ಯಲ್ಲಾಪುರ: ತಾಲೂಕಿನ ಗುಳ್ಳಾಪುರ ಸರ್ಕಾರಿ ಪ್ರೌಢಶಾಲೆಯಿಂದ ಮಂಗಳವಾರ ಮಧ್ಯಾಹ್ನ (ಡಿ.೨೭) ಪಿಕ್ನಿಕ್ಗೆ ತೆರಳಿದ್ದ ಸಂದರ್ಭದಲ್ಲಿ ಗಂಗಾವಳಿ ನದಿಗೆ ಕೈ ತೊಳೆಯಲು ಇಳಿದ ವಿದ್ಯಾರ್ಥಿ ಕಣ್ಮರೆಯಾಗಿದ್ದ. ಈ ಹಿನ್ನೆಲೆಯಲ್ಲಿ ತೀವ್ರವಾಗಿ ಶೋಧ ಕಾರ್ಯ ನಡೆದಿತ್ತು. ಸಂಜೆ ವೇಳೆಗೆ ಕಣ್ಮರೆಯಾಗಿದ್ದ ಬಾಲಕ ಶವವಾಗಿ ಪತ್ತೆಯಾಗಿದ್ದಾನೆ.
ಪ್ರಕಾಶ ವಿಠ್ಠು ಪಟಕಾರೆ (16) ಶವವಾಗಿ ಪತ್ತೆಯಾದ ವಿದ್ಯಾರ್ಥಿ. ಈತ ಗುಳ್ಳಾಪುರದ ವಸತಿ ನಿಲಯದಲ್ಲಿದ್ದು ಅಭ್ಯಾಸ ಮಾಡುತ್ತಿದ್ದ. ಗುಳ್ಳಾಪುರ ಸರ್ಕಾರಿ ಪ್ರೌಢಶಾಲೆಯಿಂದ 66 ವಿದ್ಯಾರ್ಥಿಗಳು ಪಿಕ್ನಿಕ್ಗೆ ತೆರಳಿದ್ದರು. ಈ ವೇಳೆ ಪ್ರಕಾಶ ನೀರಿನಲ್ಲಿ ಇಳಿದಿದ್ದು, ಕಾಲು ಜಾರಿ ಬಿದ್ದಿದ್ದಾನೆ.
ಸ್ಥಳೀಯ ಮೀನುಗಾರರು ನದಿಯಲ್ಲಿ ತೀವ್ರ ಹುಡುಕಾಟ ನಡೆಸಿದ ನಂತರ ಸಂಜೆ 5 ಗಂಟೆ ಸುಮಾರಿಗೆ ಮೃತದೇಹ ಪತ್ತೆಯಾಗಿದೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ | Flipkart employees | ಫ್ಲಿಪ್ ಕಾರ್ಟ್ನ 25,000 ಮಾಜಿ, ಹಾಲಿ ಉದ್ಯೋಗಿಗಳಿಗೆ 5670 ಕೋಟಿ ರೂ. ನಗದು ವಿತರಣೆ ಸಂಭವ