ಕಾರವಾರ: ಮಳೆಯಿಂದ ನೀರು ತುಂಬಿಕೊಂಡಿದ್ದ ಪಾಳುಬಿದ್ದ ಕ್ವಾರಿಯಲ್ಲಿ ಈಜಲು ಹೋದ ಯುವಕ ಮುಳುಗಿ ಮೃತಪಟ್ಟ ಘಟನೆ ಭಟ್ಕಳದಲ್ಲಿ ನಡೆದಿದೆ. ಕಾರ್ಗದ್ದೆ ನಿವಾಸಿ ಜುಬೇರ್ ಇರ್ಶಾದ್ ಅಲಿ ಅಕ್ಬರ್ ಮೃತ ದುರ್ದೈವಿ
ಭಟ್ಕಳದ ಶಿರಾಲಿ ಗ್ರಾಮದ ಹುಲ್ಲುಕ್ಕಿಯ ಕೆಂಪುಕಲ್ಲು ಕ್ವಾರಿಯಲ್ಲಿ ಘಟನೆ ನಡೆದಿದೆ. ಶುಕ್ರವಾರ ರಜೆಯಿದ್ದ ಹಿನ್ನೆಲೆ ಸ್ನೇಹಿತರೊಂದಿಗೆ ಈಜಲು ಯುವಕ ತೆರಳಿದ್ದ.
ಹಲವಾರು ವರ್ಷಗಳ ಹಿಂದೆಯೇ ಕ್ವಾರಿಯಲ್ಲಿ ಕೆಲಸ ಸ್ಥಗಿತವಾಗಿತ್ತು. ಮಳೆಯಿಂದಾಗಿ ನೀರು ನಿಂತಿದ್ದ ಕ್ವಾರಿ ಎಷ್ಟು ಆಳವಾಗಿದೆ ಎನ್ನುವುದು ತಿಳಿದುಬಂದಿಲ್ಲ. ಆಳ ತಿಳಿಯದೇ ಈಜುತ್ತಿದ್ದ ವೇಳೆ ಮುಳುಗಿದ್ದಾನೆ.
ವಿಷಯ ತಿಳಿದು ಸ್ಥಳದಲ್ಲಿ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಜಮಾಯಿಸಿದ್ದಾರೆ. ಮುಳುಗಿದ್ದ ಯುವಕನ ಮೃತದೇಹವನ್ನು ಸ್ಥಳೀಯರು ಹೊರತೆಗೆದಿದ್ದಾರೆ. ತಹಸಿಲ್ದಾರ್ ಡಾ. ಸುಮಂತ. ಬಿ, ಸಿ.ಪಿ.ಐ ಮಹಾಬಲೇಶ್ವರ ನಾಯ್ಕ, ಪಿ.ಎಸ್.ಐ ಭರತ್ ನಾಯಕ, ಭಟ್ಕಳ ಅಗ್ನಿಶಾಮಕ ದಳ, ಎಸ್.ಡಿ.ಆರ್.ಆಫ್ ತಂಡ, ಮಾವಳ್ಳಿ ಕಂದಾಯ ನಿರೀಕ್ಷಕ ಶ್ರೀನಿವಾಸ ಮಾಸ್ತಿ, ಗ್ರಾಮ ಲೆಕ್ಕಾಧಿಕಾರಿ ಹೇಮಾ ನಾಯ್ಕ ಮುಂತಾದವರು ಸ್ಥಳದಲ್ಲಿದ್ದರು. ಭಟ್ಕಳ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ | ಚಾಮರಾಜನಗರ| ಭತ್ತ ನಾಟಿ ವೇಳೆ ಸಿಡಿಲು ಬಡಿದು ರೈತ ಸಾವು, ನದಿ ನೀರಲ್ಲಿ ಮುಳುಗಿದ ಪೊಲೀಸ್ ಸ್ಟೇಷನ್