ಶಿವಮೊಗ್ಗ: ʻʻನಗರದ ಗೋಪಾಲ ಗೌಡ ಕೊನೆ ಬಸ್ ನಿಲ್ದಾಣದಲ್ಲಿ ಬಜರಂಗ ದಳ ಧ್ವಜ ಸ್ತಂಭ ಸ್ಥಾಪನೆ ಮಾಡಿರುವುದು ಶೋಕಿಗಲ್ಲ. ಯಾರೆಲ್ಲ ಹಿಂದೂ ವಿರೋಧಿಗಳಿದ್ದಾರೋ ಅವರಿಗೆ ಎಚ್ಚರಿಕೆ ನೀಡಲುʼʼ ಎಂದು ವಿಶ್ವ ಹಿಂದು ಪರಿಷತ್ ದಕ್ಷಿಣ ಪ್ರಾಂತ ಸಂಚಾಲಕ ಮಂಗಳೂರು ಶರಣ್ ಪಂಪ್ ವೆಲ್ (Sharan Pumpwell) ಹೇಳಿದ್ದಾರೆ.
ಅವರು ಶಿವಮೊಗ್ಗ ಜಿಲ್ಲಾ ವಿಶ್ವ ಹಿಂದೂ ಪರಿಷತ್, ಭಜರಂಗ ದಳ ತುಂಗಾ ಪ್ರಖಂಡ ವತಿಯಿಂದ ಶಿವಮೊಗ್ಗ ನಗರದ ಗೋಪಾಲ ಗೌಡ ಕೊನೆ ಬಸ್ ನಿಲ್ದಾಣದಲ್ಲಿ ಭಜರಂಗ ದಳದ ವತಿಯಿಂದ ಸ್ಥಾಪಿಸಲಾಗಿರುವ ಧ್ವಜ ಸ್ತಂಭವನ್ನು ಭಗವಾಧ್ವಜವನ್ನು ಹಾರಿಸುವುದರ ಮೂಲಕ ಉದ್ಘಾಟಿಸಿದ ಬಳಿಕ ನಡೆದ ವಾಹನ ರ‍್ಯಾಲಿಯ ಕೊನೆಯಲ್ಲಿ ಮಾತನಾಡಿದರು.
ʻʻತುಂಗಾ ಪ್ರಖಂಡ ಆಯೋಜಿಸಿದ ವಾಹನ ಜಾಥಾದ ಮೂಲಕ ಧ್ಜಜ ಕಟ್ಟೆ ಉದ್ಘಾಟನೆ ಮಾಡಿದ್ದೇವೆ. ಈ ಭಾಗದಲ್ಲಿ ಹಿಂದೂಗಳ ಮೇಲೆ ದಬ್ಬಾಳಿಕೆ ಆಗ್ತಿದೆ, ಅದಕ್ಕೇ ಈ ಕಾರ್ಯಕ್ರಮ. ಶೋಕಿಗೆ ಈ ಧ್ವಜಕಟ್ಟೆ ಮಾಡಿಲ್ಲ. ಯಾರು ಲವ್ ಜಿಹಾದ್ ಮಾಡುತ್ತಾರೆ, ಗೋ ಹತ್ಯೆ ಮಾಡುತ್ತಾರೋ, ಮತಾಂತರ ಮಾಡುತ್ತಾರೋ ಅವರನ್ನೆಲ್ಲ ಧ್ವಜ ಕಟ್ಟೆ ಮೂಲಕ ಎದುರಿಸುವ ಸಂಕಲ್ಪ ಮಾಡೋಣʼʼ ಎಂದರು ಶರಣ್ ಪಂಪ್‌ವೆಲ್.
ʻʻಇವತ್ತು ಬಜರಂಗ ದಳ ದೇಶಕ್ಕೋಸ್ಕರ ಕೆಲಸ ಮಾಡುತ್ತಿದೆ. ಮಠ-ಮಂದಿರಗಳು, ಗೋಮಾತೆಯ ರಕ್ಷಣೆಯ ಕೆಲಸ ಮಾಡುತ್ತಿದೆ. ೧೯೬೪ ರಲ್ಲಿ ವಿಶ್ವ ಹಿಂದು ಪರಿಷತ್ ಉದ್ಘಾಟನೆ ಆಯಿತು. ನಾವು ಪ್ರತಿ ವರ್ಷ ಒಂದು ಲಕ್ಷ ಗೋವುಗಳ ರಕ್ಷಣೆ ಮಾಡುತ್ತಿದ್ದೇವೆ. ಸಾಕಷ್ಟು ಕಾರ್ಯಕರ್ತರು ಪೊಲೀಸರ ಪೆಟ್ಟು ತಿಂದಿದ್ದಾರೆ. ಗೋವಿಗೋಸ್ಕರ ಮಂಗಳೂರಿನ ಪ್ರಶಾಂತ್ ಪೂಜಾರಿ ಪ್ರಾಣಾರ್ಪಣೆ ಮಾಡಿದ್ದಾರೆ. ಈ ಸರ್ಕಾರ ಗೋಹತ್ಯೆ ನಿಷೇಧ ಕಾಯಿದೆ ತರಲು ನಮ್ಮ ಸಂಘಟನೆ ಕಾರಣʼʼ ಎಂದು ನೆನಪಿಸಿದರು.
