ವಿಜಯನಗರ: ರಾತ್ರಿ ೧೨ ಗಂಟೆ ಬಳಿಕ ಡಿಜೆಗೆ ಅವಕಾಶವಿಲ್ಲ ಎಂಬ ಪೊಲೀಸರ ಆದೇಶವನ್ನು ಉಲ್ಲಂಘಿಸಿದ ಕಾರಣಕ್ಕೆ ಪೊಲೀಸರು ಮತ್ತು ಆಯೋಜಕರ ನಡುವೆ ಭಾರಿ ವಾಗ್ವಾದ ಉಂಟಾಗಿದೆ. ಒಂದು ಹಂತದಲ್ಲಿ ಇಲ್ಲಿನ ಗಣೇಶ ಮೂರ್ತಿಯನ್ನು ಪೊಲೀಸ್ ಠಾಣೆಗೇ ಒಯ್ದು ಇಡುತ್ತೇವೆ ಎಂದು ಆಯೋಜಕರು ಎಚ್ಚರಿಕೆ ನೀಡಿದರು.
ಹೊಸಪೇಟೆಯಲ್ಲಿ ಐದು ದಿನದ ಗಣೇಶೋತ್ಸವ ನಡೆದಿದೆ. ಆದರೆ, ಪೊಲೀಸರು ರಾತ್ರಿ ೧೨ರ ಬಳಿಕ ಡಿಜೆಗೆ ಅನುಮತಿ ನೀಡಿರಲಿಲ್ಲ. ಭಾನುವಾರ ರಾತ್ರಿ ಇಲ್ಲಿನ ಗಣೇಶ ಮೂರ್ತಿಯ ಶೋಭಾಯಾತ್ರೆ ಆಯೋಜನೆಗೊಂಡಿತ್ತು. ಹೊಸಪೇಟೆಯ ಪುಣ್ಯಮೂರ್ತಿ ಸರ್ಕಲ್ ಮೂಲಕ ಗಣೇಶ ವಿಸರ್ಜನೆಗೆ(Ganesh Chaturthi) ಗಣೇಶ ಮೂರ್ತಿ ತೆರಳಬೇಕಿತ್ತು. ಆದರೆ ನಿಯಮ ಬಾಹಿರ ಡಿಜೆ ಹಚ್ಚಿದ ಹಿನ್ನೆಲೆಯಲ್ಲಿ ಪೊಲೀಸರಿಗೂ ಹಾಗೂ ಯುವಕರ ಮಧ್ಯೆ ವಾಗ್ವಾದ ನಡೆಯಿತು.
ಸರ್ಕಲ್‌ನಲ್ಲಿ ಜೋರಾಗಿ ಡಿಜೆ ಹಚ್ಚಿದ ಹಿನ್ನೆಲೆಯಲ್ಲಿ ಪೊಲೀಸರು ಡಿಜೆ ಸೀಜ್ ಮಾಡಿದ್ದಾರೆ. ಡಿಜೆ ಸೀಜ್ ಮಾಡಿದ್ದಕ್ಕೆ ಯುವಕರ ಆಕ್ರೋಶ ಹೊರ ಹಾಕಿದ್ದಾರೆ. ಸೀಜ್ ಆದ ನಂತರ ಡಿಜೆ ಕೊಡಿ ಇಲ್ಲದಿದ್ದರೆ ಗಣೇಶ ಮೂರ್ತಿಯನ್ನು ಠಾಣೆಯಲ್ಲಿ ಬಿಟ್ಟು ಹೋಗುತ್ತೇವೆ ಎಂದು ಪೊಲೀಸರ ಕುರಿತು ಯುವಕರು ಆಕ್ರೋಶ ಹೊರ ಹಾಕಿದರು.
ಹೈಡ್ರಾಮಾ ಬಳಿಕ ಕೆಲಕಾಲ ಪುಣ್ಯಮೂರ್ತಿ ಸರ್ಕಲ್ ಗೊಂದಲ ಗೂಡಾಗಿತ್ತು. ಕೊನೆಗೆ ಹೇಗೋ ಸಂಧಾನವಾಗಿ ಗಣೇಶ ಮೂರ್ತಿಯ ಮೆರವಣಿಗೆ ಮುಂದುವರಿದಿದೆ.
ಇದನ್ನೂ ಓದಿ | Ganesh Chaturthi | ಸಿಲಿಕಾನ್ ಸಿಟಿಯಲ್ಲಿ ಎರಡು ದಿನದಲ್ಲಿ 1.6 ಲಕ್ಷ ಗಣೇಶ ಮೂರ್ತಿಗಳ ವಿಸರ್ಜನೆ!