Site icon Vistara News

Vegetable Price Hike | ಈ ಬಾರಿ ಮಳೆ ಭಾರಿ-ಏರಿದೆ ತರಕಾರಿ; ಗ್ರಾಹಕರ ಜೇಬು ಸುಡುತೈತ್ರಿ!

VEG

ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ವರುಣ ಅಬ್ಬರಿಸುತ್ತಿದ್ದಾನೆ. ಬಿಡುವಿಲ್ಲದೆ ಸುರಿಯುತ್ತಿರುವ ಮಳೆಯು ನಾನಾ ಅವಾಂತರವನ್ನು ಸೃಷ್ಟಿ ಮಾಡಿದ್ದು, ಜನರ ನಿದ್ದೆಗೆಡಿಸಿದೆ. ಈ ಮಧ್ಯೆ ತರಕಾರಿ ಬೆಲೆ (Vegetable Price Hike) ಏರಿಕೆಯಿಂದಾಗಿ ಜನಸಾಮಾನ್ಯರು ಕಂಗಾಲಾಗುವುಂತಾಗಿದೆ.

ತರಕಾರಿ ದರ

ವಾರದ ಹಿಂದೆ ಟೊಮ್ಯಾಟೋ ಬೆಲೆ ಕೆಜಿಗೆ 10 ರೂ. ಇದ್ದಿದ್ದು ಈಗ 24ಕ್ಕೆ ಏರಿಕೆ ಆಗಿದೆ. ಕ್ಯಾರೆಟ್‌, ಬಟಾಣಿ, ಮೆಣಸಿನಕಾಯಿ ರೇಟು ಅಂತೂ ನೂರರ ಗಡಿದಾಟಿದೆ. ನಗರದಲ್ಲಿ ಹೀಗೆ ಮಳೆ ಮುಂದುವರಿದರೆ ತರಕಾರಿ ದರ ಇನ್ನಷ್ಟು ದುಬಾರಿಯಾಗಲಿದ್ದು, ಇದರ ಹೊಡೆತ ನೇರ ಗ್ರಾಹಕರಿಗೆ ತಟ್ಟಲಿದೆ.

ಸರಿಯಾದ ಸಮಯಕ್ಕೆ ಬರಬೇಕಿದ್ದ ತರಕಾರಿಗಳು ಬರದೇ ಇರುವುದು, ಮಳೆಯಿಂದಾಗಿ ತರಕಾರಿ ಬಹುಬೇಗ ಕೊಳೆಯುತ್ತಿರುವುದು, ತರಕಾರಿ ಸರಬರಾಜು ಕಡಿಮೆ ಆಗಿರುವುದು ಸೇರಿದಂತೆ ಮಾರುಕಟ್ಟೆಗೆ ಅಗತ್ಯದಷ್ಟು ಹೊಸ ತರಕಾರಿ ಬರದೇ ಇರುವುದೇ ದರ ಏರಿಕೆ ಮೂಲ ಕಾರಣ ಎನ್ನಲಾಗುತ್ತಿದೆ.

ಬಹುಮುಖ್ಯವಾಗಿ ಹೊಸ ತರಕಾರಿ ಬೆಳೆಯಲು ಆಗದ ಸಂಕಷ್ಟಕ್ಕೆ ರೈತರು ಸಿಲುಕಿದ್ದಾರೆ. ಈಗಾಗಲೇ ಹಲವು ರೈತರ ಹೊಲಗಳು ಜಲಾವೃತಗೊಂಡಿದ್ದು, ಪರದಾಡುವ ಪರಿಸ್ಥಿತಿ ನಿರ್ಮಾಣಗೊಂಡಿದೆ.

ಇದನ್ನೂ ಓದಿ | Rain News | ವಿಜಯನಗರ ಜಿಲ್ಲೆಯಲ್ಲಿ ವಿವಿಧೆಡೆ ಮನೆಗಳಿಗೆ ಹಾನಿ, ಅಪಾರ ಪ್ರಮಾಣದ ಬೆಳೆ ನಷ್ಟ

Exit mobile version