Site icon Vistara News

Santa Claus | ಸಾಂತಾ ಕ್ಲಾಸ್ ವೇಷದಲ್ಲಿ ದೈವ ಅಣಕಿಸುವ ವಿಡಿಯೊ; ನೆಟ್ಟಿಗರು ಗರಂ

santa claus dance viral ಕಾಂತಾರ ವರಾಹ ರೂಪಂ

ಉಡುಪಿ: ಕ್ರಿಸ್ಮಸ್ ಹಿನ್ನೆಲೆಯಲ್ಲಿ ಮನೆ ಮನೆಗೆ ಸಾಂತಾ ಕ್ಲಾಸ್ (Santa Claus) ವೇಷದಲ್ಲಿ ಭೇಟಿ ನೀಡಿ ಉಡುಗೊರೆ ಕೊಡುವ ಪದ್ಧತಿ ತಲೆತಲಾಂತರದಿಂದ ಬಂದಿದೆ. ಇದು ಕ್ರೈಸ್ತ ಸಮುದಾಯದ ಪಾರಂಪರಿಕ ಸಂಪ್ರದಾಯವೂ ಆಗಿದೆ. ಆದರೆ, ಸಾಂತಾ ಕ್ಲಾಸ್ ವೇಷಧಾರಿಯೊಬ್ಬ ಕರಾವಳಿಯ ದೈವಾರಾಧನೆಯನ್ನು ಅಣಕಿಸುವ ವಿಡಿಯೊವೊಂದು ವೈರಲ್‌ ಆಗಿದೆ. ಇದು ಸಾರ್ವಜನಿಕವಾಗಿ ವ್ಯಾಪಕ ಟೀಕೆಗೂ ಗುರಿಯಾಗಿದೆ.

ಇತ್ತೀಚೆಗೆ ತೆರೆಕಂಡು ವಿಶ್ವಾದ್ಯಂತ ಗಮನ ಸೆಳೆದ ಕಾಂತಾರ ಚಲನಚಿತ್ರದಲ್ಲಿನ “ವರಾಹ ರೂಪಂ” ಹಾಡಿನ ದೃಶ್ಯದಂತೆಯೇ ಸಾಂತಾ ಕ್ಲಾಸ್‌ ವೇಷಧಾರಿಯು ದೈವದ ಅನುಕರಣೆಯನ್ನು ಮಾಡಿದ್ದಾನೆ. ಇದನ್ನು ಕೆಲವರು ವಿಡಿಯೊ ಮಾಡಿಕೊಂಡಿದ್ದಾರೆ.

ಆ ಹಾಡಿನಲ್ಲಿ ಭೂತಕೋಲ ವೇಷಧಾರಿಯು ನರ್ತನ ಮಾಡಿದಂತೆಯೇ ಮಾಡಿ ಕೊನೆಗೆ ಪಂಜಿನ ಬದಲಾಗಿ ಬಲ್ಬ್‌ ಹಿಡಿದು ಓಡುತ್ತಿರುವ ದೃಶ್ಯವು ಮೊಬೈಲ್‌ನಲ್ಲಿ ಸೆರೆಯಾಗಿದೆ. ಅಲ್ಲದೆ, ಇದನ್ನು ಅಲ್ಲೇ ಇದ್ದ ಕೆಲವರು ಅಪಹಾಸ್ಯವಾಗಿ ನಕ್ಕಿದ್ದಾರೆ. ಇದಕ್ಕೆ ನೆಟ್ಟಿಗರು ಸೇರಿದಂತೆ ಸಾರ್ವಜನಿಕರು ಆಕ್ರೋಶವನ್ನು ವ್ಯಕ್ತಪಡಿಸಿದ್ದು, ಕರಾವಳಿಯ ದೈವಾರಾಧನೆ ಕುರಿತ ಯಾವುದೇ ಹಾಸ್ಯ ಸಹಿಸುವುದಿಲ್ಲ, ಇದು ಆಕ್ಷೇಪಾರ್ಹ. ಈ ವಿಡಿಯೊ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ | Athiya Shetty | ಶೂಟಿಂಗ್‌ ವೇಳೆ ಒಟ್ಟಿಗೆ ಕಾಣಿಸಿಕೊಂಡ ನಟಿ ಅಥಿಯಾ ಶೆಟ್ಟಿ- ಕ್ರಿಕೆಟಿಗ ಕೆ ಎಲ್‌ ರಾಹುಲ್‌

Exit mobile version