Site icon Vistara News

Vistara News Launch | ಜನಮನ ಸೂರೆಗೊಂಡ ವಾಸುಕಿ ವೈಭವ್ ಹಾಡುಗಳ ಮ್ಯೂಸಿಕಲ್ ನೈಟ್!

Vistara News Launch

ಬೆಂಗಳೂರು: ಕನ್ನಡದ ಪ್ರತಿಭಾವಂತ ಸಂಗೀತ ನಿರ್ದೇಶಕ ಹಾಗೂ ಗಾಯಕ ವಾಸುಕಿ ವೈಭವ್ ಅವರ ಮ್ಯೂಸಿಕಲ್ ನೈಟ್, ವಿಸ್ತಾರನ್ಯೂಸ್ ಚಾನೆಲ್ (Vistara News Launch) ಅನಾವರಣಕ್ಕೆ ಆಗಮಿಸಿದ ಜನರ ಮನಸ್ಸನ್ನು ಸೂರೆಗೊಂಡಿತು. ವಾಸುಕಿ ವೈಭವ್ ಅವರು ತಾವು ಹಾಡಿದ ಹಾಗೂ ಸಂಗೀತ ನಿರ್ದೇಶನ ಮಾಡಿದ ಗೀತೆಗಳನ್ನು ವೇದಿಕೆಯ ಮೇಲೆ ಪ್ರಸ್ತುತಪಡಿಸಿದರು. ಬಿಗ್ ಬಾಸ್ ರನ್ನರ್ ಅಪ್ ಆಗಿದ್ದ ವಾಸುಕಿ ವೈಭವ್ ಅವರು ರಾಮಾ ರಾಮಾ ರೇ ಚಿತ್ರಕ್ಕೆ ಸಂಗೀತ ನೀಡುವ ಮೂಲಕ ಪ್ರಖ್ಯಾತಿಗೆ ಬಂದರು.

ಬೆಂಗಳೂರಿನಲ್ಲಿ ಭಾನುವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿದ್ದ ವಿಸ್ತಾರನ್ಯೂಸ್ ಚಾನೆಲ್ ಲಾಂಚ್ ಕಾರ್ಯಕ್ರಮದ ನಿಮಿತ್ತ ವಾಸುಕಿ ವೈಭವ್ ಅವರ ಮ್ಯೂಸಿಕಲ್ ನೈಟ್ ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಸಾವಿರಾರು ಜನರು ವಾಸುಕಿ ಅವರ ಸಿನಿ ಗಾನಗಳಿಗೆ ಮನಸೋತರು. ಗಜವದನಾ ಹೇ ರಂಭಾ ಹಾಡಿನ ಮೂಲಕ ಕಾರ್ಯಕ್ರಮ ಶುರು ಮಾಡಿದರು. ಬಳಿಕ ಬಡವ ರಾಸ್ಕಲ್ ಚಿತ್ರದ ಉಡುಪಿ ಹೋಟೆಲು ಮತ್ತು ಬಡವಾ ರಾಸ್ಕಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿತ್ರದ ಪ್ರವೀಣ ದಡ್ಡಾ.., ಹರಿಕಥೆ ಅಲ್ಲ ಗಿರಿಕಥೆ ಚಿತ್ರದ ಜ್ಯೂನಿಯರ್ ಮೊನಾಲಿಸಾ…. ಮುಂದಿನ ನಿಲ್ದಾಣ ಚಿತ್ರದ ಇನ್ನೂ ಬೇಕಾಗಿದೆ …. ಸಾವಿರದ ಶರಣವ್ವ ಕರಿಮಾಯಿ ಹಾಗೂ ಗೀತಾಂಜಲಿ ಹಾಡುಗಳಿಗೆ ನೆರೆದ ಜನರು ಹುಚ್ಚೆದ್ದು ಕುಣಿದರು.

ಇದನ್ನೂ ಓದಿ | Vistara News Launch | ವಿಸ್ತಾರನ್ಯೂಸ್ ನಾಡಿಗೆ ಬೆಳಕಾಗಲಿ ಎಂದು ಹಾರೈಸಿದ ಕೆಪಿಸಿಸಿ ಅಧ್ಯಕ್ಷ ಡಿಕೆಶಿ

Exit mobile version