Site icon Vistara News

Murder Case : ಕೊಲೆಯಾದ ವೇಣುಗೋಪಾಲ್ ಕುಟುಂಬಕ್ಕೆ 4.12 ಲಕ್ಷ ರೂ. ಕೊಟ್ಟ ಸರ್ಕಾರ

HC Mahadevappa issued check to venugopal wife

ಮೈಸೂರು: ತಿ.ನರಸೀಪುರದಲ್ಲಿ ಕೊಲೆಯಾಗಿರುವ (Murder case) ಯುವ ಬ್ರಿಗೇಡ್‌ ಕಾರ್ಯಕರ್ತ (Yuva Brigade activist murder) ವೇಣುಗೋಪಾಲ ನಾಯಕ್‌ (Venugopal Nayak) ಅವರ ಕುಟುಂಬಕ್ಕೆ ಸರ್ಕಾರದ ವತಿಯಿಂದ 4.12 ಲಕ್ಷ ರೂ. ಪರಿಹಾರದ ಚೆಕ್ ಅನ್ನು ವಿತರಣೆ ಮಾಡಲಾಗಿದೆ.

ಮೃತನ ನಿವಾಸಕ್ಕೆ ಭೇಟಿ ನೀಡಿದ ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ (Dr HC Mahadevappa), ಇಲಾಖೆಯ ವತಿಯಿಂದ 4.12 ಲಕ್ಷ ರೂಪಾಯಿ ಪರಿಹಾರದ ಚೆಕ್ ಅನ್ನು ವಿತರಣೆ ಮಾಡಿದರು. ಮೃತನ ಪತ್ನಿ ಪೂರ್ಣಿಮಾ ಅವರಿಗೆ ಚೆಕ್ ಅನ್ನು ಹಸ್ತಾಂತರಿಸಿದರು. ಅಲ್ಲದೆ, ಈ ವೇಳೆ ಕೊಲೆ ಪ್ರಕರಣದ ಮಾಹಿತಿಯನ್ನು ಪಡೆದುಕೊಂಡರು. ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಎಸ್‌ಪಿ ಸೀಮಾ ಲಾಟ್ಕರ್ ಸೇರಿದಂತೆ ಅಧಿಕಾರಿಗಳು, ಕಾಂಗ್ರೆಸ್ ಮುಖಂಡರು ಜತೆಗಿದ್ದರು.

ಇದನ್ನೂ ಓದಿ: Jain Muni Murder : ಜೈನಮುನಿ ದೇಹವನ್ನು 9 ಪೀಸ್‌ ಮಾಡಿದ್ದು ಗುಡ್ಡಗಾಡು ಪ್ರದೇಶದಲ್ಲಿ!

ಧರ್ಮ – ರಾಜಕೀಯದ ವ್ಯಾಪ್ತಿಗೆ ಬರಲ್ಲ

ವೇಣುಗೋಪಾಲ್ ನಾಯಕ್ ಹತ್ಯೆಯು ಧರ್ಮದ ವ್ಯಾಪ್ತಿಗೂ ಬರುವುದಿಲ್ಲ, ರಾಜಕೀಯದ ವ್ಯಾಪ್ತಿಗೂ ಬರುವುದಿಲ್ಲ. ಬ್ರಿಗೇಡ್ ಕಟ್ಟಿಕೊಂಡು ಹನುಮ ಜಯಂತಿಯನ್ನು ಚೆನ್ನಾಗಿಯೇ ಮಾಡಿದ್ದಾರೆ. ಅವರವರೇ ಗಲಾಟೆ ಮಾಡಿಕೊಂಡು ಕೊಲೆ ನಡೆದಿದೆ. ಹನುಮ ಜಯಂತಿಗೆ ಯಾರದ್ದೂ ಅಡ್ಡಿ, ತಕರಾರು ಇರಲಿಲ್ಲ. ಜಯಂತಿ ವೇಳೆ ಬ್ರಿಗೇಡ್‌ನಲ್ಲಿದ್ದವರ ನಡುವೆಯೇ ಪುನೀ ಪೋಟೊ ವಿಚಾರಕ್ಕೆ (Puneeth Rajkumar Photo Clash) ಜಗಳ ನಡೆದಿದೆ. ಕೊನೆಗೆ ಇದು ವಿಪರೀತಕ್ಕೆ ಹೋಗಿ ಕೊಲೆಯಾಗಿದೆ ಎಂದು ಸಚಿವ ಡಾ. ಎಚ್.‌ ಸಿ. ಮಹದೇವಪ್ಪ ಹೇಳಿದರು.

