯಾವಶ್ಯಕ ಎಂದರು.

ಸಂವಿಧಾನವು ಪ್ರಜೆಗಳಿಗೆ ನೀಡಿರುವ ಮೂಲಭೂತ ಹಕ್ಕು, ಕರ್ತವ್ಯಗಳ ಕುರಿತು ಅರಿತಿರಬೇಕು. ಜತೆಗೆ ದೇಶದಲ್ಲಿ ಕಾನೂನು ವ್ಯವಸ್ಥೆ ಯಾವ ರೀತಿ ಇರುತ್ತದೆ ಎನ್ನುವ ಅರಿವಿರಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಪ್ರಾಚಾರ್ಯರಾದ ಮಹಾದೇವಿ ಭಟ್, ಕವಿತಾ ಹೆಬ್ಬಾರ, ದೀಪಕ್ ಆಚಾರಿ ಸೇರಿದಂತೆ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ | ಎಡಿಜಿಪಿ ಆತ್ಮಸಾಕ್ಷಿ ಕೇಳಿಕೊಳ್ಳಲಿ: ಎಸಿಬಿ ವಿರುದ್ಧ ಮತ್ತೆ ನ್ಯಾಯಮೂರ್ತಿ ಎಚ್‌.ಪಿ. ಸಂದೇಶ್‌ ಆಕ್ರೋಶ

Exit mobile version