ಬೆಂಗಳೂರು : ಈ ಬಾರಿ ವರಮಹಾಲಕ್ಷ್ಮಿ ಹಬ್ಬ (Varamahalakshmi Festival) ನಾಳೆ ಶುಕ್ರವಾರ (ಆ.5) ರಾಜ್ಯಾದ್ಯಂತ ಆಚರಿಸಲಾಗುತ್ತಿದೆ. ಕೋವಿಡ್ ಹಿನ್ನೆಲೆಯಲ್ಲಿ ಮೂರು ವರ್ಷದಿಂದ ಹಬ್ಬ ಆಚರಿಸದ ಜನರಿಗೆ ಈ ಬಾರಿ ಹಬ್ಬ ಜೋರಾಗಿದೆ. ಸಡಗರದ ವರಮಹಾಲಕ್ಷ್ಮಿ ಹಬ್ಬದ ಆಚರಣೆಗೆ ನಗರದಲ್ಲಿ ಸಿದ್ಧತೆಗಳು ನಡೆಯುತ್ತಿದೆ.
ಹಬ್ಬದ ಹಿನ್ನೆಲೆಯಲ್ಲಿ ಕೆ.ಆರ್ ಮಾರ್ಕೆಟ್‌ನಲ್ಲಿ ಹಬ್ಬದ ಖರೀದಿ ಜೋರಾಗಿ ನಡೆಯುತ್ತಿದೆ. ಕೆ.ಆರ್ ಮಾರ್ಕೆಟ್ ಸುತ್ತ ಮುತ್ತ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಆಗಿದೆ. ಆದರೆ ಕಳೆದ ಮೂರು ದಿನಕ್ಕೆ ಹೋಲಿಸಿದರೆ ಇಂದು (ಗುರುವಾರ ಆ.4) ವಸ್ತುಗಳ ದರ ಏರಿಕೆ ಕಂಡಿದೆ.
ಹಬ್ಬಕ್ಕೆ ಹೂವು ಹಣ್ಣು ದುಬಾರಿ
ಹಬ್ಬದ ನಿಮಿತ್ತ ಹೂವು ಹಾಗೂ ಹಣ್ಣಿನ ದರ ಏರಿಕೆ ಕಂಡಿದೆ. ಕಳೆದ ವರ್ಷಕ್ಕಿಂತ ಈ ಬಾರಿ ಶೇ.20-30 ರಷ್ಟು ಹೂವು ಮತ್ತು ಹಣ್ಣಿನ ಬೆಲೆ ಹೆಚ್ಚಾಗಿದೆ. ಮಳೆಯೂ ಆದ ಕಾರಣ ಬೆಲೆಗಳು ಜಾಸ್ತಿ ಆಗಿದ್ದು, ಸೇವಂತಿಗೆ ಹೂ ಕೆ.ಜಿ 320 ರೂ. ಮಲ್ಲಿಗೆ ಕೆ.ಜಿ.350 ರೂ, ಬಾಳೆ ಹಣ್ಣು ಕೆ.ಜಿ.ಗೆ 120-150 ರೂ. ಹೀಗೆ ಬೆಲೆಗಳು ಗಗನಕ್ಕೇರಿದೆ. ಈ ಬಾರಿ ಹೂವು ಹಣ್ಣಿಗೆ ಬೇಡಿಕೆ ಹೆಚ್ಚಿದ ಹಿನ್ನೆಲೆಯಲ್ಲಿ ಬೆಲೆ ಕೂಡಾ ಹೆಚ್ಚಳ ಕಂಡಿದ್ದು, ಹಬ್ಬ ಮಾಡಲೇ ಬೇಕು ಎಂದು ಜನರು ಹೂವು ಹಣ್ಣು ಖರೀದಿ ಮಾಡುತ್ತಿದ್ದಾರೆ.
ಇದನ್ನೂ ಓದಿ | Saree draping | ವರಮಹಾಲಕ್ಷ್ಮಿಗೆ ಕಲಾತ್ಮಕವಾಗಿ ಸೀರೆ ಉಡಿಸಿ