ಬೆಂಗಳೂರು : ರಾಜ್ಯಾದ್ಯಂತ ಇಂದು (ಆ.೫) ವರಮಹಾಲಕ್ಷ್ಮೀ ದಿನವನ್ನು (Varamahalakshmi Festival) ಶುಕ್ರವಾರ ಆಚರಿಸಲಾಗುತ್ತಿದೆ. (ಆ.5) ಸಿಲಿಕಾನ್ ಸಿಟಿಯಲ್ಲಿ ಹಬ್ಬದ ಖರೀದಿ ಜೋರಾಗಿ ನಡೆಯುತ್ತಿದೆ. ಕೆ.ಆರ್ ಮಾರ್ಕೆಟ್ ನಲ್ಲಿ ಖರೀದಿಯ ಭರಾಟೆ ಭರ್ಜರಿಯಾಗಿದ್ದು, ಹಬ್ಬದ ವಸ್ತುಗಳ ಖರೀದಿಯಲ್ಲಿ ಜನರು ತೊಡಗಿದ್ದಾರೆ.
ಹಬ್ಬದ ಹಿನ್ನೆಲೆಯಲ್ಲಿ 30 ರಿಂದ 35% ನಷ್ಟು ವಸ್ತುಗಳ ಬೆಲೆ ಏರಿಕೆ ಕಂಡಿದೆ. ಸುಗಂಧ ರಾಜ ಕೆ.ಜಿ- 550 ರಿಂದ 600 ರೂ. ಸೇವಂತಿಗೆ ಹೂವು ಕೆ.ಜಿಗೆ 320 ರೂ. ಅಡಿಕೆ ಎಲೆ 1 ಕಟ್ಟಿಗೆ 100 ರೂಪಾಯಿ ಹೀಗೆ ಇನ್ನಿತರ ವಸ್ತುಗಳ ಬೆಲೆಯೂ ಹೆಚ್ಚಾಗಿದೆ.
ಇದನ್ನೂ ಓದಿ | Horoscope Today | ಇಂದು ವರಮಹಾಲಕ್ಷ್ಮೀ ವ್ರತ; ದ್ವಾದಶ ರಾಶಿಗಳ ಭವಿಷ್ಯ ಹೀಗಿದೆ
ಬಾಳೆದಿಂಡು, ಮಾವಿನ ಸೊಪ್ಪಿಗೆ ಫುಲ್ ಡಿಮ್ಯಾಂಡ್ ಬಂದಿದ್ದು, ಹೂ, ಹಣ್ಣು, ತರಕಾರಿ ಬೆಲೆ ಕೂಡ ಗಗನಕ್ಕೆ ಏರಿದೆ. ಸಾರ್ವಜನಿಕರಿಗೆ ಮೈಕ್ ಮೂಲಕ ಪೊಲೀಸರು ಮೊಬೈಲ್, ಪರ್ಸ್ ಹಾಗೂ ದುಬಾರಿ ವಸ್ತುಗಳ ಬಗ್ಗೆ ಜಾಗೃತಿ ವಹಿಸುವಂತೆ ಜಾಗೃತಿ ಮೂಡಿಸುತ್ತಿದ್ದಾರೆ.
ಇದನ್ನೂ ಓದಿ | Varamahalakshmi Festival | ಸಕಲ ವರವ ಕೊಡುವ ಮಹಾಲಕ್ಷ್ಮೀಯನ್ನು ಪೂಜಿಸುವ ಹಬ್ಬ