ಯಲ್ಲಾಪುರ: ತಾಲೂಕಿನ ಉಮ್ಮಚಗಿ ಗ್ರಾ.ಪಂ ವ್ಯಾಪ್ತಿಯ ಕೋಟೆಮನೆಯಲ್ಲಿ ದುಷ್ಕರ್ಮಿಗಳು ವಿಷವಿಕ್ಕಿ 46 ದಷ್ಟಪುಷ್ಟ ಕೋಳಿಗಳು ಸಾಯುವಂತೆ ಮಾಡಿದ್ದಾರೆ.
ಕೋಟೆಮನೆಯ ಕಲಾವತಿ ಸೋಮಿನ್ ಎಂಬ ಸಿದ್ದಿ ಜನಾಂಗದ ಬಡ ಮಹಿಳೆ ಗುಡಿಸಿಲಿನಲ್ಲಿ ವಾಸವಾಗಿದ್ದು, ಹೊಟ್ಟೆಪಾಡಿಗಾಗಿ ಮನೆಯ ಆವರಣದಲ್ಲಿ ಟರ್ಕಿ ಜಾತಿಯ ಕೋಳಿಗಳನ್ನು ಸ್ವ ಸಹಾಯ ಸಂಘದಲ್ಲಿ ಸಾಲ ಮಾಡಿ ಸಾಕಿದ್ದಳು. ಕೋಳಿಗಳು ಸುತ್ತಮುತ್ತ ಓಡಾಡುತ್ತ ಕಿರಿಕಿರಿ ಉಂಟು ಮಾಡುತ್ತವೆ ಎಂಬ ಕಾರಣದಿಂದ ದುಷ್ಕರ್ಮಿಗಳು ವಿಷ ಹಾಕಿ ಕೊಂದು ದುಷ್ಕೃತ್ಯ ಮೆರೆದಿದ್ದಾರೆ ಎಂದು ತಿಳಿದು ಬಂದಿದೆ. ಕೋಳಿಗಳ ಸಾವಿನಿಂದ ಸುಮಾರು 70 ಸಾವಿರ ರೂ. ನಷ್ಟ ಉಂಟಾಗಿದ್ದು, ಬಡ ಮಹಿಳೆ ಕಂಗಾಲಾಗಿದ್ದಾಳೆ.
ಕೂಲಿ ಮಾಡುವ ಬಡ ಮಹಿಳೆಯು ಸಾಕಿದ್ದ ಕೋಳಿಯನ್ನು ದುಷ್ಕರ್ಮಿಗಳು ವಿಷ ಹಾಕಿ ಕೊಂದಿರುವುದು ದುರದೃಷ್ಟಕರ. ಕೋಳಿಗಳು ಸತ್ತಿರುವುದರಿಂದ ಮಹಿಳೆ ಸಂಕಷ್ಟಕ್ಕೆ ಒಳಗಾಗಿದ್ದು, ಹೀನ ಕೃತ್ಯ ಎಸಗಿದವರನ್ನು ಪತ್ತೆ ಮಾಡಿ ಕ್ರಮ ಜರುಗಿಸಬೇಕು ಹಾಗೂ ಮಹಿಳೆಗೆ ಪಂಚಾಯಿತಿಯಿಂದ ಪರಿಹಾರ ದೊರಕಿಸಿ ಕೊಡುವಂತೆ ಒತ್ತಾಯಿಸಲಾಗುವುದು ಎಂದು ಉಮ್ಮಚಗಿ ಗ್ರಾ.ಪಂ ಸದಸ್ಯ ಗ ರಾ ಭಟ್ಟ ತಿಳಿಸಿದ್ದಾರೆ.
ಇದನ್ನೂ ಓದಿ | Border Dispute | ಬೆಳಗಾವಿ ಅಧಿವೇಶನಕ್ಕಾಗಿ ಆಗಮಿಸಿದ್ದ ಸರ್ಕಾರಿ ವಾಹನಕ್ಕೆ ಮರಾಠಿ ಪುಂಡರಿಂದ ಕಲ್ಲು ತೂರಾಟ