ಹೆಣ್ಮಕ್ಕಳಿಗೆ ತೊಂದರೆಯಾದರೆ ಬಜರಂಗದಳಕ್ಕೆ ಹೇಳಿ
ʻʻಲವ್ ಜಿಹಾದ್ ವಿರುದ್ಧ ನಾವು ನಿರಂತರ ಹೋರಾಟ ಮಾಡುತ್ತಿದ್ದೇವೆ. ಕೆಲವರು ಪ್ರೀತಿ ಪ್ರೇಮದ ಹೆಸರಿನಲ್ಲಿ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡುತ್ತಿದ್ದಾರೆ. ದೆಹಲಿಯಲ್ಲಿ ಶ್ರದ್ಧಾ ಎಂಬ ಹೆಣ್ಣುಮಗಳ ಲವ್ ಜಿಹಾದ್ ಮಾಡಲಾಯಿತು. ಮುಸ್ಲಿಮ್ ಹುಡುಗನನ್ನು ಪ್ರೀತಿ ಮಾಡುವ ವಿಷಯವನ್ನು ಶ್ರದ್ಧಾ ತನ್ನ ತಾಯಿಯ ಬಳಿ ಹೇಳಿದ್ದಳು. ಮುಸ್ಲಿಂ ಹುಡುಗರು ಹೆಣ್ಣು ಮಕ್ಕಳನ್ನು ಹಾಳು ಮಾಡುತ್ತಾರೆ, ಹಾಗಾಗಿ ಈ ಪ್ರೀತಿ ಬೇಡ ಎಂದು ಹೇಳಿದರೂ ಆಕೆ ಕೇಳದೆ ಪ್ರೀತಿ ಮಾಡಿ ಕೊನೆಗೆ ೩೫ ತುಂಡಗಳಾಗಿ ಹೋದಳುʼʼ ಎಂದು ಶ್ರದ್ಧಾ ವಾಲ್ಕರ್ ಪ್ರಕರಣ ನೆನಪು ಮಾಡಿದರು.
ಮಂಗಳೂರಿನಲ್ಲಿ ದೀಪ್ತಿ ಎಂಬ ವೈದ್ಯೆ ಮುಸ್ಲಿಂ ಹುಡುಗನನ್ನು ಪ್ರೀತಿಸಿ ಅಂತಿಮವಾಗಿ ಸಿರಿಯಾದ ಉಗ್ರರ ಜತೆ ಸಂಪರ್ಕ ಹೊಂದಿ ಎನ್‌ಐಎನಿಂದ ಬಂಧಿತಳಾದ ಕಥೆಯನ್ನೂ ಶರಣ್ ಪಂಪ್‌ವೆಲ್ ವಿವರಿಸಿದರು. ಜತೆಗೆ ನಮ್ಮ ಮಕ್ಕಳನ್ನು ನಾವು ಸುರಕ್ಷಿತಗೊಳಿಸಬೇಕಾಗಿದೆ ಎಂದರು. ಹಿಂದು ಹೆಣ್ಣು ಮಕ್ಕಳಿಗೆ ಯಾರಾದರೂ ತೊಂದರೆ ಕೊಟ್ಟರೆ ಬಜರಂಗದಳದ ಯುವಕರಿಗೆ ಹೇಳಿ ಎಂದರು.
ನಾವು ಕಣ್ಣೀರು ಹಾಕೋದಲ್ಲ, ಅವರು ಕಣ್ಣೀರು ಹಾಕಬೇಕು
ʻʻಭಾರತ ಹಿಂದುಗಳ ದೇಶ. ಹಿಂದು ಸಮಾಜದ ಮೇಲೆ ನಿರಂತರ ದಬ್ಬಾಳಿಕೆ ನಡೆಯುತ್ತಿದೆ. ಈ ದೇಶದಲ್ಲಿ ಸಾವಿರಾರು ಚರ್ಚು, ಮಸೀದಿ ಕಟ್ಟಲು ಬಿಟ್ಟವರು ನಮ್ಮ ಪೂರ್ವಜರು. ಅವರಿಗೆಲ್ಲ ವ್ಯಾಪಾರ ಮಾಡಲು ಬಿಟ್ಟಿದ್ದರಿಂದಾಗಿಯೇ ಈಗ ದೌರ್ಜನ್ಯ ನಡೆಯುತ್ತಿದೆ. 2047ರಲ್ಲಿ ಭಾರತವನ್ನು ಇಸ್ಲಾಮಿಕ್ ರಾಷ್ಟ್ರ ಮಾಡಲು ಹೊರಟಿದ್ದಾರಂತೆ. ಇಂಥ ಪ್ರಯತ್ನಗಳನ್ನು ತಡೆಯಲು ನಾವೇ ರಸ್ತೆಗೆ ಇಳಿಯಬೇಕಾಗಿದೆʼʼ ಎಂದು ಶರಣ್ ಪಂಪ್‌ವೆಲ್ ಹೇಳಿದರು.
