ಕೊಪ್ಪಳ: ಎಲ್ಲಾದರೂ ಹಾವು ಕಂಡರೆ ಸಾಕು ಶ್ವಾನಗಳು ಅಟ್ಟಾಡಿಸಿ ಎಗರಿ ಎಗರಿ ದಾಳಿ ಮಾಡಿ ಕೊಂದು ಹಾಕಿಬಿಡುತ್ತವೆ. ಆಗಾಗ ಪ್ರಾಣಿಗಳ ನಡುವಿನ ಸಂಘರ್ಷವನ್ನು ನಾವು ನೋಡುತ್ತೇವೆ. ಸದ್ಯ ಕೊಪ್ಪಳದ ಕುಷ್ಟಗಿ ತಾಲೂಕಿನ ಬಸಾಪುರದಲ್ಲಿ ನಾಗರ ಹಾವು ಮತ್ತು ಬೆಕ್ಕಿನ ಕಾದಾಟ (snake And Cat fighting) ನಡೆದಿದ್ದು, ವಿಡಿಯೊ ವೈರಲ್ (Video Viral) ಆಗಿದೆ.
ಶನಿವಾರ ಬೆಳಗ್ಗೆ ಬಸಾಪುರ ಸಮೀಪ ಇದ್ದ ಹೋಟೆಲ್‌ವೊಂದರ ಬಳಿ ಸುಮಾರು 5 ಅಡಿ ಉದ್ದದ ನಾಗರಹಾವು ಹೆಡೆ ಎತ್ತಿ ಬುಸುಗುಡುತ್ತಿತ್ತು. ಹೋಟೆಲ್ ಮಾಲೀಕರೆಲ್ಲ ಹಾವು ಕಂಡು ಗಾಬರಿ ಆಗಿದ್ದರು.
ಅಯ್ಯೋ ಹಾವು ಏನಾದರೂ ಹೋಟೆಲ್‌ವೊಳಗೆ ನುಗ್ಗಿ ಬಿಟ್ಟರೆ? ಏನಾಪ್ಪ ಮಾಡುವುದು ಎಂದು ಆತಂಕಕ್ಕೆ ಒಳಗಾಗಿದ್ದರು. ಹತ್ತಿರ ನಿಂತು ಹಾವನ್ನು ದೂರಕ್ಕೆ ಕಳಿಸಲು ಪ್ರಯತ್ನಿಸುತ್ತಿದ್ದರು. ಆದರೆ ಹಾವು ಕಚ್ಚಿ ಬಿಟ್ಟರೆ ಎಂದು ಹಿಂದೆ ಸರಿದಿದ್ದರು.
ಮಾಲೀಕನ ಜಾಡು ಹಿಡಿದು ಬಂದಿದ್ದ ಬೆಕ್ಕು, ಬುಸುಗುಡುತ್ತಿದ್ದ ಹಾವು ಕಂಡು ಕಾದಾಟಕ್ಕೆ ನಿಂತಿತ್ತು. ಹಾವು ಹೆಡೆ ಎತ್ತಿ ಹೋರಾಟ ನಡೆಸಿದರೆ, ಬೆಕ್ಕು ಕಾಲಿನ ಪಂಜರದಿಂದ ಹಿಮ್ಮೆಟ್ಟಿಸುತ್ತಿತ್ತು. ಬೆಕ್ಕು ತನ್ನ ದೃಷ್ಟಿಯನ್ನು ಕದಲಿಸದೆ ನಾಗರ ಹಾವನ್ನೇ ದುರುಗುಟ್ಟಿಕೊಂಡು ನೋಡುತ್ತಾ ದಾಳಿ ಮಾಡುತ್ತಿತ್ತು.
ನಾಗರ ಹಾವು ಹೋಟೆಲ್ ಒಳಗೆ ಬರದಂತೆ ತಡೆಯಲು ಬೆಕ್ಕು ಸುಮಾರು ಒಂದು ಗಂಟೆ ಕಾಲ ಕಾದಾಟ ನಡೆಸಿದೆ. ಇದನ್ನು ಸ್ಥಳೀಯರು ತಮ್ಮ ಮೊಬೈಲ್‌ನಲ್ಲಿ ಸೆರೆಯಿಡಿದಿದ್ದಾರೆ.
ಹೆಜ್ಜೆ ಸದ್ದು ಹಾವಿಗೆ ಗೊತ್ತಾಗದಂತೆ ಮೆಲ್ಲ ಮೆಲ್ಲನೇ ನಡೆದು ಬಂದು ಹಾವಿನ ಮೇಲೆ ಬೆಕ್ಕು ದಾಳಿ ಮಾಡಿದೆ. ಜಿದ್ದಾಜಿದ್ದಿಯಲ್ಲಿ ಕೊನೆಗೆ ನಾಗರ ಹಾವು ಬೆಕ್ಕಿಗೆ ಸೋತು ಪಲಾಯನ ಮಾಡಿದೆ.
ಇಲ್ಲಿದೆ ನೋಡಿ ರೋಚಕ ಕಾದಾಟದ ವಿಡಿಯೊ
ಇನ್ನಷ್ಟು ವೈರಲ್ ವಿಡಿಯೊಗಾಗಿ ಈ ಲಿಂಕ್ ಕ್ಲಿಕ್ ಮಾಡಿ