ಈ ಕೊಲೆಯಲ್ಲಿ ರಾಜಕೀಯ ಪಿತೂರಿ ಮಾಡಬಾರದು. ಕೊಲೆಗೆ ಹಿಂದುತ್ವದ ಅಜೆಂಡಾ ಫಿಕ್ಸ್ ಮಾಡುವ ಸಂಚನ್ನು ಬಿಜೆಪಿ ಮಾಡುತ್ತಿದೆ. ಬಿಜೆಪಿ ಈ ಆಟ ಬಹಳ ಕಾಲ ನಡೆಯಲ್ಲ. ಎಲ್ಲದಕ್ಕೂ ಹಿಂದುತ್ವದ ಅಜೆಂಡಾ ಫಿಕ್ಸ್ ಮಾಡೋದು ಬಿಜೆಪಿ ಚಾಳಿ. ಹತ್ಯೆಯ ಪ್ರಕರಣದಲ್ಲಿ ನನ್ನ ಮಗನ ಹೆಸರನ್ನು ಬಿಜೆಪಿ ವಿನಾಕಾರಣ ಎಳೆದು ತರಲಾಗುತ್ತಿದೆ. ನನ್ನ ಮಗನ ಮೇಲೆ ಹೀಗೆ ಹಿಂದೆಯೂ ಆರೋಪ ಮಾಡಿದ್ದರು. ಮಾಫಿಯಾ ಮಾಡಿದವರೇ ಆಗ ನನ್ನ ಮಗನ ಮೇಲೆ ಕೇಸ್ ದಾಖಲಿಸಿದ್ದರು. ಬಿಜೆಪಿಯವರು ಸುಳ್ಳನ್ನು ಸತ್ಯ ಮಾಡಲು ಹೊರಟಿದ್ದಾರೆ. ಪೊಲೀಸರ ತನಿಖೆ ಸರಿ ದಾರಿಯಲ್ಲಿ ಇದೆ. ಘಟನೆಯಾದ 6 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಡಾ. ಎಚ್.‌ ಸಿ. ಮಹದೇವಪ್ಪ ತಿಳಿಸಿದರು.

ಇದನ್ನೂ ಓದಿ: Kidnap Case : ಪೋಷಕರಿಂದಲೇ ನವವಿವಾಹಿತೆ ಅಪಹರಣ! ಮತ್ತೆ ಮನೆ ಸೇರುತ್ತಾಳಾ ಮಡದಿ?

ಈ ಕೊಲೆ ದೌರ್ಜನ್ಯದ ಪ್ರಕರಣ ಅಲ್ಲ. ಆದರೆ, ಎಸ್‌ಸಿ, ಎಸ್‌ಟಿ ಸಮುದಾಯದ ಯಾರಾದರೂ ಈ ರೀತಿ ಕೊಲೆಯಾದರೆ 8 ಲಕ್ಷ ರೂ. ಪರಿಹಾರ ಕೊಡಬಹುದು. ಪರಿಹಾರದ ಮೊದಲ ಕಂತಾಗಿ 4.12 ಲಕ್ಷ ರೂಪಾಯಿಯನ್ನು ನಾವೀಗ ಕೊಟ್ಟಿದ್ದೇವೆ. ಪ್ರಕರಣದ ಚಾರ್ಜ್‌ಶೀಟ್ ಸಿದ್ಧವಾದ ಮೇಲೆ ಉಳಿದ ಹಣ ಕೊಡುತ್ತೇವೆ. ಕೊಲೆಯಾದ ವ್ಯಕ್ತಿಯ ಪತ್ನಿಗೆ ಅನುಕಂಪದ ಆಧಾರದ ಮೇಲೆ ಕೆಲಸ ಕೊಡಿಸಲು ಯತ್ನ ಮಾಡಲಾಗುವುದು ಎಂದು ಡಾ. ಎಚ್.‌ ಸಿ. ಮಹದೇವಪ್ಪ ಹೇಳಿದರು.

Exit mobile version