Site icon Vistara News

Veer Savarkar Row: ಪಠ್ಯಪುಸ್ತಕ ಪರಿಷ್ಕರಣೆ; ನ್ಯೂಟನ್‌ ಹೇಳಿಕೆ ಉಲ್ಲೇಖಿಸಿ ಸಿದ್ದು ಸರ್ಕಾರಕ್ಕೆ ಸಾವರ್ಕರ್‌ ಮೊಮ್ಮಗ ಟಾಂಗ್

Veer Savarkar Textbooks Row In Karnataka

Veer Savarkar's Grandson Quotes Newton After Karnataka Drops Him From Syllabus

ಗೋವಾ/ಬೆಂಗಳೂರು: ಕರ್ನಾಟಕದಲ್ಲಿ ನೂತನವಾಗಿ ಅಧಿಕಾರಕ್ಕೆ ಬಂದಿರುವ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಪಠ್ಯಪುಸ್ತಕಗಳಿಂದ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್‌, ಆರ್‌ಎಸ್‌ಎಸ್‌ ಸಂಸ್ಥಾಪಕ ಕೆ.ಬಿ.ಹೆಡಗೆವಾರ್‌, ಚಿಂತಕ ಚಕ್ರವರ್ತಿ ಸೂಲಿಬೆಲೆ ಸೇರಿ ಹಲವರ ಕುರಿತ ಅಧ್ಯಾಯಗಳನ್ನು ಪರಿಷ್ಕರಣೆ ಮಾಡಲು ಸಮಿತಿ (Veer Savarkar Row) ರಚಿಸಿದೆ. ನಿರ್ಧಾರದ ಕುರಿತು ರಾಜ್ಯದಲ್ಲಿ ಪರ-ವಿರೋಧ ಚರ್ಚೆಯಾಗುತ್ತಿವೆ. ಇದರ ಬೆನ್ನಲ್ಲೇ, ವೀರ ಸಾವರ್ಕರ್‌ ಅವರ ಮೊಮ್ಮಗ ರಂಜಿತ್‌ ಸಾವರ್ಕರ್‌ ಅವರು ಪ್ರತಿಕ್ರಿಯಿಸಿದ್ದ, ಸಿದ್ದರಾಮಯ್ಯ ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ.

ಗೋವಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, “ಪ್ರತಿಯೊಂದು ಕ್ರಿಯೆಗೂ ಪ್ರತಿಕ್ರಿಯೆ ಇರುತ್ತದೆ. ಸಾವರ್ಕರ್‌ ಅವರ ಕುರಿತ ಮಾಹಿತಿಯನ್ನು ಎಷ್ಟೇ ಹುದುಗಿಸಿಡಲು, ಅವರ ಸಾಧನೆ, ಕೊಡುಗೆಯನ್ನು ಮುಚ್ಚಿಡಲು ಯತ್ನಿಸಿದರೂ, ಅದು ಸಾಧ್ಯವಾಗುವುದಿಲ್ಲ. ಮಕ್ಕಳಿಗೆ ಸಾವರ್ಕರ್‌ ಕುರಿತು ಅಧ್ಯಯನ ಮಾಡುವ ಅವಕಾಶವನ್ನು ಕಸಿದುಕೊಳ್ಳಲು ಯತ್ನಿಸಬಹುದು. ಆದರೆ, ಈಗಿನ ಮಕ್ಕಳು ಜಾಣರಿದ್ದಾರೆ” ಎಂದು ನ್ಯೂಟನ್‌ ಹೇಳಿಕೆಯನ್ನು ಉಲ್ಲೇಖಿಸಿ ಟಾಂಗ್‌ ಕೊಟ್ಟಿದ್ದಾರೆ.

“ವೀರ ಸಾವರ್ಕರ್‌ ಅವರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷು ಮಾಹಿತಿ ಇದೆ. ಸಾವರ್ಕರ್‌ ಅವರ ಸಾಹಿತ್ಯವನ್ನು ಸಾವರ್ಕರ್‌ ಸ್ಮಾರಕವು ಪ್ರಕಟಿಸಿದೆ. ಹಾಗೆಯೇ, ಸಾವರ್ಕರ್‌ ಅವರ ಸಾಹಿತ್ಯವನ್ನು ಕನ್ನಡದಲ್ಲೂ ಪ್ರಕಟಿಸಲು ನಾವು ತೀರ್ಮಾನಿಸಿದ್ದೇವೆ. ಹಾಗಾಗಿ, ಪಠ್ಯಪುಸ್ತಕದಿಂದ ಸಾವರ್ಕರ್‌ ಕುರಿತ ಅಧ್ಯಾಯವನ್ನು ತೆಗೆದರೆ ಯಾವುದೇ ವ್ಯತ್ಯಾಸವಾಗುವುದಿಲ್ಲ” ಎಂದು ಹೇಳಿದರು.

ಇದನ್ನೂ ಓದಿ: Textbook Revision: ಪಠ್ಯ ತೆಗೆದ ಬರಗೂರು, ಚಕ್ರತೀರ್ಥ ಮೂತಿಗೆ ಒರೆಸಿದರು ಎಂದ ಬಿ.ಸಿ. ನಾಗೇಶ್‌

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದಾಗ ವೀರ ಸಾವರ್ಕರ್‌ ಸೇರಿ ಹಲವರ ಕುರಿತ ಅಧ್ಯಾಯಗಳನ್ನು ಪಠ್ಯಪುಸ್ತಕದಲ್ಲಿ ಸೇರಿಸಲಾಗಿತ್ತು. ಆದರೆ, ಬಿಜೆಪಿ ಆಡಳಿತದ ನಿರ್ಧಾರಗಳನ್ನು ಕಾಂಗ್ರೆಸ್‌ ಸರ್ಕಾರ ರದ್ದುಗೊಳಿಸಲು ತೀರ್ಮಾನಿಸಿದೆ. ಪಠ್ಯಪುಸ್ತಕ ಪರಿಷ್ಕರಣೆ, ಮತಾಂತರ ನಿಷೇಧ ಕಾಯ್ದೆ ತಿದ್ದುಪಡಿ ಸೇರಿ ಹಲವು ರೀತಿಯ ಕ್ರಮಗಳನ್ನು ತೆಗೆದುಕೊಂಡಿದೆ. ಇದರ ಕುರಿತು ಬಿಜೆಪಿ ಈಗಾಗಲೇ ಆಕ್ರೋಶ ವ್ಯಕ್ತಪಡಿಸಿದೆ.

ದೇಶದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

Exit mobile version