Site icon Vistara News

Vijayadashami 2023 : ಆಯುಧ ಪೂಜೆ, ವಿಜಯದಶಮಿ ಹಬ್ಬಕ್ಕೆ ಖರೀದಿ ಭರಾಟೆ ಜೋರು

kr market festival shooping

ಬೆಂಗಳೂರು: ಜನರು ಅದೆಷ್ಟೇ ಬ್ಯುಸಿ ಇದ್ದರೂ ಹಬ್ಬ-ಹರಿದಿನ ಎಂದರೆ ಸಂಭ್ರಮದೊಂದಿಗೆ ಅದ್ಧೂರಿಯಾಗಿ ಆಚರಿಸುತ್ತಾರೆ. ನಾಡಿನಾದ್ಯಂತ ಆಯುಧ ಪೂಜೆ ಹಾಗೂ ವಿಜಯದಶಮಿ ಸಂಭ್ರಮ (vijayadashami 2023) ಮನೆ ಮಾಡಿದೆ. ಆಯುಧ ಪೂಜೆ ಹಿನ್ನೆಲೆ ಹೂವು-ಹಣ್ಣುಗಳ ಖರೀದಿಗೆ ಮುಗಿಬಿದ್ದಿದ್ದಾರೆ.

ನಗರದ ಕೆ.ಆರ್‌.ಮಾರ್ಕೆಟ್‌, ಮಲ್ಲೇಶ್ವರಂ, ಜಯನಗರ, ಬಸವನಗುಡಿ, ಮಡಿವಾಳ ಮಾರ್ಕೆಟ್‌ಗಳಲ್ಲಿ ಜನಸ್ತೋಮವೇ ತುಂಬಿ ತುಳುಕುತ್ತಿದೆ. ಬೆಂಗಳೂರು ಸುತ್ತಮುತ್ತಲಿನ ರೈತರು ಮಾರಾಟಕ್ಕೆ ಆಗಮಿಸಿದ್ದಾರೆ. ಆಯುಧ ಪೂಜೆಗೆ ಬೂದುಕುಂಬಳಕಾಯಿ ಹಾಗೂ ಬಾಳೆ ಕಂಬಕ್ಕೆ ಫುಲ್ ಡಿಮ್ಯಾಂಡ್ ಇದ್ದು, ಹಬ್ಬದ ಸಂಭ್ರಮದಲ್ಲಿ ಇರುವವರಿಗೆ ಹೂ-ಹಣ್ಣಿನ ದರ ಏರಿಕೆ ಬಿಸಿ ತಟ್ಟಿದೆ.

ಇದನ್ನೂ ಓದಿ: Navaratri: ದಸರಾ ಎಫೆಕ್ಟ್‌; ಊರಿನತ್ತ ಮುಖಮಾಡಿದ ರಾಜಧಾನಿಯ ಜನ, ಬಸ್‌ಗಳು ಫುಲ್‌ ರಶ್, ಟ್ರಾಫಿಕ್‌ ಜಾಮ್‌

ಮುಖ್ಯವಾಗಿ ಅಕಾಲಿಕ ಮಳೆಯಿಂದ ಹೂ-ಹಣ್ಣಿನ ದರವು ಗಗನಕ್ಕೇರಿದೆ. ಆದರೂ ಜನರು ಬೆಲೆ ಏರಿಕೆ ನಡುವೆಯು ಖದೀರಿ ಭರಾಟೆ ಜೋರಾಗಿದೆ. ಹಾಗಾದರೆ ಯಾವ್ಯಾವ ಹೂ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ.

ಕೈಗೆಟುಕಾದ ಹೂವಿನ ರೇಟು (ಕೆ.ಜಿ)

ಮಲ್ಲಿಗೆ- 1000 ರಿಂದ 1200 ರೂ.
ಸೇವಂತಿಗೆ- 300 ರಿಂದ 500 ರೂ.
ಗುಲಾಬಿ-200 ರಿಂದ 309 ರೂ.
ಕನಕಾಂಬರ-1100 ದಿಂದ 1300 ರೂ.
ಮಳ್ಳೆ ಹೂವು-800 ರಿಂದ 1000 ರೂ.

ಹಣ್ಣುಗಳ ದರವೂ ದುಬಾರಿ

ಏಲಕ್ಕಿ ಬಾಳೆ 120 ರಿಂದ 140 ರೂ.
ಅನಾನಸ್ 40 ರಿಂದ 70 ರೂ.
ದಾಳಿಂಬೆ 100 ರಿಂದ 150 ರೂ.
ಸೇಬು -180 ರಿಂದ 350 ರೂ.

ಆಯುಧ ಪೂಜೆಗೆ ಮುಖ್ಯವಾಗಿ ಬೇಕಾಗಿರುವ ಬೂದು ಕುಂಬಳಕಾಯಿ ದರವು ಕಳೆದ ಬಾರಿಗಿಂತ ಈ ಬಾರಿ ಏರಿಕೆ ಆಗಿದೆ. ಕೆ.ಜಿಗೆ 30ರೂ ಇದ್ದ ಬೂದುಗುಂಬಳ‌ ಈಗ ಕೆ.ಜಿಗೆ 150 ರಿಂದ 200ರೂವರೆಗೂ ಇದೆ. ತಮಿಳುನಾಡು, ಆಂಧ್ರಪ್ರದೇಶದಿಂದ ಬೂದು ಕುಂಬಳಕಾಯಿ ತರಲಾಗುತ್ತಿದೆ. ಈ ಬಾರಿ ಮಳೆ ಇಲ್ಲದೆ, ಇಳುವರಿ ಕಡಿಮೆಯಾಗಿದ್ದರಿಂದ ದರ ಏರಿಕೆ ಆಗಿದೆ ಎಂದು ವ್ಯಾಪಾರಸ್ಥರು ತಿಳಿಸಿದ್ದಾರೆ. ಇನ್ನೂ ಬಾಳೆ ಕಂಬಕ್ಕೆ ಜೋಡಿ 100-150ರೂ ವರೆಗೂ ಮಾರಾಟ ಮಾಡಲಾಗುತ್ತಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version