ಕೋಲಾರ: ಸದಾ ವಿವಾದಗಳಲ್ಲೇ ಕಾಲ ಕಳೆಯುವ ಬಿಜೆಪಿ ನಾಯಕ ವರ್ತೂರು ಪ್ರಕಾಶ್ (Varthur prakash) ಅವರು ನಾನ್ ವೆಜ್ ಹೇಳಿಕೆಗಳ ಮೂಲಕ ಜೋರಾಗಿ ಸೌಂಡ್ ಮಾಡಿದ್ದಾರೆ. ರಾಜ್ಯದ ಕಾರ್ಮಿಕ ಸಚಿವರಾಗಿರುವ ಶಿವರಾಮ ಹೆಬ್ಬಾರ್ ಅವರು ಒಂದೂವರೆ ಕೆಜಿ ನಾನ್‌ವೆಜ್ ತಿಂತಾರೆ ಎಂದು ವರ್ತೂರು ಅವರು ಹೇಳಿರುವುದು ಚರ್ಚೆಗೆ ಕಾರಣವಾಗಿದೆ.
ಏನು ಹೇಳಿದ್ರು ವರ್ತೂರು ಪ್ರಕಾಶ್?
ಕೋಲಾರದಲ್ಲಿ ಪತ್ರಕರ್ತರ ಸಂಘದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಬಂದಿದ್ದ ಅವರು ಯಾರೊಂದಿಗೋ ಫೋನ್‌ನಲ್ಲಿ ಮಾತನಾಡುತ್ತಾ ʻಲಿಂಗಾಯತ, ಬ್ರಾಹ್ಮಣರು ನಾನ್ ವೆಜ್ ತಿನ್ನುತ್ತಾರೆʼ ಅನ್ನುತ್ತಾರೆ. ಅದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ʻʻನನ್ನ ಕೆಲವು ಸ್ನೇಹಿತರಿದ್ದಾರೆ, ಅವರು ಒಂದೂವರೆ ಕೆಜಿ ನಾನ್ ವೆಜ್ ತಿಂತಾರೆʼ ಅಂದಿದ್ದಾರೆ.
ವರ್ತೂರು ಪ್ರಕಾಶ್ ಮಾತನಾಡಿದ್ದು ಯಾರೊಂದಿಗೆ ಅನ್ನೋದು ಗೊತ್ತಿಲ್ಲ. ಆದರೆ, ತುಂಬಾ ಲಹರಿಯಿಂದ ಮಾತನಾಡಿದ್ದಾರೆ. ಬ್ರಾಹ್ಮಣರು ಮತ್ತು ಲಿಂಗಾಯತರು ನಾನ್ ವೆಜ್ ತಿನ್ನುವ ವಿಚಾರ ಇಲ್ಲಿ ಯಾಕೆ ಚರ್ಚೆಗೆ ಬಂತು, ಯಾರ ಜತೆಗೆ ಮಾತನಾಡಿದರು ಎನ್ನುವುದು ಸ್ಪಷ್ಟವಿಲ್ಲ.
– ಬ್ರಾಹ್ಮಣರು, ಲಿಂಗಾಯತರು ನಾನ್ ವೆಜ್ ತಿನ್ನುತ್ತಾರೆ.
-ಗದಗ, ಹುಬ್ಬಳ್ಳಿ ಜಿಲ್ಲೆಯಲ್ಲಿ ೧೨ ಜನ ಎಂಎಲ್‌ಎಗಳು, ಅಣ್ಣತಮ್ಮಂದಿರು ಇದ್ದಾರೆ. ಅವರೆಲ್ಲ ಒಬ್ಬೊಬ್ಬರು ಕೆಜಿ ಮಾಂಸ ತಿಂತಾರೆ, ದೇವರಾಣೆ, ಅವರೆಲ್ಲ ನನ್ನ ಫ್ರೆಂಡ್ಸ್ ಸರ್
ಉದ್ದಕ್ಕಿರುವ ಮಂತ್ರಿ ಇದ್ದಾರಲ್ಲಾ!: ಶಿವರಾಮ ಹೆಬ್ಬಾರ್ ಬಗ್ಗೆ ಆಡಿದ ಮಾತು
ವರ್ತೂರು ಪ್ರಕಾಶ್ ಅವರು ಮಾತನಾಡುತ್ತಾ, ʻʻಒಬ್ಬ ಮಿನಿಸ್ಟರ್ ಆಗೋನಲ್ಲಾ.. ಬ್ರಾಹ್ಮಣಾ.. ಲೇಬರ್ ಮಿನಿಸ್ಟರ್.. ಉದ್ದಕಿದಾನಲ್ಲಾ.. ಬಿಜೆಪಿಗೆ ಬಂದ್ನಲ್ಲಾ.. ಕಾಂಗ್ರೆಸ್‌ನಿಂದ.. ಅವನ ಹೆಸರೇನು ಸರ್ (ಪಕ್ಕದಲ್ಲಿ ಇರೋರು ಶಿವರಾಮ ಅಂತಾರೆ).. ನನ್ನ ತಾಯಾಣೆಗೂ ಅವನು ಒಂದುವರೆ ಕೆಜಿ ತಿಂತಾನೆ ಸರ್ʼʼ ಎಂದು ಹೇಳುತ್ತಾರೆ.
ಇಷ್ಟು ಹೇಳಿದ ನಂತರ ವರ್ತೂರು ಪ್ರಕಾಶ್ ಅವರು ಫೋನ್‌ನಲ್ಲಿ ಮಾತನಾಡುವ ವ್ಯಕ್ತಿಯನ್ನು ಓಲೈಕೆ ಮಾಡುವಂತೆ ʻನೀವೊಬ್ರೇ ಸರ್ ದೇವರಾಣೆ ಒಳ್ಳೇರುʼ ಎನ್ನುತ್ತಾರೆ.
ಕೊನೆಗೆ ಈ ಬಾರಿ ಚುನಾವಣೆಯಲ್ಲಿ ಸಿದ್ದರಾಮಯ್ಯ ವಿರುದ್ಧ 50 ಸಾವಿರ ಮತಗಳ ಅಂತರದಿಂದ ಗೆದ್ದಿಲ್ಲ ಅಂದರೆ ನಾನು ನಿಮಗೆ ಮುಖ ತೋರಿಸುವುದಿಲ್ಲʼ ಅಂತಾರೆ.
ಇದನ್ನೂ ಓದಿ | Varthur prakash | ನನ್ನ ಕೆಲವು ಲಿಂಗಾಯತ, ಬ್ರಾಹ್ಮಣ ಸ್ನೇಹಿತರು ಕೆಜಿಗಟ್ಲೆ ನಾನ್‌ವೆಜ್ ತಿಂತಾರೆ ಎಂದ ವರ್ತೂರು ಪ್ರಕಾಶ್