Site icon Vistara News

ʼಸಂವಿಧಾನ ಬದಲಾವಣೆ ಅಸಾಧ್ಯʼ; ಸಚಿವ ಆನಂದ್ ಸಿಂಗ್

ವಿಜಯನಗರ: ವಿಜಯನಗರ ಜಿಲ್ಲೆಯ ಕಮಲಾಪುರದ ಸಮಾರಂಭದಲ್ಲಿ ಮಾತನಾಡಿದ ಸಚಿವ ಆನಂದ್‌ ಸಿಂಗ್‌ ʼಸಂವಿಧಾನ ಬದಲಾವಣೆ ಮಾಡಲು ಅಸಾಧ್ಯʼ ಎಂದು ಹೇಳಿದ್ದಾರೆ. ಕಮಲಾಪುರದ ಪಟ್ಟಣದಲ್ಲಿ ಆಯೋಜನೆ ಮಾಡಿಲಾಗಿದ್ದ ಅಂಬೇಡ್ಕರ್‌ ಜಯಂತಿ ಕಾರ್ಯಕ್ರಮದಲ್ಲಿ ಸಚಿವ ಆನಂದ್‌ ಸಿಂಗ್‌ ಹೇಳಿಕೆ ನೀಡಿದ್ದಾರೆ.

ಇತ್ತೀಚೆಗಷ್ಟೆ ಹೊಸಪೇಟೆಯಲ್ಲಿ ರಾಜ್ಯಬಿಜೆಪಿ ಕಾರ್ಯಕಾರಿಣಿ ಸಭೆಯನ್ನು ವೈಭವಯುತವಾಗಿ ಆಯೋಜಿಸಿದ ಹುಮ್ಮಸಿಸನಲ್ಲಿರುವ ಆನಂದ ಸಿಂಗ್‌, ಸಮಾರಂಭದಲ್ಲಿ ಬಿರುಸಿನ ಭಾಷಣ ಮಾಡಿದರು. ʼಸಂವಿಧಾನ ಬದಲಾವಣೆ ಮಾಡೋದು ಯಾರಿಂದಲೂ ಸಾಧ್ಯವಿಲ್ಲ. ಈ ಜಗತ್ತಿನಲ್ಲಿ ಸೂರ್ಯ- ಚಂದ್ರ ಇರುವವರೆಗೂ ಸಂವಿಧಾನ ಬದಲಾವಣೆ ಅಸಾಧ್ಯ.ʼ ಎಂದು ಘಂಟಾಘೋಷವಾಗಿ ಹೇಳಿದರು.

Video ನೋಡಿ | ಹಂಪಿ ಸೌಂದರ್ಯಕ್ಕೆ ಮನಸೋತ BJP ಅಧ್ಯಕ್ಷ ಜೆ.ಪಿ. ನಡ್ಡಾ: ₹50 ನೋಟಿನೊಂದಿಗೆ ಫೋಟೊಗೆ ಪೋಸ್‌ ನೀಡಿದ ಕುಟುಂಬ

ಇದನ್ನೂ ಓದಿ:

“ನಾನು ಮಾನವ ಜಾತಿ ರಕ್ಷಣೆ ಮಾಡಲು ಬಂದವನು, ನನಗೆ ಜಾತಿ, ಧರ್ಮ ಎಲ್ಲಾ ಏನಿಲ್ಲಾ. ನಾನು ನಂಬಿಕೆ ಇಟ್ಟಿರೋದು ಮಾನವ ಧರ್ಮದಲ್ಲಿ ಮಾತ್ರ” ಎಂದು ಡಾ. ಬಾಬಾ ಸಾಹೇಬ್ ಹೇಳಿಕೊಟ್ಟಿದ್ದರು. ನಾನೂ ಅದನ್ನೆ ಪಾಲಿಸುವವನು ಎಂದು ಹೇಳುತ್ತಾ ಸಚಿವ ಆನಂದ್‌ ಸಿಂಗ್ ಅಂಬೇಡ್ಕರ್‌ ಮಾತನ್ನು ನೆನಪಿಸಿಕೊಂಡರು.

https://vistaranews.com/wp-content/uploads/2022/04/WhatsApp-Video-2022-04-25-at-5.27.29-PM.mp4

ಇದನ್ನೂ ಓದಿ: BJP ರಾಜ್ಯ ಕಾರ್ಯಕಾರಿಣಿಗೆ ಸಂತೋಷ್‌ ಆತ್ಮಹತ್ಯೆ ನೆರಳು: ಒಂದೇ ದಿನವಿರುವಂತೆ ಮಾಜಿಯಾಗುವ ಈಶ್ವರಪ್ಪ

Exit mobile version