ʻʻನಾವು ಕೈಕಟ್ಟಿ ಕುಳಿತು ಕೊಳ್ಳುವ ಹಾಗಿಲ್ಲ. ಕಳೆದ ವರ್ಷ ಹರ್ಷ ಎಂಬ ಕಾರ್ಯಕರ್ತನ ಹತ್ಯೆ ಆದಾಗ ಜನರು ಕಣ್ಣೀರು ಹಾಕಿದರು. ಇವತ್ತು ಶಿವಮೊಗ್ಗದಲ್ಲಿ ಒಗ್ಗಟ್ಟು ಆಗ್ತಿದೆ. ಇನ್ನು ನಾವು ಕಣ್ಣೀರು ಹಾಕೋದಲ್ಲ, ಅವರು ಕಣ್ಣೀರು ಹಾಕಬೇಕು. ಇನ್ನೊಬ್ಬ ಹರ್ಷ ಸಾಯುವ ಮೊದಲು ಎಚ್ಚೆತ್ತುಕೊಳ್ಳಬೇಕು. ಸವಾಲುಗಳನ್ನು ಎದುರಿಸಿ ಉತ್ತರ ಹುಡುಕ ಬೇಕಿದೆʼʼ ಎಂದು ಹೇಳಿದರು ಶರಣ್ ಪಂಪ್‌ವೆಲ್.
ಹಿಂದು ಮಾತ್ರವಲ್ಲ ಮುಸ್ಲಿಂ ಹೆಣ್ಮಕ್ಕಳ ರಕ್ಷಣೆಗೂ ನಾವಿದ್ದೇವೆ
ʻʻಈ ಕಾರ್ಯಕ್ರಮ ಉದ್ಘಾಟನೆಗೆ ಸೀಮಿತ ಅಲ್ಲ. ಮುಂದಿನ ದಿನಗಳಲ್ಲಿ ನಮ್ಮಭಾಗದಲ್ಲಿ ಒಂದೇ ಒಂದು ಹೆಣ್ಣುಮಕ್ಕಳನ್ನು ಲವ್ ಜಿಹಾದ್ ಆಗಲು ಬಿಡಲ್ಲ. ಗೋ ಹತ್ಯೆಗೆ ಅವಕಾಶ ನೀಡಲ್ಲ. ಒಬ್ಬ ಹಿಂದು ಹತ್ಯೆ ಆದರೆ ಒಟ್ಟಾಗಿ ಸೇರಲು ಸಂಕಲ್ಪ ಮಾಡೋಣʼʼ ಎಂದು ಹೇಳಿದರು. ʻʻಪ್ರತಿ ತಿಂಗಳು ತಾಯಂದಿರನ್ನು ಸೇರಿಸಿ ಕಾರ್ಯಕ್ರಮ ಮಾಡಿ. ಈ ಧ್ದ್ವಜ ಕಟ್ಟೆ ಹಿಂದೂ ರಕ್ಷಾ ಕವಚವಾಗಲಿದೆ. ಜಿಹಾದಿಗಳು ಹಿಂದೂಗಳಿಗೆ ಕೈ ಹಾಕಿದರೆ ಕೈ ಇರೋಲ್ಲ ಎಂಬ ಸಂದೇಶ ಅವರಿಗೆ ಹೋಗಬೇಕು. ಮಂಗಳೂರಿನಲ್ಲಿ ಲವ್ ಜಿಹಾದ್ ತಡೆಗೆ ಹೆಲ್ಪ್ ಲೈನ್ ಮಾಡಿದ್ದೇವೆ. ಶಿವಮೊಗ್ಗದಲ್ಲಿ ಆದಷ್ಟು ಬೇಗ ಪ್ರಾರಂಭ ಮಾಡಿ. ಎಲ್ಲವನ್ನೂ ಪೊಲೀಸರಿಗೆ ಕಾಯುತ್ತಾ ಕುಳಿತುಕೊಳ್ಳಲು ಆಗಲ್ಲ. ಕೇವಲ ಹಿಂದು ಯುವತಿಯರ ರಕ್ಷಣೆ ಅಲ್ಲ, ಮುಸ್ಲಿಂ ಯವತಿಯರ ರಕ್ಷಣೆಗೂ ನಾವಿದ್ದೇವೆ. ಯಾವುದೇ ಯುವತಿಯರಿಗೆ ತೊಂದರೆಯಾದರೆ ಬಜರಂಗದಳ ಇದೆʼʼ ಎಂದು ನುಡಿದರು.
ಇದನ್ನೂ ಓದಿ : Bajaranga dal : ಶಿವಮೊಗ್ಗದಲ್ಲಿ ಬಜರಂಗ ದಳದಿಂದ ಕೇಸರಿ ಧ್ವಜಸ್ತಂಭ ಸ್ಥಾಪನೆ, ಬೃಹತ್ ವಾಹನ ರ‍್ಯಾಲಿ