ತುಮಕೂರು: ಆಯುರ್ವೇದ ಗುಣವಿರುವ ಭೂಚಕ್ರ ಗೆಡ್ಡೆಯನ್ನು ಸೇವಿಸಿದ್ದರೆ ದೇಹದ ಉಷ್ಣ ನಿವಾರಿಸಿ, ರಕ್ತವನ್ನು ಶುದ್ಧಿ ಮಾಡುವ ಗುಣ ಹೊಂದಿದೆ. ರಾಸಾಯನಿಕ ರಹಿತವಾದ ಗೆಡ್ಡೆ ಗೆಣಸುಗಳಲ್ಲಿ ಪೋಷಕಾಂಶವು ಹೆಚ್ಚಾಗಿರುತ್ತದೆ. ಹೀಗಾಗಿ ಮಾರುಕಟ್ಟೆಯಲ್ಲಿ ಈ ಗೆಡ್ಡೆಗೆ ಬೇಡಿಕೆ ಹೆಚ್ಚು. ಆದರೆ ಇದೆನ್ನೇ ಬಂಡವಾಳ ಮಾಡಿಕೊಂಡಿರುವ ಕೆಲ ಕಿಡಿಗೇಡಿಗಳು ಕತ್ತಾಳೆ ಗಡ್ಡೆಯನ್ನು ಭೂಚಕ್ರ ಗೆಡ್ಡೆ ಎಂದು ಮಾರಾಟ ಮಾಡುತ್ತಿದ್ದಾರೆ. ಈ ಮಾರಾಟ ಜಾಲವನ್ನು ಸಾರ್ವಜನಿಕರೇ ಪತ್ತೆ ಹಚ್ಚಿ ವಿಡಿಯೊ (Video Viral) ಹರಿಬಿಟ್ಟಿದ್ದಾರೆ.
ಭೂಚಕ್ರ ಗೆಡ್ಡೆಯು ಹೆಚ್ಚಾಗಿ ಉಷ್ಣ ಪ್ರದೇಶಗಳಲ್ಲಿ ಬೆಳೆಯಲಿದ್ದು, 5-6 ಅಡಿಯವರೆಗೆ ಬೇರು ಬಿಟ್ಟು, ಒಂದು ಅಡಿ ವೃತ್ತಾಕಾರದ ಗೆಡ್ಡೆಯಾಗಿ ಹಬ್ಬಿಕೊಳ್ಳುತ್ತದೆ. ಈ ಗೆಡ್ಡೆಯನ್ನು ಭೂಮಿಯಿಂದ ತೆಗೆಯಲು ಸಾಕಷ್ಟು ಸರ್ಕರ್ಸ್ ಮಾಡಬೇಕು. ಕೆಮ್ಮಣ್ಣಿನ ಬಣ್ಣ ಇರುವ ಈ ಗೆಡ್ಡೆ ಸಿಹಿಯಾಗಿ ರುಚಿ ಇರುತ್ತದೆ. 15 ವರ್ಷಕ್ಕೂಮ್ಮೆ ಬಿಡುವ ಗೆಡ್ಡೆ ಎಂದು ಕಿಡಿಗೇಡಿಗಳು ಸಾರ್ವಜನಿಕರಿಗೆ ಕತ್ತಾಳೆ ಗೆಡ್ಡೆಯನ್ನು ತಿನ್ನಿಸುತ್ತಿರುವ ಶಂಕೆ ವ್ಯಕ್ತವಾಗಿದೆ.
ಕಿಡಿಗೇಡಿಗಳ ಕಳ್ಳಾಟವನ್ನು ತುಮಕೂರು ಜಿಲ್ಲೆಯ ತಿಪಟೂರಿನ ಸಾರ್ವಜನಿಕರು ಪತ್ತೆ ಹಚ್ಚಿದ್ದು, ಕತ್ತಾಳೆ ಬೇರುಗಳನ್ನು ಕಡಿದು, ಅದಕ್ಕೆ ಕೆಮ್ಮಣ್ಣು ಬಳಿದು ಭೂಚಕ್ರ ಗೆಡ್ಡೆ ಎಂದು ಯಾಮಾರಿಸುತ್ತಿರುವ ಬಗ್ಗೆ ಅನುಮಾನ ಹೊರಹಾಕಿದ್ದಾರೆ. ಕತ್ತಾಳೆ ಗೆಡ್ಡೆಯ ಎಳೆ ತೆಗೆದು ನಿಂಬೆಹಣ್ಣು, ಉಪ್ಪು ಕಾರ ಹಚ್ಚಲಾಗುತ್ತದೆ. ಒಂದು ಎಳೆಗೆ 20 ರೂ.ನಂತೆ ಮಾರಾಟ ಮಾಡುತ್ತಿದ್ದಾರೆ. ಬೆಂಗಳೂರಿಗೂ ರವಾನೆ ಮಾಡಿ ಮಾರಾಟ ಮಾಡುತ್ತಿದ್ದಾರೆ ಎಂಬ ಶಂಕೆಯು ಇದೆ. ಸದ್ಯ ಈ ವಿಡಿಯೊ ಎಲ್ಲೆಡೆ ವೈರಲ್ ಆಗುತ್ತಿದ್ದು, ಸಾರ್ವಜನಿಕರು ಇದನ್ನು ಸೇವಿಸುವ ಮುನ್ನ ಎಚ್ಚರವಾಗಿ ಇರಬೇಕು.
ಇದನ್ನೂ ಓದಿ:Cosmetic Centre: ಬೊಜ್ಜು ಕರಗಿಸಲು ಹೋಗಿದ್ದ ಯುವತಿಯ ಟಾಪ್ ಲೆಸ್ ವಿಡಿಯೊ ರೆಕಾರ್ಡ್!
ಶ್ರೀರಾಮ ಸೇವಿಸಿದ ಭೂಚಕ್ರ ಗೆಡ್ಡೆ
ಶ್ರೀರಾಮ ವನವಾಸದಲ್ಲಿದ್ದಾಗ ಈ ಭೂಚಕ್ರ ಗೆಡ್ಡೆಯನ್ನೇ ಸೇವಿಸಿ ಹಸಿವು ನೀಗಿಸಿಕೊಳ್ಳುತ್ತಿದ್ದ. ಹೀಗಾಗಿ ಇದನ್ನೂ ರಾಮನ ಫಲಹಾರ ಎಂತಲೂ ಹೇಳುವ ಪ್ರತೀತಿ ಇದೆ. ಮಹಾಕುಂಭ ಮೇಳ ನಡೆಯುವ ಸಂದರ್ಭದಲ್ಲಿ ಈ ಭೂಚಕ್ರ ಗಡ್ಡೆಗೆ ತುಂಬಾ ಬೇಡಿಕೆ ಇರುತ್ತದೆ. ಮಹಾಕುಂಭಮೇಳದಲ್ಲಿ ಪ್ರತಿಯೊಬ್ಬ ಸಾಧುಸಂತರು ಈ ಗೆಡ್ಡೆಯನ್ನು ಸೇವಿಸುತ್ತಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