Site icon Vistara News

Veena Kashappanavar: ರಾಜಕೀಯದಿಂದ ದೂರ ಸರಿದ್ರಾ ವೀಣಾ ಕಾಶಪ್ಪನವರ್‌? ಭಾವನಾತ್ಮಕ ಪೋಸ್ಟ್‌ ಹಾಕಿದ ಕೈ ನಾಯಕಿ!

Veena kashappanavar

ಬಾಗಲಕೋಟೆ: ಲೋಕಸಭಾ ಚುನಾವಣೆಯಲ್ಲಿ ಬಾಗಲಕೋಟೆ ಕಾಂಗ್ರೆಸ್‌ ಟಿಕೆಟ್‌ ಕೈ ತಪ್ಪಿದ ಬಳಿಕ ಕಾಂಗ್ರೆಸ್‌ ನಾಯಕಿ ವೀಣಾ ಕಾಶಪ್ಪನವರ್‌ (Veena Kashappanavar) ಅವರು ಪಕ್ಷೇತರವಾಗಿ ಸ್ಪರ್ಧಿಸಬೇಕು ಎಂದು ಬೆಂಬಲಿಗರು ಒತ್ತಾಯ ಮಾಡಿದ್ದರು. ಹೀಗಾಗಿ ಅವರ ಮನವೊಲಿಸಲು ಸಿಎಂ, ಡಿಸಿಎಂ ಸಮ್ಮುಖದಲ್ಲಿ ಸಂಧಾನ ಸಭೆ ನಡೆದಿತ್ತು. ಬಳಿಕ ಮೇಲೆ ಪಕ್ಷದ ಚಟುವಟಿಕೆಗಳಿಂದ ದೂರು ಉಳಿದಿದ್ದ ವೀಣಾ ಕಾಶಪ್ಪನವರ್‌, ಇದೀಗ ರಾಜಕೀಯದಿಂದ ದೂರ ಸರಿದ್ರಾ ಎಂಬ ಪ್ರಶ್ನೆ ಅವರ ಬೆಂಬಲಿಗರಲ್ಲಿ ಮೂಡಿದೆ. ಇನ್ನು ಸಾಮಾಜಿಕ ಜಾಲತಾಣದಲ್ಲಿ ವೀಣಾ ಕಾಶಪ್ಪನವರ್‌ ಭಾವನಾತ್ಮಕ ಸಂದೇಶವೊಂದನ್ನು ಹಂಚಿಕೊಂಡಿರುವುದು ಈ ಚರ್ಚೆಗೆ ಇಂಬು ನೀಡುವಂತಿದೆ.

ಫೇಸ್‌ಬುಕ್‌ ಪೋಸ್ಟ್‌ನಲ್ಲಿ ಏನಿದೆ?

ಫೇಸ್‌ಬುಕ್‌ನಲ್ಲಿ ಭಾವನಾತ್ಮಕ ಪೋಸ್ಟ್‌ ಹಾಕಿರುವ ವೀಣಾ ಕಾಶಪ್ಪನವರ್‌, ಕಣ್ಣು ನಕ್ಕರೂ ಒದ್ದೆಯಾಗುತ್ತದೆ, ಅತ್ತರೂ ಒದ್ದೆಯಾಗುತ್ತದೆ. ಆದರೆ ನಗಿಸಿದವರು ನಾಲ್ಕು ದಿನ ನೆನಪಿನಲ್ಲಿದ್ದರೆ, ನೋಯಿಸಿದವರು ಜೀವನವಿಡಿ ನೆನಪಿನಲ್ಲಿರುತ್ತಾರೆ. ನಮಸ್ಕಾರಗಳು ಶುಭದಿನ ಎಂದು ಹೇಳಿದ್ದಾರೆ.

