Site icon Vistara News

ಹಂಪಿ ದೇವಾಲಯದ ಮುಂದಿನ ಬೀದಿಯಲ್ಲಿ ಬೆಂಕಿ ಆಕಸ್ಮಿಕ, ಹೊತ್ತಿ ಉರಿದ ಅಂಗಡಿಗಳು

hampi fire

ವಿಜಯನಗರ: ವಿಶ್ವವಿಖ್ಯಾತ ಹಂಪಿಯ ವಿರೂಪಾಕ್ಷ ದೇವಾಲಯದ ಮುಂದಿನ ಬೀದಿಯಲ್ಲಿರುವ ಅಂಗಡಿಯೊಂದರಲ್ಲಿ ಬೆಂಕಿ ಕಾಣಿಸಿಕೊಂಡು ಬಳಿಕ ಗ್ಯಾಸ್‌ ಸಿಲಿಂಡರ್‌ ಬ್ಲಾಸ್ಟ್‌ ಆದ ಪರಿಣಾಮ ಹಲವಾರು ಅಂಗಡಿಗಳು ಹೊತ್ತಿ ಉರಿದಿವೆ. ಅದೃಷ್ಟವಶಾತ್‌ ಯಾವುದೇ ಪ್ರಾಣಹಾನಿ, ಗಾಯ ಆಗಿಲ್ಲ.

ಮೊದಲು ಬಟ್ಟೆ ಅಂಗಡಿಯಲ್ಲಿ ಬೆಂಕಿ ಹೊತ್ತಿಕೊಂಡಿದೆ. ಬಳಿಕ ಪಕ್ಕದ ಅಂಗಡಿಗಳು, ಛತ್ರಕ್ಕೆ ಬೆಂಕಿ ಪಸರಿಸಿದೆ. ಬೆಂಕಿಯಿಂದ ಗ್ಯಾಸ್‌ ಸಿಲಿಂಡರ್‌ಗಳು ಸ್ಫೋಟಗೊಂಡಿವೆ. ಬಟ್ಟೆ ಅಂಗಡಿ ಬೆಂಕಿಯಲ್ಲಿ ಭಸ್ಮವಾಗಿದೆ. ಸಿಲಿಂಡರ್ ಬ್ಲಾಸ್ಟ್ ಹೊಡೆತಕ್ಕೆ ಮ್ಯಾಂಗೋ ಟ್ರೀ ಹೊಟೇಲ್ ಸುಟ್ಟು ಕರಕಲಾಗಿದೆ. ಹಂಪಿಯ ಜನತಾ ಪ್ಲಾಟ್‌ನಲ್ಲಿರುವ ಅಂಗಡಿಗಳು, ಅನ್ನಪೂರ್ಣೇಶ್ವರಿ ಛತ್ರ ಸುಟ್ಟುಹೋಗಿವೆ.

ಇದಕ್ಕೂ ಮುನ್ನ ಜನರನ್ನು ಸ್ಥಳಾಂತರಿಸಿದ್ದರಿಂದ ಪ್ರಾಣಾಪಾಯವಾಗಿಲ್ಲ. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಸ್ಥಳೀಯರು, ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ಜೀವಗಳು ಉಳಿದಿವೆ. ಹಂಪಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Fire Incident | ಗೋಡೌನ್​​ ಹೊರಗೆ ನಿಲ್ಲಿಸಿದ್ದ ವಾಹನಗಳಿಗೆ ಬೆಂಕಿ; 6 ಕಾರುಗಳು, 7 ಬೈಕ್​ಗಳು, ಆಟೋ ಭಸ್ಮ

Exit mobile version