ಮಂಡ್ಯ: ಶ್ರೀರಂಗಪಟ್ಟಣದ ಜಾಮಿಯಾ ಮಸೀದಿಯಲ್ಲಿ ಕಾರ್ಯಾಚರಿಸುತ್ತಿರುವ ಮದರಸಾವನ್ನು ಖಾಲಿ ಮಾಡಿಸುವಂತೆ ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಶ್ರೀರಂಗಪಟ್ಟಣ ಪೊಲೀಸರಿಗೆ ಮನವಿ ಸಲ್ಲಿಸಿದ್ದಾರೆ.
ಮೂಡಲು ಬಾಗಿಲು ಶ್ರೀ ಆಂಜನೇಯ ಸ್ವಾಮಿಯ ಮಂದಿರದಲ್ಲಿ ಇರುವಂತಹ ಹಿಂದೂ ಧಾರ್ಮಿಕ ಶಿಲೆಗಳು ಮತ್ತು ಕಂಬದಲ್ಲಿ ಮೇಲಿನ ಕೆತ್ತನೆಗಳನ್ನು ಮಸೀದಿಗೆ ಅಳವಡಿಸಲಾಗಿದೆ. ನಮಾಜ್‌ಗೆ ಬರುವಂತಹವರು ಆ ವಿಗ್ರಹಗಳನ್ನು ನಾಶ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಭಾರತೀಯ ಸ್ಮಾರಕ ಕಾಯಿದೆ ಪ್ರಕಾರ, ಇಲ್ಲಿ ಯಾರೂ ವಾಸ ಮಾಡುವಂತಿಲ್ಲ. ಆದರೆ, ಇಲ್ಲಿ ಕೆಲವರು ವಾಸ ಮಾಡುತ್ತಿದ್ದಾರೆ. ಹೀಗಾಗಿ ಮಸೀದಿಯವರ ವಿರುದ್ಧ ಪ್ರಕರಣ ದಾಖಲು ಮಾಡಬೇಕು ಎಂದು ಮೇ 20ರಂದು ಜಿಲ್ಲಾಧಿಕಾರಿಗಳಿಗೆ ಮತ್ತು ಶ್ರೀರಂಗಪಟ್ಟಣದ ತಹಸೀಲ್ದಾರ್ ಅವರಿಗೆ ಮನವಿ ನೀಡಿದ್ದೇವೆ. 14 ದಿನಗಳೊಳಗೆ ಎಫ್‌ಐಆರ್ ದಾಖಲು ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಇಲ್ಲಿ ನಮಾಜ್ ಮಾಡುವುದು ಮಾತ್ರವಲ್ಲ, ಅಡುಗೆ ಕೂಡಾ ಮಾಡಲಾಗುತ್ತಿದೆ. ಹಾಗಾಗಿ ಇದೆಲ್ಲವನ್ನೂ ತೆರುವುಗೊಳಿಸಬೇಕು ಎಂದು ಆಗ್ರಹಿಸಿದ್ದೇವೆ. 14 ದಿನಗಳೊಳಗೆ ಬೇಡಿಕೆಗಳನ್ನು ಈಡೇರಿಸದಿದ್ದರೆ ಜೂನ್ 4 ರಂದು ಶ್ರೀರಂಗಪಟ್ಟಣದಲ್ಲಿ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಘಟಕದ ವತಿಯಿಂದ ಆಂಜನೇಯಸ್ವಾಮಿ ಮೂಲ ಮಂದಿರ ಚಲೋ ಅಭಿಯಾನ ಹಮ್ಮಿಕೊಳ್ಳುವುದಾಗಿ ಕಾರ್ಯಕರ್ತರು ಎಚ್ಚರಿಕೆ ನೀಡಿದ್ದಾರೆ.
ಇದ್ದನ್ನೂ ಓದಿ| ಎಲ್ಲ ಮಸೀದಿ ಒಡೆದು ಶಿವಲಿಂಗ ಇದ್ಯಾ ಅಂತ ಹುಡುಕ್ಬೇಕು ಅಂದ ತೆಲಂಗಾಣ ಬಿಜೆಪಿ ನಾಯಕ!