Site icon Vistara News

Taralabalu Mutt : ತರಳಬಾಳು ಶ್ರೀಗಳಿಂದ ಅಮೆರಿಕದ ಹಿಂದು ಸನ್ಯಾಸಿಗಳಿಗೆ ವಚನ ಸಾಹಿತ್ಯ ಸಂವಾದ

Sirigere Sri

ನ್ಯೂಯಾರ್ಕ್​​ (ಅಮೆರಿಕ): ಅಮೆರಿಕ ಪ್ರವಾಸದಲ್ಲಿರುವ ಸಿರಿಗೆರೆಯ ಶ್ರೀ ತರಳಬಾಳು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಪೆಸಿಫಿಕ್ ಸಾಗರದ ಹವಾಯಿ ದ್ವೀಪವಾದ ಕೌಯಿಯಲ್ಲಿರುವ ಹಿಂದು ಮಠಕ್ಕೆ ಭೇಟಿ ನೀಡಿದ್ದಾರೆ. ಈ ಮಠದಲ್ಲಿ 18 ಅಮೆರಿಕನ್ ಸನ್ಯಾಸಿಗಳಿದ್ದಾರೆ. ಅವರು ತುಂಬಾ ಸರಳ ಮತ್ತು ಸಮರ್ಪಿತ ಜೀವನವನ್ನು ನಡೆಸುತ್ತಿದ್ದಾರೆ. ಅವರಿಗಾಗಿ ತರಳುಬಾಳು ಶ್ರೀಗಳು ವಚನ ಸಾಹಿತ್ಯ ಸಂವಾದ ನಡೆಸಿದರು.

ಹಿಂದು ಮಠಕ್ಕೆ ಭೇಟಿ ನೀಡಿದ ಸ್ವಾಮೀಜಿಗಳನ್ನು ಅಲ್ಲಿನ ಸನ್ಯಾಸಿಗಳು ಭಕ್ತಿ ಗೌರವಗಳಿಂದ ಸ್ವಾಗತಿಸಿದರು. ವಿದ್ಯುತ್​ಚಾಲಿತ ವಾಹನಗಳಲ್ಲಿ ಕರೆದೊಯ್ದರು. ಮರಗಳು ಮತ್ತು ವಿಶೇಷ ಸಸ್ಯವರ್ಗದಿಂದ ತುಂಬಿದ 300 ಎಕರೆ ಪ್ರದೇಶದಲ್ಲಿ ಹರಡಿರುವ ತಮ್ಮ ಆಶ್ರಮವನ್ನು ಶ್ರೀಗಳಿಗೆಪರಿಚಯಿಸಿದರು. ಆಶ್ರಮದ ಬೆಟ್ಟಗಳ ಕೆಳಗೆ ಇರುವ ಒಂದು ಸಣ್ಣ ತೊರೆಯ ಜುಳು ಜುಳು ನಾದ ಮನಸ್ಸನ್ನು ಉಲ್ಲಸಿತ ಮಾಡಿದೆ ಎಂದು ಶ್ರೀಗಳು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

ತರಳಬಾಳು ಶ್ರೀಗಳು ಬಸವಾದಿ ಶರಣರ ವಚನ ಸಾಹಿತ್ಯವನ್ನು 18 ಅಮೆರಿಕನ್ ಸನ್ಯಾಸಿಗಳಿಗೆ
ಪರಿಚಯಿಸಿದರು. ಸುಮಾರು ಒಂದು ಗಂಟೆ ಕಾಲ ಶರಣರ ಬರಹ ಮತ್ತು ಬದುಕಿನ ಕುರಿತು ಚರ್ಚೆ ನಡೆಯಿತು.

ಶ್ರೀಗಳ ಜ್ಞಾನ ಭಂಡಾರಕ್ಕೆ ಹಾಗೂ ಅವರ ಆಧ್ಯಾತ್ಮ ಜ್ಞಾನವನ್ನು ಅಮೆರಿಕದ ಸನ್ಯಾಸಿಗಳು ಪ್ರಶಂಸಿಸಿದರು. ತರಳಬಾಳು ಬೃಹನ್ಮಠದ ಸೇವಾ ಕಾರ್ಯಗಳ ಬಗ್ಗೆ ಮಾಹಿತಿ ಪಡೆದುಕೊಂಡರು.

ಇದನ್ನೂ ಓದಿ : Kukke Temple : ಕುಕ್ಕೆ ದೇವಳದಲ್ಲಿ ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಆಶ್ಲೇಷಾ ಬಲಿ ಸೇವೆ

ಸಿರಿಗೆರೆ ಮಠದ ಜನಪ್ರಿಯ ಅಂತಾರಾಷ್ಟ್ರೀಯ ನಿಯತಕಾಲಿಕ “ಹಿಂದುಯಿಸಂ ಟುಡೇ” ಗೆ ತರಳಬಾಳು ಶ್ರೀಗಳು ಲೇಖನ ಬರೆಯಬೇಕೆಂದು ಅಲ್ಲಿನ ಸನ್ಯಾಸಿಗಳು ಬಯಸಿದರು. ತರಳಬಾಳು ಜಗದ್ಗುರು ವಿದ್ಯಾ ಸಂಸ್ಥೆಯ ಶಾಲಾ ಮಕ್ಕಳ ವಚನ ವಾಚನವನ್ನು ರೆಕಾರ್ಡ್ ಮಾಡಲು ಮತ್ತು ತಮ್ಮ ಪತ್ರಿಕೆಯಲ್ಲಿ ಲೇಖನ ಬರೆಯಲು ವ್ಯವಸ್ಥೆ ಕಲ್ಪಿಸುವುದಾಗಿ ಅವರು ತಿಳಿಸಿದರು.

Exit mobile version