ವಿಜಯನಗರ: ಕಾಮಧೇನು ಎಂದೇ ಹೆಸರಾಗಿರುವ ಹಸುವು ಕೇಳಿದ್ದನ್ನೆಲ್ಲ ಕೊಡುತ್ತದೆ. ಭಾರತೀಯ ಸಂಸ್ಕೃತಿಯಲ್ಲಿ ಹಸುವಿಗೆ (Cow) ವಿಶೇಷ ಪ್ರಾಶಸ್ತ್ಯವನ್ನೂ ನೀಡಲಾಗಿದೆ. ಗೋವು ಪೂಜಿಸಲ್ಪಡುತ್ತದೆ. ಅಲ್ಲದೆ, ಗೋವಿನ ಬಗ್ಗೆ ಅನೇಕ ಜಾನಪದ ಹಾಡುಗಳೂ ಇವೆ. ಹಸುವಿನ ಉದಾರ ಮನಸ್ಸಿಗೆ ಹೂವಿನಹಡಗಲಿಯಲ್ಲೊಂದು ನಿದರ್ಶನವನ್ನು ಕಾಣಬಹುದಾಗಿದೆ. ಕರುವಿನೊಂದಿಗೆ ಶ್ವಾನಕ್ಕೂ (Dog) ಹಸು ಹಾಲುಣಿಸುತ್ತಿದೆ. ಈ ವಿಡಿಯೊ ಈಗ ವೈರಲ್ (Video Viral) ಆಗಿದೆ. ನೆಟ್ಟಿಗರು ಕೋಟಿ ಕೋಟಿ ನಮನವನ್ನೂ ಸಲ್ಲಿಸಿದ್ದಾರೆ.
ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಅಂಗೂರು ಗ್ರಾಮದಲ್ಲಿ ಇಂಥದ್ದೊಂದು ಅಪರೂಪದ ಘಟನೆ ನಡೆದಿದೆ. ರೈತ ಶಿಬಿರಪ್ಪ ಎಂಬುವವರಿಗೆ ಸೇರಿದ ಹಸು ಇದಾಗಿದ್ದು, ನಿತ್ಯ ತನ್ನ ಕರುವಿನೊಂದಿಗೆ ನಾಯಿಗೂ ಹಾಲು ಕುಡಿಸುತ್ತಿದೆ.
ಇದನ್ನೂ ಓದಿ: HD Kumaraswamy : ದೇಶದಲ್ಲಿ GST ಇದ್ದಂತೆ, ರಾಜ್ಯದಲ್ಲೀಗ YST ಟ್ಯಾಕ್ಸ್: ಎಚ್.ಡಿ. ಕುಮಾರಸ್ವಾಮಿ
ಪ್ರತಿದಿನ ಮೂರು ಬಾರಿ ನಾಯಿಗೂ ಈ ಹಸು ಹಾಲುಣಿಸುತ್ತದೆ. ಹಸುವು ಶ್ವಾನಕ್ಕೆ ಹಾಲುಣಿಸುತ್ತಿರುವ ದೃಶ್ಯವು ಗ್ರಾಮಸ್ಥರಿಗೆ ಅಚ್ಚರಿ ಮೂಡಿಸಿದೆ. ಆದರೆ, ಹಾಲು ಕೊಡುತ್ತದೆ ಎಂದು ಶ್ವಾನ ಯಾವಾಗ ಎಂದರೆ ಆವಾಗ ಹೋದರೆ ಹಾಲು ಕೊಡುವುದಿಲ್ಲ. ಕರುವಿಗೆ ಹಾಲುಣಿಸುವಾಗ ಜತೆಗೆ ಶ್ವಾನ ಇದ್ದರೆ ಮಾತ್ರ ಹಾಲು ನೀಡುತ್ತದೆ.
ನಿಯತ್ತಿನ ನಾಯಿ
ಇನ್ನು ಈ ಶ್ವಾನವೂ ಸಹ ಬಹಳ ನಿಯತ್ತನ್ನು ಹೊಂದಿದೆ. ತಾಯಿ ಹಸು ಹಾಲು ಕೊಡುವುದಕ್ಕೋಸ್ಕರ ಕೃತಜ್ಞತೆಯನ್ನು ಹೊಂದಿದೆ. ಹೀಗಾಗಿ ಇದರ ಕರುವನ್ನು ಕಾವಲು ಕಾಯುತ್ತದೆ. ಯಾರೇ ಅಪರಿಚಿತರು ಬಂದರೂ ಕರುವನ್ನು ಮುಟ್ಟಲು ಬಿಡುವುದಿಲ್ಲ. ಹಾಗೇ ಹಸುವನ್ನೂ ಸಹ ರಕ್ಷಣೆ ಮಾಡುತ್ತದೆ. ಅವುಗಳಿಗೆ ಬಾಡಿಗಾರ್ಡ್‌ನಂತೆ ಈ ನಾಯಿ ನಿಂತುಕೊಂಡಿದೆ.
ಶ್ವಾನಕ್ಕೆ ಹಾಲುಣಿಸುತ್ತಿರುವ ಹಸುವಿನ ವಿಡಿಯೊ ಇಲ್ಲಿದೆ
ಇದನ್ನೂ ಓದಿ: DK Shivakumar : ಇನ್ನೊಂದು ವರ್ಷಕ್ಕೆ ಸಿಎಂ ಬದಲಾವಣೆ? ಡಿ.ಕೆ. ಶಿವಕುಮಾರ್ ಸಿಎಂ?; ಕೇದಾರನಾಥ ಶ್ರೀ ಮಾತಿನ ಅರ್ಥವೇನು?
ಪುಣ್ಯಕೋಟಿ ಹಸು
ಹೀಗೆ ಪ್ರತಿ ದಿನ ಹಾಲು ಕುಡಿಸುವ ದೃಶ್ಯವನ್ನು ಸಾರ್ವಜನಿಕರೊಬ್ಬರು ದೂರದಲ್ಲಿ ನಿಂತು ವಿಡಿಯೊ ಮಾಡಿಕೊಂಡಿದ್ದಾರೆ. ಬಳಿಕ ಅದನ್ನು ಸೋಷಿಯಲ್ ಮೀಡಿಯಾ ಮೂಲಕ ಹರಿಬಿಟ್ಟಿದ್ದಾರೆ. ಈಗ ಆ ವಿಡಿಯೊ ವೈರಲ್ ಆಗಿದೆ. ಹಸುವು ಶ್ವಾನವೊಂದಕ್ಕೆ ಹಾಲುಣಿಸುತ್ತಿರುವ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿಯೂ ಸಹ ಸಾಕಷ್ಟು ಚರ್ಚೆಗಳಾಗಿವೆ. ಗೋವಿನ ಮುಗ್ದತನಕ್ಕೆ ಇದುವೇ ಸಾಕ್ಷಿ ಎಂದು ಕೆಲವರು ಹೇಳಿಕೊಂಡಿದ್ದಾರೆ. ಗೋವಿಗೆ ಕಪಟ ಎಂಬುದು ಗೊತ್ತಿಲ್ಲ. ಅದಕ್ಕೇ ಅದನ್ನು ಪುಣ್ಯಕೋಟಿ ಎಂದು ಹೇಳುತ್ತೇವೆ ಎಂದು ಮತ್ತೊಬ್ಬರು ಹೇಳಿದ್ದಾರೆ. ಮಗದೊಬ್ಬರು ಕೋಟಿ ಕೋಟಿ ನಮನ ಎಂದು ಹೇಳಿದ್ದಾರೆ.