Site icon Vistara News

Video Viral | ಪಲ್ಲಕ್ಕಿ ಉತ್ಸವದಲ್ಲಿ ದೇವರು ಮೈಮೇಲೆ ಬಂದಂತೆ ಆಡಿದ ಮಹಿಳೆ; ವಿಡಿಯೊ ವೈರಲ್‌

ರಾಯಚೂರು: ಪಲ್ಲಕ್ಕಿ ಉತ್ಸವದ ವೇಳೆ ಮಹಿಳೆಯೊಬ್ಬರ ಮೈಮೇಲೆ ದೇವರು ಬಂದಂತೆ ಆಡಿದ ವಿಡಿಯೊವೊಂದು ವೈರಲ್ (Video Viral) ಆಗಿದೆ. ನಗರದ ಜ್ಯೋತಿ ಕಾಲೋನಿಯ ಉತ್ತಿನ ಉದ್ಭವ ಯಲ್ಲಮ್ಮ ದೇವಿಯ ವಾರ್ಷಿಕ ಪಲ್ಲಕ್ಕಿ ಉತ್ಸವ ಜರುಗಿತ್ತು.

ಈ ವೇಳೆ ಪಲ್ಲಕ್ಕಿ ಉತ್ಸವದ ದಾರಿ ಮಧ್ಯೆ ಸುನೀತಾ ಎಂಬ ಮಹಿಳೆ ಮೈಮೇಲೆ ದೇವರು ಬಂದಂತೆ ಆಡಿದ್ದಾರೆ. ವಿಚಿತ್ರವಾಗಿ ಶಬ್ಧ ಮಾಡಿದ ಸುನೀತಾ ಬಳಿಕ ಉತ್ಸವದಲ್ಲಿದ್ದ ಬಾಜಿಯ ಶಬ್ದಕ್ಕೆ ಹೆಜ್ಜೆ ಹಾಕಿದ್ದಾರೆ. ಕೂಡಲೇ ಸ್ಥಳದಲ್ಲಿದ್ದ ಇನ್ನಿತರ ಮಹಿಳೆಯರು ಸುನೀತಾಗೆ ನೀರು ಹಾಕಿ ದೇವರ ಪ್ರಸಾದ್ ಹಚ್ಚಿ ಶಾಂತ ಮಾಡಿದ್ದಾರೆ. ಈ ದೃಶ್ಯವನ್ನು ಸ್ಥಳೀಯರು ಮೊಬೈಲ್‌ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದು, ವಿಡಿಯೊ ವೈರಲ್ ಆಗಿದೆ.

ಇದನ್ನೂ ಓದಿ | Viral Video | ಸುಡುಬಿಸಿಲಿನಲ್ಲಿ ಕುಳಿತಿದ್ದ ವೃದ್ಧೆಯ ಎಲ್ಲ ಹಣ್ಣು ಖರೀದಿಸಿ, ಮಾನವೀಯತೆ ಮೆರೆದ ಪೊಲೀಸ್ ಅಧಿಕಾರಿ

Exit mobile version