Site icon Vistara News

Video Viral | ಮಕ್ಕಳಿಗೆ ಬಿಸಿಯೂಟ ಬಡಿಸುವಾಗ ಬಂದ ಮಂಗ; ತುತ್ತು ನೀಡಿದ ಶಿಕ್ಷಕ, ಖುಷಿಯಲ್ಲಿ ತಿಂದ ವಾನರ

ಕೊಪ್ಪಳ: ಇಲ್ಲಿನ ಜಬ್ಬಲಗುಡ್ಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರೊಬ್ಬರು ಮಂಗನಿಗೆ ತುತ್ತು ನೀಡಿ ಊಟ ಮಾಡಿಸಿರುವ ವಿಡಿಯೊ ವೈರಲ್‌ (Video Viral) ಆಗಿದೆ.

ಶಾಲೆಯಲ್ಲಿ ಮಕ್ಕಳಿಗೆ ಬಿಸಿಯೂಟ ನೀಡುವ ಸಮಯಕ್ಕೆ ಬಂದ ಮಂಗ ಅತ್ತಿಂದಿತ್ತ ಓಡಾಡುತ್ತಿತ್ತು. ಮಕ್ಕಳೊಂದಿಗೆ ತಾನೂ ಊಟ ಮಾಡಲು ಹಾತೊರೆಯುತ್ತಿತ್ತು. ಅಲ್ಲಿಯೇ ಚಡಪಡಿಸುತ್ತಿತ್ತು.

ಇದನ್ನು ಗಮನಿಸಿದ ಮುಖ್ಯ ಶಿಕ್ಷಕ ಇಬ್ರಾಹಿಂ ಮಂಗಕ್ಕೆ ತುತ್ತು ಕೊಟ್ಟು ಊಟ ಮಾಡಿಸಿದ್ದಾರೆ. ತಟ್ಟೆಗೆ ರುಚಿಯಾದ ಅನ್ನ ಸಾಂಬರ್‌ ಹಾಕಿಕೊಂಡು ಬಂದು ತುತ್ತು ಕೊಟ್ಟಿದ್ದಾರೆ.

ಇದನ್ನು ಆ ವಾನರವೂ ಅಷ್ಟೇ ಆಸ್ಥೆಯಿಂದ ಕೂತು ತಿಂದಿದೆ. ಹಸಿದ ಹೊಟ್ಟೆಯನ್ನು ತುಂಬಿಕೊಂಡಿದೆ. ಆ ಶಿಕ್ಷಕನಿಗೆ ಮನದಲ್ಲೇ ಹರಸಿದೆ.

ಇದನ್ನೂ ಓದಿ | Elephant Attack | ನಾಡಿನಲ್ಲಿ ಒಂಟಿ ಸಲಗ ಬಿಂದಾಸ್‌ ಆಟ; ಹೇಮಾವತಿ ಬ್ಯಾಕ್ ವಾಟರ್‌ನಲ್ಲಿ ಈಜಾಡಿದ ಕಾಡಾನೆ

Exit mobile version