ಬಾಗಲಕೋಟೆ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ್‌ ನಾಮಪತ್ರ ಸಲ್ಲಿಕೆ ವೇಳೆ ಮಾತ್ರ ಇತ್ತೀಚೆಗೆ ವೀಣಾ ಕಾಶಪ್ಪನವರ್‌ ಭಾಗಿಯಾಗಿದ್ದರು. ಈ ವೇಳೆಯೂ ಕಾಂಗ್ರೆಸ್‌ನಲ್ಲಿ ಇನ್ನು ಅಸಮಾಧಾನ ತಣ್ಣಗಾಗಿಲ್ಲ ಎಂಬ ಅಂಶ ಬೆಳಕಿಗೆ ಬಂದಿತ್ತು. ಇನ್ನು ನಾಮಪತ್ರ ಸಲ್ಲಿಕೆ ವೇಳೆ ಶಾಸಕ ವಿಜಯಾನಂದ ಕಾಶಪ್ಪನವರ್ ಗರಂ ಆಗಿದ್ದರು, ನಾಮಪತ್ರ ಸಲ್ಲಿಕೆಗೆ ನಮ್ಮನ್ನು ಕರೆದಿಲ್ಲ. ಯಾರಿಗೆ ಹೇಳಿದ್ದೀರಿ ನೀವು, ಯಾರನ್ನು ಕರೆಯುತ್ತೀರಿ. ಒಂದು ಫೋನ್ ಮಾಡೋಕೆ ಆಗಲ್ಲವೇ? ಹೇಳುವ ಸೌಜನ್ಯ ಇದೆ ಏನ್ರೀ ನಿಮಗೆ ಎಂದು ಮುಖಂಡರನ್ನು ತರಾಟೆಗೆ ತೆಗೆದುಕೊಂಡಿದ್ದರು.

ಇದನ್ನೂ ಓದಿ | Hassan Pen Drive Case: ವಿಚಾರಣೆಗೆ ಹಾಜರಾಗಲು 7 ದಿನ ಸಮಯ ಕೇಳಿದ ಪ್ರಜ್ವಲ್‌; ಶೀಘ್ರ ಸತ್ಯ ಹೊರಬರಲಿದೆ ಎಂದು ಟ್ವೀಟ್‌!

ಬಾಗಲಕೋಟೆ ಕ್ಷೇತ್ರದಲ್ಲಿ ವೀಣಾ ಉಳಿದೆಲ್ಲ ಸ್ಥಳೀಯ ನಾಯಕರಿಗಿಂತ ಹೆಚ್ಚು ಪ್ರಭಾವಿ ಮತ್ತು ಜನಪ್ರಿಯರು. ಈ ಹಿಂದೆ ಟಿಕೆಟ್‌ ಕೈತ್ಪಪ್ಪಿದ್ದಕ್ಕೆ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದ ವೀಣಾ ಕಾಶಪ್ಪನವರ್‌, ಬಾಗಲಕೋಟೆಯಿಂದ ಬೇರೆಯವರಿಗೆ ಟಿಕೆಟ್ ಸಿಕ್ಕಿರುವುದು ಕೇವಲ ನಮ್ಮ ಸಮುದಾಯ ಮಾತ್ರವಲ್ಲ ಬೇರೆ ಸಮುದಾಯದ ಜನರಿಗೂ ಆಘಾತವನ್ನುಂಟು ಮಾಡಿದೆ, ಕಳೆದ 5 ವರ್ಷಗಳಿಂದ ನಿರಂತರವಾಗಿ ಕೆಲಸ ಮಾಡುತ್ತಿರುವ ತನಗೆ ಹೇಗೆ ಟಿಕೆಟ್ ತಪ್ಪುವುದು ಸಾಧ್ಯ ಅಂತ ಬೇರೆ ಬೇರೆ ಜಿಲ್ಲೆಗಳ ಜನ ಸಹ ಫೋನ್ ಮಾಡಿ ಕೇಳುತ್ತಿದ್ದಾರೆ ಎಂದು ಭೇಸರ ಹೊರಹಾಕಿದ್ದರು.

ಇನ್ನು ಸಂಯುಕ್ತ ಪಾಟೀಲ್‌ ಪರ ಪ್ರಚಾರ ಮಾಡಲು ಹೋಗುವುದಿಲ್ಲ ಅಂತ ಹಠ ಹಿಡಿದು ಕೆಲದಿನಗಳ ಕಾಲ ಬೆಂಗಳೂರಲ್ಲೇ ವೀಣಾ ಕಾಶಪ್ಪನವರ್ ಉಳಿದುಬಿಟ್ಟಿದ್ದರು. ನಂತರ ಮುನಿಸು ಮರೆತು ಸಂಯಕ್ತ ನಾಮಪತ್ರ ಸಲ್ಲಿಸುವ ಮೊದಲು ನಡೆದ ಬೃಹತ್ ರ್ಯಾಲಿಯಲ್ಲಿ ಪಾಲ್ಗೊಂಡು ಕಾರ್ಯಕರ್ತರಲ್ಲಿ ಹರ್ಷ ಮೂಡಿಸಿದ್ದರು. ಆದರೆ, ಇದೀಗ ಭಾವನಾತ್ಮಕ ಪೋಸ್ಟ್‌ನಿಂದ ಅವರ ಮುಂದಿನ ನಡೆ ಏನು ಎಂಬುವುದು ಕುತೂಹಲ ಮೂಡಿಸಿದೆ.

Exit mobile version