ಬೆಂಗಳೂರು: ಉತ್ಥಾನ ಮಾಸಪತ್ರಿಕೆಯಿಂದ ಕಾಲೇಜು ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆ-೨೦೨೨ರ (Utthana Essay Competition) ಫಲಿತಾಂಶ ಪ್ರಕಟವಾಗಿದ್ದು, ಮೈಸೂರಿನ ಎಸ್.ಎನ್. ದರ್ಶನ್ ಪ್ರಥಮ ಬಹುಮಾನ (೧೦,೦೦೦ ರೂ.) ಪಡೆದಿದ್ದಾರೆ.
ಉತ್ಥಾನ ಕಳೆದ ೭ ವರ್ಷಗಳಿಂದ ಕಾಲೇಜು ವಿದ್ಯಾರ್ಥಿಗಳಿಗಾಗಿ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆ ಆಯೋಜಿಸುತ್ತಾ ಬಂದಿದೆ. ೨೦೨೨ ಸಾಲಿನ ಪ್ರಬಂಧ ಸ್ಪರ್ಧೆಯಲ್ಲಿ ‘ಭವಿಷ್ಯದಲ್ಲಿ ನಾನೇನಾಗಬೇಕು?: ಉದ್ಯೋಗದಾತನಾಗಲೇ? ಉದ್ಯೋಗಿಯಾಗಲೇ?’ ಎಂಬ ವಿಷಯದ ಕುರಿತು ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
‘ಉತ್ಥಾನ’ ಕಾಲೇಜು ವಿದ್ಯಾರ್ಥಿ ಪ್ರಬಂಧ ಸ್ಪರ್ಧೆ-೨೦೨೨ರಲ್ಲಿ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ವಿದ್ಯಾರ್ಥಿ ದರ್ಶನ್ ಎಸ್.ಎನ್. ಅವರಿಗೆ ಪ್ರಥಮ ಬಹುಮಾನ, ದಕ್ಷಿಣ ಕನ್ನಡ ಜಿಲ್ಲೆಯ ರಾಮಕುಂಜದ ಶ್ರೀ ರಾಮಕುಂಜೇಶ್ವರ ಕಾಲೇಜಿನ ಬಿ.ಕಾಂ. ವಿದ್ಯಾರ್ಥಿನಿ ಯು.ಎಸ್. ಶ್ರದ್ಧಾ ಅವರಿಗೆ ದ್ವಿತೀಯ ಬಹುಮಾನ (೭,೦೦೦ ರೂ.) ಪಡೆದಿದ್ದಾರೆ ಹಾಗೂ ತೃತೀಯ ಬಹುಮಾನವನ್ನು (೫,೦೦೦ರೂ.) ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯದ ಪ್ಲಾಸ್ಟಿಕ್ ಸರ್ಜರಿ ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿ ಡಾ. ಶಿಶಿರ ರಾನಡೆ ಅವರು ಪಡೆದಿದ್ದಾರೆ.
ಇದನ್ನೂ ಓದಿ | ವೈದ್ಯ ದರ್ಪಣ ಅಂಕಣ | ನಮ್ಮ ಶರೀರವನ್ನು ನಿಯಂತ್ರಿಸುವವರು ಯಾರು?
ಜತೆಗೆ ಹತ್ತು ಮಂದಿ ವಿದ್ಯಾರ್ಥಿಗಳು ಸಮಾಧಾನಕರ ಬಹುಮಾನ ತಲಾ ೨,೦೦೦ ರೂ.ಗಳನ್ನು ಪಡೆದಿದ್ದಾರೆ. ದಾವಣಗೆರೆಯ ಹರಿಹರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬಿ.ಎಸ್ಸಿ ವಿದ್ಯಾರ್ಥಿನಿ ಎಂ.ಪಿ. ಲಕ್ಷ್ಮಿ, ಯಾದಗಿರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬಿ.ಕಾಂ. ವಿದ್ಯಾರ್ಥಿನಿ ಎಸ್.ಸುವರ್ಣ, ಬೆಂಗಳೂರು ವಿಶ್ವವಿದ್ಯಾಲಯದ (ಜ್ಞಾನಭಾರತಿ ಕ್ಯಾಂಪಸ್) ಎಂ.ಎಸ್ಸಿ. ವಿದ್ಯಾರ್ಥಿನಿ ಎಚ್.ಮಂಜುಳಾ, ಕುಂದಾಪುರದ ಡಾ. ಬಿ.ಬಿ. ಹೆಗಡೆ ಪ್ರಥಮ ದರ್ಜೆ ಕಾಲೇಜಿನ ಬಿ.ಕಾಂ. ವಿದ್ಯಾರ್ಥಿನಿ ಶ್ರೇಯಾ ಪೂಜಾರಿ, ಹೊನ್ನಾಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬಿ.ಎ. ವಿದ್ಯಾರ್ಥಿ ಎಚ್.ಎಸ್.ಆಂಜನೇಯ, ತುಮಕೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬಿ.ಕಾಂ. ವಿದ್ಯಾರ್ಥಿನಿ ಎಚ್.ಜಿ.ಮಮತಾ, ಉಜಿರೆಯ ಎಸ್‌ಡಿಎಂ ಕಾಲೇಜಿನ ಬಿ.ಎ. ವಿದ್ಯಾರ್ಥಿ ತುಷಾರ್ ಹೆಗಡೆ, ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿನ ಬಿ.ಕಾಂ. ವಿದ್ಯಾರ್ಥಿನಿ ಮೇಧಾ ಬಾಲಕೃಷ್ಣ ಶೆಟ್ಟಿ, ಪುತ್ತೂರು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಖದೀಜತ್ ದಿಲ್ಶಾನ ಹಾಗೂ ಬೆಂಗಳೂರಿನ ಬಿಎಂಎಸ್ ಮಹಿಳಾ ಕಾಲೇಜಿನ ಬಿ.ಕಾಂ. ವಿದ್ಯಾರ್ಥಿನಿ ಎಸ್. ನಯನ ಅವರು ಸಮಾಧಾನಕರ ಬಹುಮಾನ ಪಡೆದ ಹತ್ತು ಮಂದಿ ಕಾಲೇಜು ವಿದ್ಯಾರ್ಥಿಗಳಾಗಿದ್ದಾರೆ.
ಪ್ರಬಂಧ ಸ್ಪರ್ಧೆಯ ತೀರ್ಪುಗಾರರು
ಕೃಷಿಕರು ಹಾಗೂ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಗುರುರಾಜ ಗಂಟಿಹೊಳೆ, ಕೊಪ್ಪಳದ ಗಂಗಾವತಿಯ ಎಸ್‌ಎಂಎನ್‌ಎಂ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕರಾದ ಡಾ. ಸೋಮಕ್ಕ ಎಂ. ಹಾಗೂ ಶಿವಮೊಗ್ಗದ ಖ್ಯಾತ ಕೀಲು ಮತ್ತು ಮೂಳೆ ತಜ್ಞರಾದ ಡಾ. ಸುಧೀಂದ್ರ ಪಿ.ಆರ್. ಅವರು ತೀರ್ಪುಗಾರರಾಗಿದ್ದರು.
ಇದನ್ನೂ ಓದಿ | Prerane | ಅಧ್ಯಾತ್ಮದ ದಾರಿ ಕಠಿಣವಲ್ಲ, ನೀವದನ್ನು ಕಠಿಣವಾಗಿಸುತ್ತಿದ್ದೀರಿ…