ಹಂಪಿ: ವಿಶ್ವ ಪಾರಂಪರಿಕ ತಾಣ ಹಂಪಿಯನ್ನು ಪ್ರವಾಸಿಗರು ಶೀಘ್ರದಲ್ಲಿಯೇ ಅಂಬಾರಿಯಲ್ಲಿ ಕುಳಿತು ವೀಕ್ಷಿಸಬಹುದು. ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಈಗ ಅಂಬಾರಿ ಬಸ್ ಸೇವೆಯನ್ನು ಹಂಪಿಯಲ್ಲಿ ಪರಿಚಯಿಸುತ್ತಿದ್ದು, ತೆರೆದ ಬಸ್‌ನಲ್ಲಿ ಹಂಪಿಯ ಸೌಂದರ್ಯ ಸವಿಯಬಹುದು.
ಈ ಹಿಂದೆ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಕೆಎಸ್‌ಟಿಡಿಸಿ) ವತಿಯಿಂದ ಇಂತಹ ಬಸ್ ಸೇವೆಯನ್ನು ಮೈಸೂರಿನಲ್ಲಿ ಆರಂಭಿಸಲಾಗಿತ್ತು. ಈಗ ಕೆಎಸ್‌ಟಿಡಿಸಿ ಹಾಗೂ ಹಂಪಿ ಅಭಿವೃದ್ಧಿ ಪ್ರಾಧಿಕಾರ ಜತೆಗೂಡಿ ಅಂಬಾರಿ ಬಸ್ ಸೇವೆಯನ್ನು ಪರಿಚಯಿಸಲಾಗುತ್ತಿದೆ.
ಹಂಪಿ ಸ್ಮಾರಕಗಳ ಜತೆಗೆ ತುಂಗಭದ್ರಾ ಜಲಾಶಯ, ಅಟಲ್ ಬಿಹಾರಿ ವಾಜಪೇಯಿ ಮೃಗಾಲಯ ವೀಕ್ಷಣೆಗೆ ಈ ಯೋಜನೆ ರೂಪಿಸಲಾಗುತ್ತಿದೆ.
ಹಂಪಿಯಲ್ಲಿ ಈ ಬಸ್ ಸಂಚರಿಸುವಾಗ ವಿದ್ಯುತ್ ತಂತಿ ಹಾಗೂ ಮರಗಿಡಗಳು ಅಡ್ಡಿಯಾಗಲಿವೆಯೇ ಎಂಬುದನ್ನು ತಿಳಿಯಲು ಶನಿವಾರ ಪ್ರಾಯೋಗಿಕ ಸಂಚಾರ ಮಾಡಲಾಯಿತು. ಹಂಪಿ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಸಿದ್ದರಾಮೇಶ್ವರ, ಆರ್‌ಎಫ್‌ಒ ವಿನಯ್, ಜೆಸ್ಕಾಂ ಅಧಿಕಾರಿ ಉಮೇಶ್, ಆರ್‌ಟಿಒ ಇನ್ಸ್‌ಪೆಕ್ಟರ್ ಸಂದೀಪ್ ಮತ್ತಿತರರು ಸಂಚರಿಸಿದರು.
ಇದನ್ನೂ ಓದಿ: ಲಂಕಾ ಪ್ರವಾಸ: clean sweep ಅವಕಾಶ ತಪ್ಪಿಸಿದ ಚಾಮರಿ ಅಟ್ಟಪಟ್ಟು