Site icon Vistara News

Victoria Hospital: ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೇ ಯುವಕ ಸಾವು; ಆಸ್ಪತ್ರೆಯ ಮುಂದೆ ಕುಟುಂಬಸ್ಥರ ಗೋಳಾಟ

late treatment

ಬೆಂಗಳೂರು: ಇಲ್ಲಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೇ ಯುವಕ ಮೃತಪಟ್ಟಿದ್ದಾನೆಂದು (Victoria Hospital) ಕುಟುಂಬಸ್ಥರು ಆರೋಪಿಸಿದ್ದಾರೆ. ಶಿರಿಶಾ (22) ಮೃತ ದುರ್ದೈವಿ.

ಕಳೆದ ನಾಲ್ಕು ದಿನಗಳ ಹಿಂದೆ ಹೊಟ್ಟೆ ನೋವು ಕಾಣಿಸಿಕೊಂಡ ಹಿನ್ನೆಲೆ ನಗರದ ವಿಕ್ಟೋರಿಯಾ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತು. ಈ ಮಧ್ಯೆ ಶಿರಿಶಾಗೆ ಉಸಿರಾಟದ ತೊಂದರೆಯುಂಟಾಗಿದೆ. ಕೂಡಲೇ ಪೋಷಕರು ಆಸ್ಪತ್ರೆ ಸಿಬ್ಬಂದಿಗೆ ಬಂದು ನೋಡುವಂತೆ ಮನವಿ ಮಾಡಿದಾಗ, ವೈದ್ಯರಿಲ್ಲ ಬೆಳಗ್ಗೆ ಬರುವುದಾಗಿ ಹೇಳಿದ್ದಾರೆ ಎನ್ನಲಾಗಿದೆ. ಆದರೆ ಅಷ್ಟರಲ್ಲಿ ತೀವ್ರ ಅಸ್ವಸ್ಥಗೊಂಡ ಶಿರಿಶಾ ಮೃತಪಟ್ಟಿದ್ದಾನೆ.

ಮೃತ ಶಿರಿಶಾ ಪೋಷಕರ ಗೋಳಾಟ

ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೇ ಮಗ ಮೃತಪಟ್ಟಿದ್ದಾನೆ ಎಂದು ಆಸ್ಪತ್ರೆಯ ಮುಂದೆ ಕಣ್ಣೀರು ಇಟ್ಟು ಯುವಕ ತಾಯಿ ಗೋಳಾಡಿದ್ದಾರೆ. ಮನೆಗೆ ಆಸರೆಯಾಗಿದ್ದ ಮಗ ಬೆಳಗಾಗುವಷ್ಟರಲ್ಲಿ ಉಸಿರು ಚೆಲ್ಲಿದ್ದಾನೆ ಎಂದು ಕಣ್ಣೀರು ಹಾಕಿದ್ದಾರೆ. ವೈದ್ಯರು ಬರುವವರೆಗೆ ನಾವು ಮೃತದೇಹವನ್ನು ಮುಟ್ಟಲ್ಲ. ಆಸ್ಪತ್ರೆಯ ಮುಂದೆಯೇ ಮೃತದೇಹವನ್ನು ಇಡುತ್ತೇವೆ ಎಂದು ಆಕ್ರೋಶ ಹೊರಹಾಕಿದರು.

ಏನಿದು ಪ್ರಕರಣ?

ಮಳವಳ್ಳಿ ಮೂಲದ ಶಿರಿಶಾ ಹೊಟ್ಟೆ ನೋವು ಎಂದು ನಾಲ್ಕು ದಿನದ ಹಿಂದೆ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದರು. ದಾಖಲಾಗಿನಿಂದ ಕೆಲವೊಂದು ತಪಾಸಣೆ ಮಾಡಿದ್ದು ಬಿಟ್ಟರೆ, ಚಿಕಿತ್ಸೆ ನೀಡಿಲ್ಲ ಎಂದು ಪೋಷಕರು ಆರೋಪಿಸಿದ್ದಾರೆ. ಬೆಂಗಳೂರಿನ ಮಾಲ್ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದ ಶಿರಿಶಾಗೆ ಈ ವರ್ಷ ಮದುವೆ ಮಾಡಲು ಹೆಣ್ಣು ಹುಡುಕುತ್ತಿದ್ದೆವು. ಆದರೆ ಈಗ ಮಗ ಬಾರದ ಲೋಕಕ್ಕೆ ಹೋಗಿದ್ದಾನೆ. ಇದಕ್ಕೆ ಎಲ್ಲ ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರೇ ಕಾರಣವೆಂದು ಅಸಮಾಧಾನವನ್ನು ಹೊರಹಾಕಿದರು.

ಇದನ್ನೂ ಓದಿ: Karnataka Election : ರಾಜ್ಯದ 10 ಹಾಲಿ ಕಾಂಗ್ರೆಸ್‌ ಶಾಸಕರಿಗೇ ಕೈ ತಪ್ಪಲಿದೆ ಟಿಕೆಟ್‌, ಹೇಳಿದರೂ ಸುಧಾರಿಸಿಕೊಂಡಿಲ್ಲ!

Exit mobile version