Site icon Vistara News

Video Viral : ಅಸುನೀಗಿತು ಪ್ರೀತಿಯ ಹಸು; ಅಳುತ್ತಲೇ ಹಾಲು-ತುಪ್ಪ ಬಿಟ್ಟ ರೈತ, ಊರಿಗೆಲ್ಲ ಊಟ ಹಾಕಿದ!

Farmer cries over cow death in tumkur and last rites of the cow were performed Video Viral

ತುಮಕೂರು: ಮನುಷ್ಯ ಸಂಘ ಜೀವಿ ಮಾತ್ರವಲ್ಲ, ಭಾವನಾತ್ಮಕ ಜೀವಿಯೂ ಹೌದು. ಭಾವನೆಗಳ ಜತೆಯಲ್ಲಿಯೇ ಬದುಕು ಮನುಷ್ಯರು ಪ್ರತಿಯೊಂದು ಘಟ್ಟದಲ್ಲಿ, ವಸ್ತುವಿನಲ್ಲಿ ಹಾಗೂ ಸಹ ಜೀವಿಗಳ ಜತೆ ಉತ್ತಮ ಬಾಂಧವ್ಯವನ್ನು ಹೊಂದಿರುತ್ತಾರೆ. ಇನ್ನು ಮನೆಯಲ್ಲಿನ ಸಾಕು ಪ್ರಾಣಿಗಳ ಮೇಲೂ ಅತಿಯಾದ ಪ್ರೀತಿಯನ್ನು ಹೊಂದಿರುತ್ತಾರೆ. ಅವುಗಳೂ ಸಹ ಮನೆಯ ಒಬ್ಬ ಸದಸ್ಯರೇ ಆಗಿಬಿಟ್ಟಿರುತ್ತಾರೆ. ಅವುಗಳ ಆರೈಕೆ, ಪಾಲನೆ-ಪೋಷಣೆಯನ್ನು ಸ್ವಂತ ಮಕ್ಕಳಿಗೆ ಮಾಡುವಂತೆ ಮಾಡಿರುತ್ತಾರೆ. ಇಂಥ ಸಂದರ್ಭದಲ್ಲಿ ಅವುಗಳು ಮೃತಪಟ್ಟರೆ ಆಗುವ ಆಘಾತ ಅಂತಿಂತದ್ದಲ್ಲ. ಇಲ್ಲಾಗಿದ್ದೂ ಅದೇ. ತನ್ನ ಪ್ರೀತಿಯ ಹಸು ಮೃತಪಟ್ಟಿದ್ದಕ್ಕೆ ರೈತರೊಬ್ಬರು ಶಾಸ್ತ್ರೋಕ್ತವಾಗಿ ವಿಧಿವಿಧಾನವನ್ನು ಪೂರೈಸಿದ್ದಾರೆ. ಹಾಲು ತುಪ್ಪವನ್ನೂ ಬಿಟ್ಟಿದ್ದಾರೆ. ಈ ವಿಡಿಯೊ ಈಗ ವೈರಲ್‌ (Video Viral) ಆಗಿದೆ.

ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಕೋಳಘಟ್ಟ ಗ್ರಾಮದಲ್ಲಿ ಇಂಥದ್ದೊಂದು ಮನಕಲಕುವ ಪ್ರಸಂಗ ನಡೆದಿದೆ. ಪ್ರೀತಿಯಿಂದ ಸಾಕಿದ್ದ ಹಸು ಮೃತಪಟ್ಟಿದ್ದಕ್ಕೆ ರೈತನ ಆಕ್ರಂದನ ಮುಗಿಲು ಮುಟ್ಟಿತ್ತು. ವಯೋಸಹಜ ಕಾಯಿಲೆಯಿಂದ ಹಸು ಮೃತಪಟ್ಟಿದ್ದರೂ ಆ ನೋವನ್ನು ರೈತ ಕಂಚಿರಾಯಪ್ಪ ಎಂಬುವವರಿಗೆ ತಡೆದುಕೊಳ್ಳಲು ಸಾಧ್ಯವಾಗಿಲ್ಲ. ಆ ಹಸುವಿನ ಎದುರು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಕೊನೆಗೆ ಶಾಸ್ತ್ರೋಕ್ತವಾಗಿ ಅದರ ಅಂತಿಮ ಸಂಸ್ಕಾರವನ್ನು ನೆರವೇರಿಸುವ ತೀರ್ಮಾನಕ್ಕೂ ಬಂದಿದ್ದಾರೆ.

ಹೀಗಾಗಿ ಅವರು ತಮ್ಮ ಜಾಗದಲ್ಲಿ ಗುಂಡಿ ತೋಡಿ ಹಸುವನ್ನು ಹೂತಿದ್ದಾರೆ. ಬಳಿಕ ಹೂವುಗಳ ಅಲಂಕಾರವನ್ನು ಮಾಡಿದ್ದಾರೆ. ಮನುಷ್ಯರು ಮೃತಪಟ್ಟಾಗ ಮಾಡುವ ವಿಧಿ ವಿಧಾನಗಳನ್ನೇ ಅನುಸರಿಸಿದ್ದಾರೆ. ಹಸುವಿನ ಅಂತ್ಯಸಂಸ್ಕಾರ ವೇಳೆಯೂ ಬಿಕ್ಕಿ ಬಿಕ್ಕಿ ಅತ್ತುಬಿಟ್ಟಿದ್ದಾರೆ. ಬಳಿಕ ಕಂಚಿರಾಯಸ್ವಾಮಿ ಸೇರಿದಂತೆ ಕುಟುಂಬಸ್ಥರು ಹಾಲು-ತುಪ್ಪವನ್ನು ಬಿಟ್ಟಿದ್ದಾರೆ.

ಹಸುವಿಗೆ ಅಂತಿಮ ನಮನ; ವಿಡಿಯೊ ಇಲ್ಲಿದೆ

ಇದನ್ನೂ ಓದಿ: Karnataka Politics : ಶಿಕ್ಷಣಕ್ಕೂ ಕಾಲಿಟ್ಟ ರಾಜಕೀಯ; ರಾಜ್ಯದಲ್ಲಿ ಶುರುವಾಗಲಿದೆ ಪಾಲಿಟಿಕ್ಸ್‌ ಟ್ರೈನಿಂಗ್‌ ಸೆಂಟರ್‌!

ತಿಥಿ ಕಾರ್ಯ ನೆರವೇರಿಸಿದ ರೈತ

ಇನ್ನು ರಾತ್ರಿ ತಿಥಿ ಕಾರ್ಯವನ್ನೂ ನೆರವೇರಿಸಿದ ಕಂಚಿರಾಯಸ್ವಾಮಿ ಅವರು, ಬಳಿಕ ಊರಿನವರಿಗೆಲ್ಲ ಊಟ ಹಾಕಿಸಿದ್ದಾರೆ. ಮನೆಯ ಸದಸ್ಯಳಂತೆ ಇದ್ದ ಹಸುವು ಮೃತಪಟ್ಟಿದ್ದಕ್ಕೆ ಬಹಳವೇ ನೋವಿನಲ್ಲಿದ್ದಾರೆ. ಒಟ್ಟು 15 ರಾಸುಗಳನ್ನು ಕಂಚಿರಾಯಸ್ವಾಮಿ ಸಾಕಿದ್ದಾರೆ. ಅವುಗಳನ್ನು ವಿಶೇಷ ಆಸ್ಥೆಯಿಂದ ನೋಡಿಕೊಳ್ಳುತ್ತಿದ್ದಾರೆ.

Exit mobile version