Site icon Vistara News

Video Viral : ಮಳೆಗೆ ಕೆರೆಯಂತಾದ ರಸ್ತೆ; ಹೆಗಲ ಮೇಲೆ ಬೈಕ್‌ ಹೊತ್ತು ಸಾಗಿದ ಆಧುನಿಕ ಬಾಹುಬಲಿ

Bike Rider

ರಾಯಚೂರು: ಮಳೆ ಬಂದರೂ ಕಷ್ಟ, ಬಾರದೆ ಇದ್ದರೂ ನಷ್ಟ ಎಂಬಂತೆ ಭಾಸವಾಗುತ್ತದೆ. ಗಂಟೆಯ ಮಳೆಗೆ ಕೆರೆಯಂತಾಗುವ ರಸ್ತೆಗಳಲ್ಲಿ ಏನಾದರೂ ವಾಹನ ಚಲಾಯಿಸಲು ಹೋದರೆ ಕೆಟ್ಟು ನಿಲ್ಲುವ ಆತಂಕ ಶುರುವಾಗುತ್ತದೆ. ಹೀಗಾಗಿ ಇಲ್ಲೊಬ್ಬ ಸವಾರ ಮೊಟಕಾಲಷ್ಟು ನಿಂತ ನೀರಲ್ಲಿ ಹೆಗಲ ಮೇಲೆ ಬೈಕ್ ಹೊತ್ತು ಸಾಗಿರುವ ವಿಡಿಯೋ ವೈರಲ್‌ (Video Viral) ಆಗಿದೆ.

ರಾಯಚೂರಿನ ಕರೇಕಲ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕಳೆದೆರಡು ದಿನಗಳಿಂದ ಸುರಿದ ವ್ಯಾಪಕ ಮಳೆಗೆ ಕರೇಕಲ್‌ ಅಂಡರ್ ಪಾಸ್‌ನಲ್ಲಿ ನಾಲ್ಕೈದು ಅಡಿ ನೀರು ನಿಂತಿತ್ತು. ಡ್ರೈನೇಜ್‌ ಕಟ್ಟಿಕೊಂಡಿದ್ದರಿಂದ ಮಳೆ ನೀರು ಸರಾಗವಾಗಿ ಹರಿದು ಹೋಗದೆ ರಸ್ತೆ ತುಂಬೆಲ್ಲಾ ನಿಂತುಕೊಂಡಿತ್ತು. ಇದರಿಂದಾಗಿ ವಾಹನ ಸವಾರರು ಕಿರಿಕಿರಿ ಅನುಭವಿಸಬೇಕಾಯಿತು.

ಮೊಟಕಾಲಷ್ಟು ಮಳೆ ನೀರು ನಿಂತ ಕಾರಣದಿಂದಾಗಿ ವಾಹನ ಸವಾರರು ಪರದಾಡಬೇಕಾಯಿತು. ಮಳೆ ನೀರಿಗೆ ಕೆಲ ವಾಹನಗಳು ಕೆಟ್ಟು ನಿಲ್ಲುವಂತಾಯಿತು. ಅಧಿಕಾರಿಗಳ ವಿರುದ್ಧ ವಾಹನ ಸವಾರರು ಕಿಡಿಕಾರಿದರು. ತೆರಿಗೆ ಕಟ್ಟಿಸಿಕೊಳ್ಳುತ್ತಾರೆ ವಿನಃ ಸರಿಯಾದ ವ್ಯವಸ್ಥೆ ಇಲ್ಲ ಎಂದು ಗರಂ ಆದರು.

ಅಂಡರ್‌ಪಾಸ್‌ನಲ್ಲಿ ಮೊಣಕಾಲಷ್ಟು ನಿಂತ ನೀರಲ್ಲಿ ಬೈಕ್‌ ಹೊತ್ತು ಸಾಗಿದ ಸವಾರ

ಇದನ್ನೂ ಓದಿ: Video Viral : ಫ್ರೀ ಬಸ್ಸಲ್ಲಿ ಟ್ರಿಪ್‌ಗೆ ಹೋದ ಹೆಂಡತಿ ಮನೆಗೆ ಬಂದಿಲ್ಲ; ಬಸ್‌ ಚಕ್ರಕ್ಕೆ ತಲೆ ಇಟ್ಟು ಕುಡುಕನ ಕಿರಿಕ್!

ನಿಂತ ನೀರಲ್ಲಿ ಬೈಕ್ ಸಾಗದ ಹಿನ್ನೆಲೆ ಸವಾರನೊಬ್ಬ ಹೆಗಲ ಮೇಲೆ ಎಚ್‌ಎಫ್‌ ಡಿಲಕ್ಸ್‌ ಬೈಕ್‌ಅನ್ನೇ ಹೊತ್ತು ಅಂಡರ್‌ಪಾಸ್‌ ದಾಟ್ಟಿದ್ದಾರೆ. ಬೈಕ್ ಹೊತ್ತು ಸಾಗುವ ವಿಡಿಯೊವನ್ನು ಸ್ಥಳೀಯರು ತಮ್ಮ ಮೊಬೈಲ್‌ನಲ್ಲಿ ಸೆರೆಯಿಡಿಸಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ಇದು ವೈರಲ್‌ ಆಗುತ್ತಿದ್ದು, ಯಾರಪ್ಪ ಇದು ಆಧುನಿಕ ಬಾಹುಬಲಿ ಎಂದು ನೆಟ್ಟಿಗರು ಕಾಮೆಂಟ್‌ ಮಾಡಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version